ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡು ಹಾಗೂ ಜೊಯಿಡಾದಲ್ಲಿ ಗ್ರಾಮೀಣ ಪುನರ್ವಸತಿ ಹಾಗೂ ವಿವಿದೋದ್ಧೇಶ ಪುರ್ನವಸತಿ ಕಾರ್ಯಕರ್ತರ ಹುದ್ದೆ ಖಾಲಿಯಿದೆ. ಅಂಗವಿಕಲ ಅಭ್ಯರ್ಥಿಗಳಿಗೆ ಇಲ್ಲಿ ಆದ್ಯತೆ ನೀಡಿ, ಅರ್ಜಿ ಆಹ್ವಾನಿಸಲಾಗಿದೆ.
ಹೊನ್ನಾವರ ತಾಲೂಕಿನ ಹೊಸಾಕುಳಿ, ನಗರಬಸ್ತಿಕೇರಿ, ಭಟ್ಕಳ ತಾಲೂಕಿನ ಬೆಳಕೆ, ಶಿರಸಿ ತಾಲೂಕಿನ ಬೈರುಂಬೆ, ಸಿದ್ಧಾಪುರ ತಾಲೂಕಿನ ಹೆಗ್ಗರಣೆ, ಯಲ್ಲಾಪುರ ತಾಲೂಕಿನ ಮದನೂರು, ಮುಂಡಗೋಡ ತಾಲೂಕಿನ ಚೌಡಳ್ಳಿ, ಮಳಗಿ, ಹುನಗುಂದ, ಜೋಯಿಡಾ ತಾಲೂಕಿನ ಅಖೇತಿ, ಆವೇಡಾ ಗ್ರಾಮ ಪಂಚಾಯತಯಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಕರೆಯಲಾಗಿದೆ. ಮುಂಡಗೋಡ ತಾಲೂಕು ಪಂಚಾಯತಯಲ್ಲಿ ವಿವಿದೋದ್ಧೇಶ ಪುರ್ನವಸತಿ ಕಾರ್ಯಕರ್ತರ ಹುದ್ದೆ ಖಾಲಿಯಿದ್ದು, ಅದಕ್ಕೂ ಅರ್ಹರ ಹುಡುಕಾಟ ನಡೆದಿದೆ.
ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಶೇ 40ರಷ್ಟು ವಿಕಲಚೇತನರಾಗಿರಬೇಕು ಎಂಬ ನಿಯಮವಿದೆ. ಭಾಗಶಃ ಅಂಧರಿಗೆ, ಭಾಗಶಃ ಶ್ರವಣದೋಷ ಮತ್ತು ದೈಹಿಕ ಅಂಗವಿಕಲರಿಗೆ ಹಾಗೂ ಸ್ಥಳೀಯ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ವಾಸಿಸುತ್ತಿರುವವರಿಗೆ ಆದ್ಯತೆ ನೀಡಲಾಗುತ್ತದೆ. ಅರ್ಜಿ ಸಲ್ಲಿಸುವವರು 18-45 ವರ್ಷದ ವಯೋಮಿತಿ ಹೊಂದಿದ್ದು, SSLC ಉತ್ತೀರ್ಣರಾಗಿರಬೇಕು. ಹಾಗೂ ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿ ಹೊಂದಿರಬೇಕು ಎಂಬ ಷರತ್ತುಗಳಿವೆ.
ವಿವಿದೊದ್ಧೇಶ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಹ ಶೇ 40 ವಿಕಲಚೇತನರಾಗಿದ್ದು, ಸ್ಥಳೀಯ ತಾಲೂಕಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವವರಿಗೆ ಆದ್ಯತೆ ನೀಡಲಾಗುತ್ತದೆ. ಇದಕ್ಕೆ ಅರ್ಜಿ ಸಲ್ಲಿಸುವವರು 18-45 ವರ್ಷದ ವಯೋಮಿತಿ ಹೊಂದಿದ್ದು, ಪದವೀಧರರಾಗಿರಬೇಕು. ಹಾಗೂ ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿ ಹೊಂದಿರಬೇಕು ಎಂಬ ನಿಯಮವಿದೆ. ಈ ಹುದ್ದೆಗೆ ಅರ್ಜಿಗಳನ್ನು ಭರ್ತಿ ಮಾಡಲು ಆಯಾ ತಾಲೂಕಾ ಪಂಚಾಯತ ಅಥವಾ ಶಿಶು ಅಭಿವೃದ್ಧಿ ಯೋಜನೆ ಕಾರ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿದ್ದೊದ್ಧೇಶ ಪುನರ್ವಸತಿ ಕಾರ್ಯಕರ್ತರನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ಅರ್ಹತೆಯ ಅನುಗುಣವಾಗಿ ಅರ್ಜಿಗಳನ್ನು ಭರ್ತಿ ಮಾಡಿ, ಸೆಪ್ಟೆಂಬರ್ 19ರೊಳಗೆ ಜಿಲ್ಲಾ ವಿಕಲಚೇತನರÀ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಾರವಾರ ಇಲ್ಲಿ ಕಳುಹಿಸಲೂ ಪ್ರಕಟಣೆ ತಿಳಿಸಿದೆ. ಇನ್ನೂ ಏನಾದರೂ ಮಾಹಿತಿ ಬೇಕೆ? ಕಚೇರಿ ಸಮಯದಲ್ಲಿ ಇಲ್ಲಿ ಫೋನ್ ಮಾಡಿ: 08382-200758