ದಾಂಡೇಲಿಗೆ ಬಂದಿದ್ದ ಗೋವಾದ ಕಾಂಗ್ರೆಸ್ ನಾಯಕ ಕೇತನ್ ಭಾಟಿಕರ್ ಅವರಿಗೆ ಹಾವು ಕಚ್ಚಿದೆ. ವಿಷ ನೆತ್ತಿಗೇರಿದ ಪರಿಣಾಮ ಅವರು ತಮ್ಮ 38ನೇ ವಯಸ್ಸಿನಲ್ಲಿಯೇ ಸಾವನಪ್ಪಿದ್ದಾರೆ.
ಗುರುವಾರ ರಾತ್ರಿ ಕೇತನ್ ಭಾಟಿಕರ್ ಅವರು ದಾಂಡೇಲಿಗೆ ಬಂದಿದ್ದರು. ಆ ರಾತ್ರಿ ಧಾರಾಕಾರ ಮಳೆಯಿದ್ದು, ಕರ್ನಾಟಕ-ಗೋವಾ ಗಡಿ ಭಾಗದಲ್ಲಿ ಅವರು ಕಾರಿನಿಂದ ಇಳಿದಿದ್ದರು. ಆ ವೇಳೆ ಅವರಿಗೆ ನಾಗರ ಹಾವು ಕಚ್ಚಿದೆ. ಕಾಲಿಗೆ ಹಾವು ಕಚ್ಚಿದ ತಕ್ಷಣ ಅವರನ್ನು ಗೋವಾದ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆದಿದ್ದು, ಪ್ರಾಥಮಿಕ ಚಿಕಿತ್ಸೆ ಸಿಗುವ ಮೊದಲೇ ಅವರು ಸಾವನಪ್ಪಿದ್ದಾರೆ.
ಗೋವಾ-ಕರ್ನಾಟಕ ಗಡಿ ಭಾಗದಲ್ಲಿ ಕರ್ಮಲ್ ಘಾಟ್ ಪ್ರದೇಶದಲ್ಲಿ ಅವರಿಗೆ ಕೇತನ್ ಭಾಟಿಕರ್ ನಾಗರ ಹಾವು ಕಚ್ಚಿದ್ದು, ಧಾರವಾಡೋರಾದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳುವ ಮುನ್ನವೇ ಅವರು ಮೃತಪಟ್ಟಿದ್ದಾರೆ. ಕೇತನ್ ಭಾಟಿಕರ್ ಅವರು ಗೋವಾ ಕಾಂಗ್ರೆಸ್‌ನ ಭರವಸೆಯ ನಾಯಕರಾಗಿದ್ದರು. ಫೋಂಡಾ ಉಪಚುನಾವಣೆಗೆ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಆದರೆ, ಹೈಕೋರ್ಟ್ ತೀರ್ಪಿನಿಂದಾಗಿ ಉಪಚುನಾವಣೆ ರದ್ದಾಗಿದ್ದು, ಹೈಕೋರ್ಟ್ ಆದೇಶದ ವಿರುದ್ಧ ಅವರು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಸದ್ಯ ಆ ಪ್ರಕರಣ ವಿಚಾರಣಾ ಹಂತದಲ್ಲಿದ್ದು, ಚುನಾವಣೆ ಎದುರಿಸಿ ಅವರು ಗೆಲ್ಲುವ ನಿರೀಕ್ಷೆಯಲ್ಲಿದ್ದರು.