• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Naga Sadhu casts a spell Couple's gold vanishes!

ಮೋಡಿ ಮಾಡಿದ ನಾಗಾಸಾಧು: ದಂಪತಿ ಚಿನ್ನ ಮಾಯ!

September 24, 2026
Sirsi Competitions and celebrations marking Navaratri!

ಶಿರಸಿ | ನವರಾತ್ರಿ ಅಂಗವಾಗಿ ಸ್ಪರ್ಧೆ-ಸಂಭ್ರಮ!

September 24, 2026
If you wear those shoes, a thorn is sure to prick you!

ಆ ಬೂಟು ಧರಿಸಿದರೆ ಮುಳ್ಳು ಚುಚ್ಚುವುದು ಖಚಿತ!

ADVERTISEMENT
  • Home
  • Janamata
Thursday, September 24, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕಾಳಂಗಿ ಸೊಸೈಟಿಯಲ್ಲಿ ಅಕ್ರಮ: ಠೇವಣಿದಾರರಿಗೆ ಶಾಸಕ ಶಿವರಾಂ ಅಭಯ!

Achyutkumar by Achyutkumar
Illegality in Kalangi Society MLA Shivaram warns depositors!
Share on FacebookShare on WhatsappShare on Twitter
ADVERTISEMENT

ಶಿರಸಿ ದಾಸನಕೊಪ್ಪದ ಕಾಳಂಗಿ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಲ್ಲಿ ಕೋಟ್ಯಂತರ ರೂ ಅವ್ಯವಹಾರ ನಡೆದಿದ್ದು, ಅಕ್ರಮದ ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದೆ. `ರೈತರ ಸಂಸ್ಥೆ ಹಾಳು ಮಾಡಿ, ರೈತರ ಹಣ ತಿಂದು ಪರಾರಿಯಾದವರು ತಪ್ಪಿಸಿಕೊಳ್ಳಲು ಬಿಡುವುದಿಲ್ಲ’ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ್ ಪ್ರತಿಭಟನಾ ನಿರತರಿಗೆ ಭರವಸೆ ನೀಡಿದ್ದಾರೆ.

ಕಾಳಂಗಿ ಸೊಸೈಟಿ ಎದುರು ನೂರಾರು ಸಂಖ್ಯೆಯ ರೈತರು ಅಹೋರಾತ್ರಿ ಧರಣಿ ಮಾಡುತ್ತಿದ್ದು, ಅವರಿಗೆ ಶಿವರಾಮ ಹೆಬ್ಬಾರ್ ಸಮಾಧಾನ ಮಾಡಿದ್ದಾರೆ. `ಕಾಳಂಗಿ ಸೊಸೈಟಿಯಲ್ಲಿ 8 ಕೋಟಿ ರೂ ಮೇಲ್ಪಟ್ಟು ಅವ್ಯವಹಾರ ಆದ ದೂರಿದೆ. ಆಡಳಿತ ಮಂಡಳಿಯವರೇ ಮುಖ್ಯ ಕಾರ್ಯನಿರ್ವಾಹಕರನ್ನು ಬಳಸಿ ಬೇನಾಮಿ ಹೆಸರಿನಲ್ಲಿ ಸಾಲ ತೆಗೆದು ಹಣ ಹೊಡೆದಿದ್ದಾರೆ. ಠೇವಣಿದಾರು ಕೇಳಿದರೂ ಹಣ ಮರಳಿಸಿಲ್ಲ’ ಎಂದು ಪ್ರತಿಭಟನಾಕಾರರು ದೂರಿದ್ದಾರೆ. `ಕಳೆದ 20 ದಿನದ ಹಿಂದೆ ಸಂಘದ ಆವಾರದಲ್ಲಿ ಪ್ರತಿಭಟಿಸಿದಾಗ ಸಹಕಾರಿ ಸಹಾಯಕ ನಿಬಂಧಕರು ಸ್ಥಳಕ್ಕಾಗಮಿಸಿ ಪ್ರಾಥಮಿಕ ತನಿಖೆ ನಡೆಸಿ, ಏಳು ದಿನದೊಳಗಡೆ ವರದಿ ನೀಡಲಾಗುತ್ತದೆ ಎಂಬ ಭರವಸೆ ನೀಡಿದ್ದರು. ಆದರೆ, ತನಿಖೆಯೂ ನಡೆದಿಲ್ಲ. ವರದಿಯನ್ನು ಬಹಿರಂಗಪಡಿಸಿಲ್ಲ’ ಎಂದು ಪ್ರತಿಭಟನಾಕಾರರು ಆಕ್ಷೇಪಿಸಿದರು.

ADVERTISEMENT

`ಆಡಳಿತ ಮಂಡಳಿಯ 12 ಸದಸ್ಯರ ಮೇಲೆಯೂ ನಮ್ಮ ಆರೋಪವಿದೆ. ಪ್ರತಿ ಸದಸ್ಯರಿಗೂ ಜವಾಬ್ದಾರಿಯಿದೆ. ಹಿಂದಿನ ಆಡಳಿತ ಮೇಲೆ ಆರೋಪ ಮಾಡಿ ಅಧಿಕಾರಕ್ಕೆ ಬಂದವರು ಭ್ರಷ್ಟಾಚಾರ ಮಾಡಿ ಸಂಘದ ಬಾಗಿಲು ಮುಚ್ಚಲು ಹೊರಟಿದ್ದಾರೆ. ಆಡಳಿತ ಮಂಡಳಿ ಅಮಾನತ್ತಿನಲ್ಲಿಟ್ಟು ತನಿಖೆ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. ರೈತರ ಸಮಸ್ಯೆ ಆಲಿಸಿದ ಶಿವರಾಮ ಹೆಬ್ಬಾರ್ `ಜನರು ಕಷ್ಟದಲ್ಲಿದ್ದಾಗ ಅವರ ಸಮಸ್ಯೆಗಳನ್ನು ಆಲಿಸುವುದು ನನ್ನ ಕರ್ತವ್ಯ. ಕಾಳಂಗಿ ಸೊಸೈಟಿಯ ಆಡಳಿತ ಮಂಡಳಿ ಚುನಾವಣೆಯ ಸಮಯದಲ್ಲೇ ಕೆಲ ವಿಚಾರಗಳನ್ನು ತಿಳಿಸಿದ್ದು, ರೈತರು ವಿವಿಧ ಆಸೆ ಹಿನ್ನಲೆ ಮತ ನೀಡಿದ್ದಾರೆ. ಚುನಾವಣೆ ವೇಳೆ ಒಳ್ಳೆಯವರ ಮಾತು ಕೇಳದ ಕಾರಣ ಪ್ರತಿಭಟನೆ ಮಾಡುವ ಸ್ಥಿತಿ ಬಂದಿದೆ’ ಎಂದರು. `ಕೆಡಿಸಿಸಿ ಬ್ಯಾಂಕ್ ವತಿಯಿಂದ 1800 ಕೋಟಿ ರೂ. ಸಾಲ ನೀಡಲಾಗಿದ್ದು, ಬ್ಯಾಂಕ್‌ನಲ್ಲಿ 4 ಸಾವಿರ ಕೋಟಿ ರೂ. ಠೇವಣಿ ಇದೆ. ಆ ಹಣವನ್ನು ರೈತರಿಗೆ ಸಹಾಯ ಮಾಡಲು ಬಳಸಲಾಗುತ್ತಿದೆ. ಸಹಕಾರಿ ಕ್ಷೇತ್ರದಲ್ಲಿ ಸೇವಾ ಮನೋಭಾವದಿಂದ ಕೆಲಸ ಮಾಡಬೇಕು’ ಎಂದರು.

`ರೈತರ ಹಾಗೂ ಸಂಘದ ಹಿತ ಬಯಸಬೇಕಾದ ಆಡಳಿತ ಮಂಡಳಿಯೇ ಈ ರೀತಿಯಾಗಿ ನಡೆದುಕೊಂಡರೆ ರೈತರನ್ನು ಯಾರು ಕಾಪಾಡಬೇಕು? ಅನ್ನದಾತ ಯಾವಾಗಲೂ ಸಂಕಷ್ಟದಲ್ಲೇ ಬದುಕುತ್ತಾನೆ. ಕಳೆದ ಬಾರಿ ಬೆಳೆ ಸಾಲ ತೀರಿಸಲು ರೈತರಿಗೆ ಹಣದ ಸಮಸ್ಯೆ ಎದುರಾಗಿತ್ತು. ಆಗ 2,500 ಕುಟುಂಬಗಳು ಸಂಕಷ್ಟಕ್ಕೆ ಸಿಲುಕದಂತೆ ಕೆಡಿಸಿಸಿ ಬ್ಯಾಂಕ್ ಮೂಲಕ ನೆರವು ನೀಡಲಾಗಿತ್ತು. ರೈತರನ್ನು ಕಟ್ ಬಾಕಿ ಸಮಸ್ಯೆಯಿಂದ ರಕ್ಷಿಸಲಾಗಿದೆ’ ಎಂದರು. `ರೈತರನ್ನು ಮೀಟರ್ ಬಡ್ಡಿ ಸಮಸ್ಯೆಯಿಂದ ಹೊರತೆಗೆಯಲು ಕಾಳಂಗಿ ಸೊಸೈಟಿಗೆ ಈಗಾಗಲೇ 45 ಕೋಟಿ ರೂ. ಸಾಲ ನೀಡಿದ್ದೇವೆ. ಕೆಲ ನಿರ್ದೇಶಕರು ನನ್ನ ಬಗ್ಗೆ ಮಾತನಾಡುತ್ತಾರೆ. ಅದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ’ ಎಂದರು. `ಸಾಲ ವಿತರಣೆಗೆ ಮುಖ್ಯ ಕಾರ್ಯನಿರ್ವಾಹಕನ ಸಹಿ ಅವಶ್ಯವಾಗಿದ್ದರಿಂದ ಪ್ರಭಾರಿ ಕಾರ್ಯನಿರ್ವಾಹಕನನ್ನು ನೇಮಿಸಿ ಸಾಲ ವಿತರಿಸಲಾಗಿದೆ. ಆಡಳಿತ ಮಂಡಳಿಯ ನಿರ್ದೇಶಕರ ಜಾಮೀನು ಪಡೆದು ಸಾಲ ನೀಡಲಾಗಿದೆ. ಎಲ್ಲ ದಾಖಲೆಗಳು ನನ್ನ ಕೈಯಲ್ಲಿವೆ. ರೈತರು ಆಕ್ರೋಶಕ್ಕೆ ಒಳಗಾಗುವ ಮುನ್ನವೇ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು. ತಪ್ಪಿನಲ್ಲಿ ಯಾರಾದರೂ ಭಾಗಿಯಾಗಿದ್ದರೆ, ಅವರು ಚುನಾವಣೆಗೆ ಹೋಗಿ ಜನರ ಎದುರು ನಿಲ್ಲಲಿ’ ಎಂದು ಶಿವರಾಮ ಹೆಬ್ಬಾರ್ ಅವರು ಸವಾಲು ಹಾಕಿದರು.

`ಆಡಳಿತ ಮಂಡಳಿಯನ್ನು ವಜಾಗೊಳಿಸಲು ಸಿದ್ಧತೆ ನಡೆದಿದೆ. ಮೇ 26ರ ನಂತರ ಬೆಳೆ ಸಾಲ ವಿತರಣೆಯೊಂದಿಗೆ ಕೆಡಿಸಿಸಿ ಬ್ಯಾಂಕ್ ವತಿಯಿಂದ ಲೆಕ್ಕಪರಿಶೋಧಕರ ವಿಶೇಷ ತಂಡ ರಚಿಸಲಾಗಿದೆ. ಹಾಲಿ ಹಾಗೂ ಹಿಂದಿನ ಆಡಳಿತ ಮಂಡಳಿಯ ಎಲ್ಲಾ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ’ ಎಂಬ ಭರವಸೆ ನೀಡಿದರು. `ಸೊಸೈಟಿಯ ವಿಷಯದ ಅಧಿಕಾರಿಗಳ ಸಭೆ ಕರೆಯಲಾಗಿದೆ. ಮುಂದಿನ ಕ್ರಮಗಳ ಕುರಿತು ಸುತ್ತೋಲೆ ಹೊರಡಿಸಲಿದ್ದು, ಯಾರೂ ಭಯಪಡುವ ಅಗತ್ಯವಿಲ್ಲ. ಎಷ್ಟೇ ಪ್ರಭಾವಿ ವ್ಯಕ್ತಿಯಾಗಿದ್ದರೂ ತಪ್ಪು ಮಾಡಿದವರನ್ನು ಬಿಡುವುದಿಲ್ಲ. ರೈತರ ಹಣದಲ್ಲಿ ಮೋಸ ಮಾಡಿದರೆ ನ್ಯಾಯಾಲಯವೂ ಕ್ಷಮಿಸುವುದಿಲ್ಲ’ ಎಂಬ ಎಚ್ಚರಿಕೆಯ ಸಂದೇಶ ರವಾನಿಸಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Naga Sadhu casts a spell Couple's gold vanishes!

ಮೋಡಿ ಮಾಡಿದ ನಾಗಾಸಾಧು: ದಂಪತಿ ಚಿನ್ನ ಮಾಯ!

September 24, 2026
Sirsi Competitions and celebrations marking Navaratri!

ಶಿರಸಿ | ನವರಾತ್ರಿ ಅಂಗವಾಗಿ ಸ್ಪರ್ಧೆ-ಸಂಭ್ರಮ!

September 24, 2026
If you wear those shoes, a thorn is sure to prick you!

ಆ ಬೂಟು ಧರಿಸಿದರೆ ಮುಳ್ಳು ಚುಚ್ಚುವುದು ಖಚಿತ!

September 24, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!