ವoದಿಗೆಯ ದಾಕ್ಷಾಯಣಿ ನಾಯ್ಕ ಅವರು ಪಕ್ಕದ ಮನೆಯ ಕರೆಂಟ್ ಪ್ಯೂಜ್ ಕದ್ದಿದ್ದಾರೆ. ರಾತ್ರಿಯಿಡೀ ಕತ್ತಲು ಅನುಭವಿಸಿದ ಹರೀಶ ನಾಯ್ಕ ಅವರು ತಂಗಿ ದಾಕ್ಷಾಯಣಿ ನಾಯ್ಕ ಅವರ ವಿರುದ್ಧ ಕೇಸು ದಾಖಲಿಸಿದ್ದಾರೆ.
ಅಂಕೋಲಾದ ವಂದಿಗೆಯ ಸರ್ಕಿಟ್ ಹೌಸ್ ರಸ್ತೆ ಬಳಿ ಸರ್ಕಾರಿ ಶಾಲೆಯಿದೆ. ಅದರ ಎದುರಿನ `ಕಮಲಾ ಶ್ರೀನಿವಾಸ’ ನಿವಾಸದಲ್ಲಿ ಹರೀಶ ಶ್ರೀನಿವಾಸ ನಾಯ್ಕ ಅವರು ವಾಸವಾಗಿದ್ದಾರೆ. ಹರೀಶ ನಾಯ್ಕ ಅವರು ಇಂಜಿನಿಯರ್ ಆಗಿದ್ದು, ಅವರ ಸಹೋದರಿ ದಾಕ್ಷಾಯಣಿ ಬೊಮ್ಮಯ್ಯ ನಾಯ್ಕ ಅವರು ಸಹ ಇಂಜಿನಿಯರ್ ಆಗಿದ್ದಾರೆ. ಈ ಅಣ್ಣ-ತಂಗಿ ನಡುವೆ ಆಸ್ತಿ ಜಗಳ ನಡೆಯುತ್ತಿದ್ದು, ಕೊನೆಯ ತಂಗಿ ತೃಪ್ತಿ ನಾಯ್ಕ ಅವರು ಆಸ್ತಿಗಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.
ಅಗಸ್ಟ 3ರಂದು ಹರೀಶ ನಾಯ್ಕ ಅವರು ಮನೆಯಲ್ಲಿರಲಿಲ್ಲ. ಅಣ್ಣ ಮನೆಯಲ್ಲಿಲ್ಲದಿರುವುದನ್ನು ನೋಡಿದ ದಾಕ್ಷಾಯಣಿ ನಾಯ್ಕ ಅವರು ಆ ಮನೆಯ ಕಪೌಂಡ್ ಹಾರಿದ್ದಾರೆ. ಮನೆ ಸುತ್ತ ಏನೂ ಸಿಗದೇ ಇದ್ದಾಗ ಅಲ್ಲಿದ್ದ ವಿದ್ಯುತ್ ಬೋರ್ಡ ಕಡೆ ಹೋಗಿದ್ದಾರೆ. ಅದರ ಪ್ಯೂಜ್ ಕದ್ದು ಪರಾರಿಯಾಗಿದ್ದಾರೆ. ಆ ಮೂಲಕ ಅಣ್ಣನ ಮನೆ ಕತ್ತಲಿನಲ್ಲಿರುವುದನ್ನು ಕಂಡು ದಾಕ್ಷಾಯಣಿ ನಾಯ್ಕ ಅವರು ಮಾನಸಿಕ ಖುಷಿ ಅನುಭವಿಸಿದ್ದಾರೆ. ನ್ಯಾಯಾಲಯದಲ್ಲಿ ಕೇಸು ವಿಚಾರಣೆಯಲ್ಲಿರುವಾಗ ಕಪೌಂಡ್ ಹಾರಿ ಮನೆಗೆ ಬಂದ ತಂಗಿ ವಿರುದ್ಧ ಹರೀಶ ನಾಯ್ಕ ಅವರು ಕಿಡಿಕಾರಿದ್ದಾರೆ. ತಂಗಿಗೆ ಶಿಕ್ಷೆ ಕೊಡಿಸಬೇಕು ಎಂಬ ನಿಟ್ಟಿನಲ್ಲಿ ಅವರು ಕೇಸು ಹಾಕಿದ್ದಾರೆ.