ಬೈಕ್ ಹಾಗೂ ಟಿಪ್ಪರ್ ನಡುವೆ ಮುಂಡಗೋಡದಲ್ಲಿ ಅಪಘಾತ ನಡೆದಿದ್ದು, ಬೈಕ್ ಸವಾರ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಮುಂಡಗೋಡಿನ ಬಾಚಣಕಿ ಬಳಿ ಈ ಅಪಘಾತ ನಡೆದಿದ್ದು, ಜೇನಮುರಿ ಗ್ರಾಮದ ಬಾಬು ಪಿಂಗಳೆ ಅವರು ಸಾವನಪ್ಪಿದವರಾಗಿದ್ದಾರೆ.
Advertisement. Scroll to continue reading.
ಚವಡಳ್ಳಿ ಗ್ರಾಮದ ಟಿಪ್ಪರ್ ಚಾಲಕ ಜಾಹೀದ್ ಮೌಲಾಸಾಬ ತೋರಗಲ್ ಅವರು ವೇಗವಾಗಿ ಟಿಪ್ಪರ್ ಓಡಿಸಿದ್ದೇ ಈ ಅಪಘಾತಕ್ಕೆ ಕಾರಣ. ಹುಬ್ಬಳ್ಳಿ-ಶಿರಸಿ ರಸ್ತೆಯಲ್ಲಿ ಹುಬ್ಬಳ್ಳಿ ಕಡೆಯಿಂದ ಮುಂಡಗೋಡ ಕಡೆಗೆ ಬರುತ್ತಿದ್ದ ಟಿಪ್ಪರ್ ರಸ್ತೆಯ ಬಲಬದಿಗೆ ನುಗ್ಗಿ ಬೈಕಿಗೆ ಡಿಕ್ಕಿಯಾಗಿದೆ. ಮುಂಡಗೋಡ ಕಡೆಯಿಂದ ಬಾಚಣಕಿ ಕಡೆಗೆ ಹೋಗುತ್ತಿದ್ದ ಬಾಬು ಪಿಂಗಳೆ (43) ಅವರು ಬೈಕಿನಲ್ಲಿದ್ದು, ಡಿಕ್ಕಿ ರಭಸಕ್ಕೆ ಅವರ ತಲೆಗೆ ಗಂಭೀರವಾಗಿ ಗಾಯವಾಗಿದೆ. ಅಲ್ಲಿಯೇ ಅವರು ರಕ್ತದ ಮೊಡವಿನಲ್ಲಿ ಬಿದ್ದು ಕೊನೆಯುಸಿರೆಳೆದಿದ್ದಾರೆ.
ಆ ಭಾಗದ ಚಂದ್ರು ಲಮಾಣಿ ಅವರು ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮುಂಡಗೋಡು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಅದಾದ ನಂತರ ಆರೋಪಿ ಟಿಪ್ಪರ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.
`ಅತಿ ವೇಗ ಅಪಘಾತಕ್ಕೆ ಕಾರಣ’