ಗೋಕರ್ಣಕ್ಕೆ ಬರುವ ಪ್ರವಾಸಿಗರು ಅಲ್ಲಿರುವ ಜೀವ ರಕ್ಷಕರ ಜೊತೆ ಜಗಳ ಮಾಡುತ್ತಿದ್ದಾರೆ. ಕಡಲಿಗೆ ಇಳಿಯದಂತೆ ಸೂಚಿಸಿರುವುದನ್ನು ಸಹಿಸದೇ ವಾಗ್ವಾದ ನಡೆಸುತ್ತಿದ್ದಾರೆ.
ಸದ್ಯ ಮಳೆಗಾಲ ಶುರುವಾಗಿದ್ದರಿಂದ ಜಲ ಸಾಹಸ ಕ್ರೀಡೆಗಳನ್ನು ನಿಷೇಧಿಸಲಾಗಿದೆ. ಹೀಗಾಗಿ ಗೋಕರ್ಣಕ್ಕೆ ಬರುವ ಪ್ರವಾಸಿಗರು ಕಡಲಿಗೆ ಹಾರುತ್ತಿದ್ದು, ಸಮುದ್ರದ ಅಲೆಗಳ ರಭಸವಾಗಿರುವ ಬಗ್ಗೆ ಜೀವ ರಕ್ಷಕರು ಜನರಿಗೆ ಮಾಹಿತಿ ನೀಡುತ್ತಿದ್ದಾರೆ. ಅದಾಗಿಯೂ, ಅಪಾಯದ ಕಡೆ ಹೋಗುವವರನ್ನು ತಡೆಯುತ್ತಿದ್ದಾರೆ. ಆದರೆ, ಅನೇಕ ಪ್ರವಾಸಿಗರು ಜೀವ ರಕ್ಷಕರ ಮಾತು ಆಲಿಸದೇ ಜಗಳ ಮಾಡುತ್ತಿದ್ದಾರೆ.
ಶನಿವಾ ಸಹ ನಾಲ್ವರು ಸಮುದ್ರಕ್ಕೆ ಹಾರಿದ್ದು, ಜೀವ ರಕ್ಷಕ ಸಿಬ್ಬಂದಿ ಅವರನ್ನು ದಡಕ್ಕೆ ಕರೆದಿದ್ದಾರೆ. `ಅಲೆಯ ಸೆಳೆತ ಹೆಚ್ಚಾಗಿರುವುದರಿಂದ ನೀರಿಗೆ ಇಳಿಯಬೇಡಿ’ ಎಂದು ಬುದ್ದಿ ಹೇಳಿದ್ದಾರೆ. ಆದರೆ, ಜೀವ ರಕ್ಷಕ ಸಿಬ್ಬಂದಿ ಜೊತೆ ಪ್ರವಾಸಿಗರು ಜಗಳ ಮಾಡಿ ಕೆಟ್ಟದಾಗಿ ಬೈದಿದ್ದಾರೆ. ಹೀಗಾಗಿ ಜೀವ ರಕ್ಷಕ ಸಿಬ್ಬಂದಿಯ ರಕ್ಷಣೆಗೆ ಇಲ್ಲಿ ಪೊಲೀಸರನ್ನು ನೇಮಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.