ಶಿರಸಿಯ ಮಲ್ಲಿಕಾರ್ಜುನ ಫೈನಾನ್ಸಿಗೆ ಹೋಗಿದ್ದ ಶಾರದಾ ಲಮಾಣಿ ಅವರು ದಿಢೀರ್ ಆಗಿ ಕಾಣೆಯಾಗಿದ್ದಾರೆ. ಫೈನಾನ್ಸ್ ಮಾಲಕ ಸುರೇಶ ಮಂಡಕ್ಕಿ ಅವರನ್ನು ವಿಚಾರಿಸಿದಾಗ `ತಮಗೇನೂ ಗೊತ್ತಿಲ್ಲ’ ಎನ್ನುತ್ತಿದ್ದಾರೆ.
ಶಿರಸಿ ರಾಮನಬೈಲಿನ ಮಾರಿಗುಡಿ ಹಿಂದಿನ ಪ್ರದೇಶದಲ್ಲಿ ಉಮೇಶ ಲಮಾಣಿ ಅವರು ವಾಸವಾಗಿದ್ದಾರೆ. ಅವರ ಪುತ್ರಿ ಶಾರದಾ ಲಮಾಣಿ (20) ಅವರು ಮಲ್ಲಿಕಾರ್ಜುನ ಫೈನಾನ್ಸಿನಲ್ಲಿ ಕೆಲಸಕ್ಕಿದ್ದಾರೆ. ಎಂದಿನAತೆ ಮೇ 6ರಂದು ಶಾರದಾ ಅವರು ಮಲ್ಲಿಕಾರ್ಜುನ ಫೈನಾನ್ಸಿಗೆ ಹೋಗಿದ್ದಾರೆ. ಸಂಜೆಯವರೆಗೂ ಅವರು ಅಲ್ಲಿ ಕೆಲಸ ಮಾಡಿದ್ದಾರೆ. ಅದಾದ ನಂತರ ಅಲ್ಲಿಂದಲೇ ಅವರು ನಿಗೂಢವಾಗಿ ಕಾಣೆಯಾಗಿದ್ದಾರೆ.
ರಾತ್ರಿಯಾದರೂ ಮಗಳು ಮನೆಗೆ ಬಾರದ ಕಾರಣ ಉಮೇಶ ಲಮಾಣಿ ಅವರು ಆತಂಕಕ್ಕೆ ಒಳಗಾಗಿದ್ದಾರೆ. ಶಾರದಾ ಲಮಾಣಿ ಅವರಿಗಾಗಿ ಎಲ್ಲಾ ಕಡೆ ಹುಡುಕಾಟ ಮಾಡಿದ್ದಾರೆ. ಎಲ್ಲಿಯೂ ಸಿಗದ ಕಾರಣ ಮಲ್ಲಿಕಾರ್ಜುನ ಫೈನಾನ್ಸ್ ಮಾಲಕ ಸುರೇಶ ಮಂಡಕ್ಕಿ ಅವರಲ್ಲಿ ವಿಚಾರಿಸಿದ್ದಾರೆ. `ಸಂಜೆ 6 ಗಂಟೆಗೆ ಮಳಿಗೆಗೆ ಬಾಗಿಲು ಹಾಕಿದ್ದು, ಅಲ್ಲಿಯವರೆಗೂ ಶಾರದಾ ಇಲ್ಲೇ ಇದ್ದರು. ಅದಾದ ನಂತರ ಇಲ್ಲಿಂದ ಹೋಗಿದ್ದಾಳೆ’ ಎಂದು ಸುರೇಶ ಮಂಡಕ್ಕಿ ಅವರು ಹೇಳಿದ್ದಾರೆ. `ಅದಾದ ನಂತರ ಯಾವ ಕಡೆ ಹೋದಳು?’ ಎಂದು ಪ್ರಶ್ನಸಿದಾಗ `ತಮಗೇನೂ ಗೊತ್ತಿಲ್ಲ’ ಎಂದವರು ಹೇಳಿದ್ದಾರೆ.
ಎಲ್ಲಾ ಕಡೆ ಹುಡುಕಿದರೂ ಮಗಳು ಸಿಗದ ಕಾರಣ ಉಮೇಶ ಲಮಾಣಿ ಅವರು ಪೊಲೀಸರ ಸಹಾಯಪಡೆದಿದ್ದಾರೆ. ಪ್ರಕರಣ ದಾಖಲಿಸಿದ ಶಿರಸಿ ನಗರ ಠಾಣೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.