ಮುoಡಗೋಡು-ಯಲ್ಲಾಪುರ ಮಾರ್ಗವಾಗಿ ಸಂಚರಿಸುವ ಬಸ್ಸುಗಳು ಸಮಯಕ್ಕೆ ಸರಿಯಾಗಿ ಬಾರದ ಬಗ್ಗೆ ಆಕ್ರೋಶವ್ಯಕ್ತವಾಗಿದೆ. ತಾಸುಗಟ್ಟಲೆ ಕಾದರೂ ಬಸ್ಸು ಬಾರದ ಹಿನ್ನಲೆ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಸಿಬ್ಬಂದಿಯನ್ನು ತರಾಠೆಗೆ ತೆಗೆದುಕೊಂಡಿದ್ದಾರೆ.
ಬುಧವಾರ ಮಧ್ಯಾಹ್ನ 3 ಗಂಟೆಗೆ ಮುಂಡಗೋಡು ಬಸ್ ನಿಲ್ದಾಣದಿಂದ ಹೊರಡಬೇಕಾದ ಬಸ್ಸು ಸಂಜೆಯಾದರೂ ಬರಲಿಲ್ಲ. ಗಂಟೆಗಳ ಕಾಲ ಕಾದರೂ ಸಾರಿಗೆ ಸಿಬ್ಬಂದಿ ಬೇರೆ ಬಸ್ಸನ್ನು ಸಹ ಬಿಡಲಿಲ್ಲ. ಇದರಿಂದ ಪ್ರಯಾಣಿಕರು ಆಕ್ರೋಶಗೊಂಡಿದ್ದು, ಬಸ್ ನಿಲ್ದಾಣದಲ್ಲಿಯೇ ಪ್ರತಿಭಟಿಸಿದರು. ಮುಂಡಗೋಡು – ಯಲ್ಲಾಪುರಕ್ಕೆ ಹೋಗುವ ಮಾರ್ಗದಲ್ಲಿ ಹಲವು ಹಳ್ಳಿಗಳಿದ್ದು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಿರುಗುತ್ತಾರೆ. ಬಸ್ ಸರಿಯಾಗಿಲ್ಲದ ಕಾರಣ ಅವರಿಗೆ ಸಮಸ್ಯೆಯಾಗಿದೆ ಎಂದು ಅನೇಕರು ದೂರಿದರು.
`ಬೆಳಿಗ್ಗೆ ಅವಧಿಯಲ್ಲಿಯೂ ಬಸ್ ವ್ಯವಸ್ಥೆ ಸರಿಯಾಗಿಲ್ಲ. ಎರಡು-ಮೂರು ತಾಸು ತಡವಾಗುತ್ತಿದೆ. ಹೀಗಾಗಿ ಜನ ಖಾಸಗಿ ವಾಹನ ಅವಲಂಭಿಸಬೇಕಿದ್ದು, ನಿಗದಿತ ಸಮಯ ಮೀರಿ ಸಂಚರಿಸುವ ಸಾರಿಗೆ ಬಸ್‌ಗಳಿಗೆ ಶಿಸ್ತು ಅಗತ್ಯ’ ಎಂದು ಪ್ರಯಾಣಿಕರು ಆಗ್ರಹಿಸಿದರು. `ತಾಲೂಕಿನಲ್ಲಿಯೇ ಬಸ್ ಘಟಕವಿದ್ದರೂ ಬಸ್ ಸಂಚಾರವ್ಯವಸ್ಥೆ ಸರಿಯಾಗಿಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದರು.