`ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯ ಮಾದರಿಯಲ್ಲಿ ಜಿಲ್ಲಾಸ್ಪತ್ರೆಯ ಸೇವೆ ಒದಗಿಸಬೇಕು’ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಆಗ್ರಹಿಸಿದ್ದಾರೆ. ಈ ಬಗ್ಗೆ ಅವರು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅವರಿಗೆ ಮನವಿ ಮಾಡಿದ್ದಾರೆ.
Advertisement. Scroll to continue reading.
`ಕಾರವಾರದಲ್ಲಿ ಕಳೆದ 50ವರ್ಷಗಳಿಂದ ಜಿಲ್ಲಾಸ್ಪತ್ರೆ ನಡೆಯುತ್ತಿದೆ. 2014ರಲ್ಲಿ ವೈದ್ಯಕೀಯ ಶಿಕ್ಷಣ ಸಂಸ್ಥೆ ಶುರುವಾಗಿದ್ದು, ಜಿಲ್ಲಾಸ್ಪತ್ರೆಯನ್ನು ಮೆಡಿಕಲ್ ಕಾಲೇಜಿನ ಜೊತೆ ವಿಲೀನ ಮಡಲಾಗಿದೆ. ಹೀಗಾಗಿ ಇಲ್ಲಿನ ಜನ ಉಚಿತವಾಗಿ ಸಿಗುವ ಆರೋಗ್ಯ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಆದಾಯ ಕಡಿಮೆಯಿರುವ ರೋಗಿಗಳು ಆಸ್ಪತ್ರೆಗೆ ಬಂದರೂ ಶೇ 50ರಷ್ಟು ತಪಾಸಣೆ ಶುಲ್ಕ ಪಾವತಿಸಬೇಕಿದ್ದು, ನುರಿತ ತಜ್ಞರು ಸಹ ಇಲ್ಲಿಲ್ಲ’ ಎಂಬ ವಿಷಯದ ಬಗ್ಗೆ ಅವರು ಚರ್ಚಿಸಿದ್ದಾರೆ. `ಮಂಗಳೂರಿನಲ್ಲಿರುವ ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಎಂ ಆರ್ ಐ ಸ್ಕ್ಯಾನ್, ಟಿ ಎಂ ಟಿ ಬ್ರೊಂಕೊಸ್ಕೋಪಿ, ಕಾಲನೋಸ್ಕೋಪಿ, ಕ್ಯಾತ್‌ಲಾಬ್ ಹಾಗೂ ತಜ್ಞ ವೈದ್ಯರ ತಂಡವಿರುವುದರಿAದ ಅಲ್ಲಿನ ರೋಗಿಗಳಿಗೆ ಅನುಕೂಲವಾಗಿದೆ. ಅದೇ ಮಾದರಿಯಲ್ಲಿ ಕಾರವಾರದಲ್ಲಿಯೂ ಸೇವೆ ಸಿಗಬೇಕು’ ಎಂದವರು ಆಗ್ರಹಿಸಿದ್ದಾರೆ.
`ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಇರುವ ಹಟ್ಟಿಕೇರಿ ಪ್ರೆöÊಮರಿ ಹೆಲ್ತ್ ಸೆಂಟರ್‌ನಲ್ಲಿ ವೆನ್‌ಲಾಕ್ ಜಿಲ್ಲಾ ಆಸ್ಪತ್ರೆ ಮಾದರಿಯಲ್ಲಿ ಆಸ್ಪತ್ರೆ ಮಂಜೂರು ಮಾಡಬೇಕು. ಹಟ್ಟಿಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರ ರಾಷ್ಟಿಯ ಹೆದ್ದಾರಿ 66ಕ್ಕೆ ಹೊಂದಿಕೊAಡಿದ್ದು ರಾಷ್ಟಿçÃಯ ಹೆದ್ದಾರಿ 52ಕ್ಕೂ ಸಮೀಪವಿದೆ. ಯೋಜಿತ ವಿಮಾನ ನಿಲ್ದಾಣ ಹಾಗೂ ನೌಕಾ ನೆಲೆಯ ವಜ್ರಕೋಶಕ್ಕೂ ಹತ್ತಿರವಿದೆ. ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿ ಆಸ್ಪತ್ರೆ ಆದರೆ ತುರ್ತು ಸನ್ನಿವೇಶಗಳಿಗೂ ನೆರವಾಗುತ್ತದೆ’ ಎಂದವರು ಹೇಳಿದ್ದಾರೆ. `ಕಾರವಾರದಲ್ಲಿರುವ ಜಿಲ್ಲಾಸ್ಪತ್ರೆಯನ್ನು ಶಿರಸಿಗೆ ಸ್ಥಳಾಂತರಿಸುವ ಬಗ್ಗೆ ಮಾಹಿತಿಯಿದ್ದು, ಕರಾವಳಿ ಭಾಗಕ್ಕೆ ಪ್ರತ್ಯೇಕ ಆಸ್ಪತ್ರೆ ನೀಡುವುದು ಅನಿವಾರ್ಯ’ ಎಂದವರು ಪ್ರತಿಪಾದಿಸಿದ್ದಾರೆ.