ದಾಂಡೇಲಿ ಗಾಂಧಿನಗರದ ನಿಲೇಶ ಗಾಗಡೆ ಅವರ ಮನೆಗೆ ಮಹಾರಾಷ್ಟ್ರದಿಂದ ನೆಂಟರು ಬಂದಿದ್ದು, ಊರಿಗೆ ಹೋಗುವಾಗ ವಿವಿಧ ವಸ್ತುಗಳನ್ನು ಕೊಂಡೊಯ್ದಿದ್ದಾರೆ. ಮನೆ ತುಂಬ ಗಲೀಜು ಮಾಡಿದ ಆ ನೆಂಟರು ಆಧಾರ್ ಕಾರ್ಡ, ರೇಶನ್ ಕಾರ್ಡ ಜೊತೆ ಗ್ಯಾಸ್ ಬುಕ್ ಸಹ ಬಿಡದೇ ಕದ್ದಿದ್ದಾರೆ!
ದಾಂಡೇಲಿಯ ನಿಲೇಶ ಮಹೇಶ ಗಾಗಡೆ ಅವರು ತಮ್ಮ ಕುಟುಂಬದೊoದಿಗೆ ಗಾಂಧಿನಗರದಲ್ಲಿ ವಾಸವಾಗಿದ್ದಾರೆ. ಮೇ 5ರಂದು ಅವರ ಮನೆಗೆ ನಾಲ್ವರು ನೆಂಟರು ಆಗಮಿಸಿದ್ದಾರೆ. ಪೂಣೆಯ ಯರೋಡಾದಿಂದ ಆಗಮಿಸಿದ ಜಯಶ್ರೀ ಅನೀಲ ಅಂಭಗೆ ಅವರನ್ನು ಕುಟುಂಬದವರು ಸ್ವಾಗತಿಸಿದ್ದಾರೆ. ಮಹಾರಾಷ್ಟçದ ದೊಂಡಾಯಿಚಾದಿAದ ಬಂದಿದ್ದ ಸುನೀಲ ಮಲ್ಕೆ, ಅವರ ಪತ್ನಿ ರಾಜಶ್ರೀ ಮಲ್ಕೆ, ಮಗ ಮನೀಷ್ ಮಲ್ಕೆ ಅವರನ್ನು ಸಹ ನಿಲೇಶ್ ಗಾಗಡೆ ಕುಟುಂಬದವರು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಆ ದಿನ ಅವರ ಮನೆಯಲ್ಲಿಯೇ ಊಟ ಮಾಡಿದ ನೆಂಟರೆಲ್ಲರೂ ರಾತ್ರಿ ಅಲ್ಲಿಯೇ ವಸತಿ ಹೂಡಿದ್ದಾರೆ.
ಮರುದಿನ ರಾತ್ರಿ ನಿಲೇಶ ಗಾಗಡೆ ಅವರ ಬಳಿ ನೆಂಟರು ಜಗಳ ಶುರು ಮಾಡಿದ್ದಾರೆ. ಈ ಜಗಳ ನೋಡಿದ ನಿಲೇಶ್ ಗಾಗಡೆ ಅವರ ಸಹೋದರಿ ನಿರ್ಜನಾ ಮಹೇಶ ಗಾಗಡೆ ಅವರು ಸಂಬAಧಿಕರ ಮನೆಗೆ ಹೋಗಿದ್ದಾರೆ. ಈ ವೇಳೆ ನಿಲೇಶ್ ಗಾಗಡೆ ಅವರು ಆ ನಾಲ್ವರು ನೆಂಟರು ಹೊಡೆದು ನೋವು ಮಾಡಿದ್ದಾರೆ. ಮನೆಯಲ್ಲಿದ್ದ ನಿಲೇಶ್ ಗಾಗಡೆ ಅವರ ತಾಯಿ ಮೀನಾ ಗಾಗಡೆ ಅವರ ಕೂದಲು ಹಿಡಿದು ಎಳೆದಿದ್ದಾರೆ. ಅದಾದ ಮರುದಿನ ನಿಲೇಶ್ ಗಾಗಡೆ ಅವರು ಎಂದಿನAತೆ ಕೆಲಸಕ್ಕೆ ಹೋಗಿದ್ದಾರೆ. ಈ ವೇಳೆ ಆ ನಾಲ್ವರು ನೆಂಟರು ಸೇರಿ ಮನೆ ತುಂಬ ಮಲ-ಮೂತ್ರ ವಿಸರ್ಜನೆ ಮಾಡಿ ಗಬ್ಬು ಮಾಡಿದ್ದಾರೆ.
ಜೊತೆಗೆ ಮನೆಯಲ್ಲಿದ್ದ ಕಪಾಟು ಒಡೆದು ಅಲ್ಲಿದ್ದ ಚಿನ್ನದ ಆಭರಣ ದೋಚಿದ್ದಾರೆ. 20 ಸಾವಿರ ರೂ ಹಣ ಕದ್ದಿದ್ದಾರೆ. ಜೊತೆಗೆ ಗ್ಯಾಸ್ ಬುಕ್, ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ, ರೇಶನ್ ಕಾರ್ಡನ್ನು ಬಿಡದೇ ಒಯಿದ್ದಾರೆ. ಮನೆಯಲ್ಲಿದ್ದ 12 ತಾಮ್ರದ ಪಾತ್ರೆಗಳನ್ನು ಸಹ ಅವರು ಕೊಂಡೊಯ್ದಿದ್ದಾರೆ. ಸಂಬAಧಿಕರ ಮನೆಗೆ ಹೋಗಿದ್ದ ನಿರ್ಜನಾ ಗಾಗಡೆ ಅವರು ಮೇ 7ರ ಮಧ್ಯಾಹ್ನ ಮನೆಗೆ ಬಂದಿದ್ದು, ಮನೆ ತುಂಬ ಗೆಬ್ಬೆದ್ದಿರುವುದನ್ನು ನೋಡಿ ಕಂಗಾಲಾಗಿದ್ದಾರೆ. ಅದಾದ ನಂತರ ವಸ್ತುಗಳೆಲ್ಲವೂ ಕಾಣೆಯಾಗಿದನ್ನು ನೋಡಿ ಪೊಲೀಸ್ ದೂರು ನೀಡಿದ್ದಾರೆ.