ಮುಂಡಗೋಡು ರೈತರ ಬಹುಕಾಲದ ಬೇಡಿಕೆಗಳಲ್ಲಿ ಒಂದಾದ ಬಗರ್ ಹುಕುಂ ಸಾಗುವಳಿ ಸಕ್ರಮ ಪ್ರಕ್ರಿಯೆ ವಿಷಯವಾಗಿ ಶಾಸಕ ಶಿವರಾಮ ಹೆಬ್ಬಾರ್ ಮಂಗಳವಾರ ಸಭೆ ನಡೆಸಿದ್ದು, 30 ಪ್ರಕರಣ ವಿಚಾರಣೆ ನಡೆಸಿದ್ದಾರೆ. ಪ್ರಿ-ಗ್ರಾಂಟ್ ಸ್ಕೆಚ್ ಹಂತದಲ್ಲಿರುವ ನಾಲ್ಕು ಪ್ರಕರಣಗಳ ಸಕ್ರಮಕ್ಕೆ ಅವರು ಸಮಿತಿ ಮೂಲಕ ಶಿಫಾರಸ್ಸು ಮಾಡಿದ್ದಾರೆ.
Advertisement. Scroll to continue reading.
ಮಂಗಳವಾರ ತಾಲೂಕು ಆಡಳಿತ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಿದ ಶಾಸಕ ಶಿವರಾಮ್ ಹೆಬ್ಬಾರ್, ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ಅರ್ಜಿಗಳ ಕುರಿತು ವಿಚಾರಿಸಿದರು. 30 ಪ್ರಕರಣಗಳ ಪೈಕಿ ಒಂದು ತಕರಾರಿನಲ್ಲಿದ್ದ ಕಾರಣ ಆ ಬಗ್ಗೆ ಚರ್ಚಿಸಲಿಲ್ಲ. ಈ ಸಭೆಯಲ್ಲಿ ಬಾಕಿ ಉಳಿದಿರುವ ಅರ್ಜಿಗಳ ಕುರಿತು ಸುದೀರ್ಘ ಚರ್ಚೆ ನಡೆದಿದ್ದು, ಕೊನೆಗೆ ಒಟ್ಟು 04 ಪ್ರಕರಣಗಳಲ್ಲಿ ಜಮೀನು ಸಕ್ರಮಗೊಳಿಸಲು ಸಮಿತಿಯು ಶಿಫಾರಸ್ಸು ನಡೆಯಿತು.
Advertisement. Scroll to continue reading.
Advertisement. Scroll to continue reading.
`ಅರ್ಹ ರೈತರಿಗೆ ಯಾವುದೇ ತೊಂದರೆಯಾಗದAತೆ ನಿಯಮಾನುಸಾರ ಸಾಗುವಳಿ ಚೀಟಿ ನೀಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು’ ಎಂದು ಶಿವರಾಮ ಹೆಬ್ಬಾರ್ ಅವರು ಈ ವೇಳೆ ಸೂಚಿಸಿದರು. ತಹಶೀಲ್ದಾರ್ ಶಂಕರ ಗೌಡಿ ಇತರರಿದ್ದರು.