ಅನಾನಸ್ ಹಣ್ಣು ಸಾಗಿಸುತ್ತಿದ್ದ ಲಾರಿಯೊಂದು ಸುಂಕಸಾಳದ ಬಳಿ ಜಲಪಾತ ವೀಕ್ಷಣೆಗೆ ಬಂದಿದ್ದ ಬೈಕಿಗೆ ಡಿಕ್ಕಿ ಹೊಡೆದಿದ್ದು, ಈ ಅಪಘಾತದಲ್ಲಿ ದಾಂಡೇಲಿಯ ವೆಸ್ಟ್ ಕೋಸ್ಟ್ ಪೆಪರ್ ಮಿಲ್ ಸಿಬ್ಬಂದಿಯೊಬ್ಬರು ಸಾವನಪ್ಪಿದ್ದಾರೆ. ಈ ದುರಂತದಲ್ಲಿ ಬೈಕಿನಲ್ಲಿದ್ದ ಮತ್ತೊಬ್ಬರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ದಾಂಡೇಲಿಯ ವೆಸ್ ಕೋಸ್ಟ್ ಪೆಪರ್ ಮಿಲ್ ಸಿಬ್ಬಂದಿ ಸಂಜಯ ರಾಜು ಬೋಸ್ಲೆ ಅವರು ಗುರುವಾರ ಅಂಕೋಲಾಗೆ ಆಗಮಿಸಿದ್ದರು. ಅವರು ಆಕಾಶ್ ಬೋಸ್ಲೆ ಎಂಬಾತರ ಜೊತೆ ಬೈಕಿನಲ್ಲಿ ಸಂಚರಿಸುತ್ತಿದ್ದರು. ಅವರಿಬ್ಬರು ಹೊಸದೇವತಾ ಜಲಪಾತ ವೀಕ್ಷಣೆಗೆ ನಿರ್ಧರಿಸಿದ್ದು, ಸುಂಕಸಾಳ ಕೋಟೆಪಾಲ್ ಸಮೀಪ ಅವರ ಬೈಕಿಗೆ ಲಾರಿಯೊಂದು ಡಿಕ್ಕಿ ಹೊಡೆಯಿತು. ಕೇರಳದ ಕೊಚ್ಚಿಯಿಂದ ದೆಹಲಿಗೆ ಅನಾನಸ್ ಹಣ್ಣು ಸಾಗಿಸುತ್ತಿದ್ದ ಲಾರಿ ಸ್ಪೆಂಡರ್ ಬೈಕಿಗೆ ಗುದ್ದಿದ ಪರಿಣಾಮ ಸಂಜಯ ಬೋಸ್ಲೆ ಅವರು ಅಲ್ಲಿಯೇ ಬಿದ್ದು ಸಾವನಪ್ಪಿದರು.
ಬೈಕಿನ ಹಿಂದೆ ಕೂತಿದ್ದ ಸಹಸವಾರ ಆಕಾಶ್ ಬೋಸ್ಲೆ ಅವರ ಕಾಲಿಗೆ ಈ ಅಪಘಾತದಲ್ಲಿ ಗಂಭೀರವಾಗಿ ಗಾಯವಾಯಿತು. ಅಸ್ವಸ್ಥಗೊಂಡು ಬಿದ್ದಿದ್ದ ಆಕಾಶ ಬೋಸ್ಲೆ ಅವರನ್ನು ಅಲ್ಲಿದ್ದ ಜನ ಆಸ್ಪತ್ರೆಗೆ ದಾಖಲಿಸಿದರು. ಸದ್ಯ ಆಕಾ ಬೋಸ್ಲೆ ಅವರು ಅಂಕೋಲಾ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಪಡೆದಿದ್ದಾರೆ. ಅಪಘಾತ ಸ್ಥಳಕ್ಕೆ ಅಂಕೋಲಾ ಠಾಣೆಯ ಪಿಎಸ್‌ಐ ಗುರುನಾಥ ಹಾದಿಮನಿ, ಸುಂಕಸಾಳ ಉಪಠಾಣೆಯ ಸಿಬ್ಬಂದಿ ಹಾಗೂ ಹೈವೇ ಪೆಟ್ರೋಲ್ ಸಿಬ್ಬಂದಿ ತೆರಳಿ ಸಂಚಾರ ದಟ್ಟಣೆ ಆಗದಂತೆ ಕ್ರಮ ಜರುಗಿಸಿದ್ದಾರೆ.
`ಬೈಕ್ ಸವಾರರೇ ಗಮನಿಸಿ: ಸುರಕ್ಷಿತ ಸವಾರಿಗಾಗಿ ಗುಣಮಟ್ಟದ ಹೆಲ್ಮೇಟ್ ಬಳಸಿ’