ಸಿದ್ದಾಪುರದ ಚೌಡಮ್ಮ ಮಡಿವಾಳ ಅವರು ಚಿನ್ನದ ಸರ ಕಳೆದುಕೊಂಡಿದ್ದು, ಆ ಸರ ಪೊಲೀಸರಿಗೆ ಸಿಕ್ಕಿದೆ. ಚೌಡಮ್ಮ ಅವರ ಕುಟುಂಬದವರನ್ನು ಸಂಪರ್ಕಿಸಿದ ಪೊಲೀಸರು ಅದನ್ನು ಮರಳಿಸಿದ್ದಾರೆ. ಆ ದಿನ ಮಧ್ಯಾಹ್ನ ಅವರು ಓಡಾಡಿದ ಎಲ್ಲಾ ಕಡೆ ಹುಡುಕಿದರೂ ಚಿನ್ನದ ಸರ ಸಿಕ್ಕಿರಲಿಲ್ಲ.
ಹೀಗಾಗಿ ಚೌಡಮ್ಮ ಮಡಿವಾಳ ಅವರು ಪೊಲೀಸರ ಮೊರೆ ಹೋದರು. ಚಿನ್ನದ ಸರ ಕಾಣೆಯಾದ ವಿಷಯ ತಿಳಿಸಿದರು. ಈ ವಿಷಯ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರವರೆಗೆ ತಲುಪಿತು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ ಕೃಷ್ಣಮೂರ್ತಿ ಹಾಗೂ ಶಿರಸಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕಿ ಗೀತಾ ಪಾಟೀಲ್ ಅವರು ಅಜ್ಜಿಗೆ ಆದ ಅನ್ಯಾಯವನ್ನು ಗಮನಿಸಿದರು. ಸಿದ್ದಾಪುರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಜೆ ಬಿ ಸೀತಾರಾಮ ಅವರ ಮುಂದಾಳತ್ವದಲ್ಲಿ ಚಿನ್ನದ ಸರದ ಶೋಧ ಶುರುವಾಯಿತು.
ತನಿಖಾ ವಿಭಾಗದ ಪಿಸೈ ನಾಗಪ್ಪ ಬಿ ಹಾಗೂ ಶಾಂತಿನಾಥ ಪಾಸಾನೆ ಜೊತೆ ಸಿಬ್ಬಂದಿ ಮಣಿಕಂಠ, ಸಂದೀಪ್ ನಾಯ್ಕ, ಗಿರೀಶಯ್ಯ, ಮೋಹನ ಗಾವಡಿ, ಚೇತನ ಹಲಗೇರಿ ಸೇರಿ ಆ ಚಿನ್ನದ ಸರ ಹುಡುಕಿದರು. ಜೆ ಬಿ ಸೀತಾರಾಮ ಅವರು ಆ ಚಿನ್ನದ ಸರವನ್ನು ಕುಟುಂಬ ಸದಸ್ಯರಾದ ಕುಮಾರ ಗೌಡ ಅವರಿಗೆ ಹಸ್ತಾಂತರಿಸಿದರು. ಜೊತೆಗೆ `ಬೆಳೆಬಾಳುವ ವಸ್ತುಗಳ ಬಗ್ಗೆ ಕಾಳಜಿವಹಿಸಿ’ ಎಂದು ಕಿವಿಮಾತು ಹೇಳಿದರು.