ಹೊನ್ನಾವರ ಕಡೆಯಿಂದ ಸಾಗರ ಮಾರ್ಗವಾಗಿ ಬೆಂಗಳೂರಿಗೆ ಹೊರಟಿದ್ದ ಶ್ರೀಕುಮಾರ ಬಸ್ಸು ಅಪಘಾತಕ್ಕೀಡಾಗಿದೆ. ಬಸ್ಸಿನಲ್ಲಿದ್ದ ಒಂದೇ ಕುಟುಂಬದ ಮೂವರಿಗೆ ಗಂಭೀರಗಾಯವಾಗಿದ್ದು, ಜೊತೆಗೆ 18 ಜನರಿಗೆ ಅಲ್ಲಲ್ಲಿ ಪೆಟ್ಟಾಗಿದೆ.
Advertisement. Scroll to continue reading.
ಫೆಬ್ರವರಿ 8ರ ರಾತ್ರಿ ಹೊನ್ನಾವರದಿಂದ ಬೆಂಗಳೂರಿಗೆ ಶ್ರೀಕುಮಾರ ಬಸ್ಸು ಹೊರಟಿತ್ತು. ಮೂಡ್ಕಣಿಯ ಗಿರೀಶ ನಾಯ್ಕ ಅವರು ಆ ಬಸ್ಸು ಓಡಿಸುತ್ತಿದ್ದರು. ಸಾಗರ ರಸ್ತೆ ಮಾರ್ಗವಾಗಿ ಅವರು ಬೆಂಗಳೂರಿಗೆ ಬಸ್ಸು ಓಡುವ ತವಕದಲ್ಲಿದ್ದರು. ಬಸ್ಸಿನ ವೇಗ ಎಂದಿಗಿAತ ಜಾಸ್ತಿಯಿದ್ದ ಪರಿಣಾಮ ಆಳಂಕಿ ಪಾಕ್ಟರಿ ಕ್ರಾಸಿನ ಬಳಿ ಆ ಬಸ್ಸು ಪಲ್ಟಿಯಾಯಿತು. ಹೊನ್ನಾವರ ಗುಂಡುಬಾಳದ ಸುರೇಶ ಕನ್ಯಾ ಗೌಡ (36), ಆಶಾ ಸುರೇಶ ಗೌಡ (31) ಹಾಗೂ ಭೂಮಿ ಸುರೇಶ ಗೌಡ (2) ಅವರು ಈ ಅಪಘಾತದಿಂದ ಗಂಭೀರ ಪ್ರಮಾಣದಲ್ಲಿ ನೋವು ಅನುಭವಿಸಿದರು.
ಇದರೊಂದಿಗೆ ಆ ಬಸ್ಸಿನಲ್ಲಿದ್ದ ಗುಣವಂತೆಯ ನರಸಿಂಹ ಕ್ಷೇತ್ರ ಗೌಡ (25) ಶ್ರೇಯಾನ್ ಸುರೇಶ ಗೌಡ (3), ಮುರುಡೇಶ್ವರ ನ್ಯಾಶನಲ್ ಕಾಲೋನಿಯ ಮಹಮದ್ ಇಯಾನ್ ಸಯ್ಯದ್ ಮೆಹಬೂಬ್ (25)
ಹೊನ್ನಾವರ ದುರ್ಗಾಕೇರಿಯ ಉಮಾ ಸುರೇಶ ಮೇಸ್ತಾ (28), ಭಟ್ಕಳ ಹಾಡುವಳ್ಳಿಯ ಸುಚಿತ್ರಾ ವಿಠ್ಠಲ ನಾಯ್ಕ (22), ಪ್ರವೀಣ ಮಂಜಪ್ಪ ನಾಯ್ಕ, ಹೊನ್ನಾವರ ಚರ್ಚ ರಸ್ತೆಯ ಜೋಯಿಸ್ ರಾಕಿ ರೊಡ್ರಗೀಸ್, ಪ್ರಾಯ (25) ಹೊನ್ನಾವರ ಬಾರಗದ್ದೆಯ ಪ್ರಿಯಾಂಕ ಕೃಷ್ಣ ವೆರ್ಣೇಕರ (25), ಭಟ್ಕಳ ಸಬತ್ತಿಯ ಪೂಜಾರ ಈರಪ್ಪ ನಾಯ್ಕ (21), ಹೊನ್ನಾವರ ನಾಜುಗಾರದ ಗಾಯತ್ರಿ ನಾರಾಯಣ ಗೌಡ (22), ಸಾಗರ ಮಾವಳ್ಳಿಯ ಸುರೇಶ ಸೋಮಯ್ಯ ನಾಯ್ಕ, ಹೊನ್ನಾವರ ಇಡಗುಂಜಿಯ ನಿವೇದಿತಾ ಹರೀಶ್ ನಾಯ್ಕ (26) ಅವರು ಗಾಯಮಾಡಿಕೊಂಡರು. ಇದರೊಂದಿಗೆ ಹೊನ್ನಾವರ ಮಾಳ್ಕೋಡಿನ ಸೌಮ್ಯ ಪ್ರಭಾಕರ ಹೆಗಡೆ (23), ಭಟ್ಕಳ ಬಂದರು ರಸ್ತೆಯ ಅನ್ನಪೂರ್ಣಾ ನಾರಾಯಣ ಖಾರ್ವಿ (28), ಹೊನ್ನಾವರ ಕವಲಕ್ಕಿಯ ಸಂದ್ಯಾ ಗಜಾನನ ಹಗಡೆ (26), ಹೊನ್ನಾವರ ಇಡಗುಂಜಿಯ ಮನೋಜ ಪಂಡಿತ (24), ಕಾಸರಕೋಡಿನ ಸುಬ್ರಹ್ಮಣ್ಯ ಆಚಾರಿ (25) ಅವರಿಗೂ ಈ ಅಪಘಾತದಲ್ಲಿ ಗಾಯಗಳಾದವು.
ಅಪಘಾತದಿಂದ ನರಳಾಡುತ್ತಿದ್ದ ಪ್ರಯಾಣಿಕರನ್ನು ಆಂಬುಲೆನ್ಸಿನ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು. ಸಂಚಾರ ದಟ್ಟಣೆಯನ್ನು ಪೊಲೀಸರು ನಿಯಂತ್ರಿಸಿದರು. ಮಾಹಿತಿಗಳ ಪ್ರಕಾರ, ಎದುರಿನಿಂದ ಬಂದ ಸ್ಕೂಟಿ ಸವಾರನಿಗೆ ಬಸ್ಸು ಗುದ್ದುವುದಿದ್ದು, ಅದನ್ನು ತಪ್ಪಿಸುವ ಬರದಲ್ಲಿ ವೇಗವಾಗಿದ್ದ ಬಸ್ಸು ಪಲ್ಟಿಯಾಗಿದೆ.