ರಾತ್ರಿ ಹೊತ್ತಿನಲ್ಲಿಯೂ ವೇಗವಾಗಿ ಬೈಕ್ ಓಡಿಸುತ್ತಿದ್ದ ಶಿರಸಿಯ ಆದಿತ್ಯ ಪೂಜಾರಿ ಅವರು ಅಪಘಾತಕ್ಕೀಡಾಗಿದ್ದಾರೆ. ಆ ಅಪಘಾತದಲ್ಲಿ ಅವರ ತಲೆ, ಮುಖ, ಕೈ-ಕಾಲಿಗೆ ಗಾಯವಾಗಿದೆ.
ಶಿರಸಿಯ ಬೊಪ್ಪನಳ್ಳಿ ಬಳಿಯ ಮಾವಿನಸರದಲ್ಲಿ ಆದಿತ್ಯ ರಾಜು ಪೂಜಾರಿ ಅವರು ವಾಸವಾಗಿದ್ದಾರೆ. 19 ವರ್ಷದ ಅವರಿಗೆ ವೇಗವಾಗಿ ಬೈಕ್ ಓಡಿಸುವುದು ಎಂದರೆ ಎಲ್ಲಿಲ್ಲದ ಖುಷಿ. ಹೀಗಾಗಿ ರಾತ್ರಿ ಅವಧಿಯಲ್ಲಿಯೂ ಅವರು ಬೈಕಿನ ವೇಗವನ್ನು ಕಡಿಮೆ ಮಾಡುತ್ತಿಲ್ಲ.
ಮಾರ್ಚ 23ರ ಸಂಜೆ ಮಾವಿನಸರಕ್ಕೆ ಹೋಗಿದ್ದ ಅವರು ಅದಾದ ನಂತರ ರಾತ್ರಿ 10.45ಕ್ಕೆ ಬೆಳಲೆ ಕಡೆಯಿಂದ ದಾನಂದಿ ಕಡೆ ಸಂಚರಿಸುತ್ತಿದ್ದರು. ಉಬ್ಬುತಗ್ಗಿನ ರಸ್ತೆಯಲ್ಲಿಯೂ ಅವರು ಬೈಕಿನ ವೇಗ ಕಡಿಮೆ ಮಾಡಿರಲಿಲ್ಲ. ಪರಿಣಾಮ ಆ ಬೈಕು ಸ್ಕಿಡ್ ಆಯಿತು. ಆದಿತ್ಯ ಪೂಜಾರಿ ಅವರು ರಸ್ತೆ ಮೇಲೆ ಬಿದ್ದು ಪೆಟ್ಟು ಮಾಡಿಕೊಂಡರು. ಡಾಂಬರ್ ರಸ್ತೆ ಮೇಲೆ ಬಿದ್ದ ಪರಿಣಾಮ ಆದಿತ್ಯ ಪೂಜಾರಿ ಅವರ ತಲೆಗೆ ನೋವಾಯಿತು. ಮುಖ, ಕೈ, ಕಾಲುಗಳಿಂದಲೂ ರಕ್ತ ಸುರಿಯಿತು.
ಈ ಅಪಘಾತದ ಬಗ್ಗೆ ಜನಾರ್ಧನ ಗಂಗಾಧರ ಪೂಜಾರಿ ಅವರು ಮಾಹಿತಿ ನೀಡಿದರು. ಅತಿವೇಗ ಅಪಘಾತಕ್ಕೆ ಕಾರಣವಾದ ಕಾರಣ ಆದಿತ್ಯ ರಾಜು ಪೂಜಾರಿ ಅವರ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದರು. ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವೇಗವಾಗಿ ಬೈಕ್ ಓಡಿಸಿ ಬಿದ್ದ ತಪ್ಪಿಗೆ ಆದಿತ್ಯ ಪೂಜಾರಿ ಅವರು ಕಾನೂನು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.