ಮಾದಕ ಅಮಲಿನಲ್ಲಿ ಅಲೆದಾಡುತ್ತಿದ್ದ ಶಿರಸಿಯ ಅಗಸ್ತ್ಯ ಎಜನ್ಸಿಯ ಹರೀಶ ಹೆಗಡೆ ಅವರು ಪೊಲೀಸರ ಬಳಿ ತಪ್ಪು ಒಪ್ಪಿಕೊಂಡಿದ್ದು, ಅವರಿಗೆ ಮಾದಕ ವ್ಯಸನ ಪೂರೈಸಿದವರು ಯಾರು? ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ವಿವಿಧ ಮಳಿಗೆಗಳಿಗೆ ಬಗೆ ಬಗೆಯ ಉತ್ಪನ್ನಗಳನ್ನು ಸರಬರಾಜು ಮಾಡುವ ಹರೀಶ ಹೆಗಡೆ ಅವರು ಮಾದಕ ವ್ಯಸನ ಸೇವನೆ ಜೊತೆ ಮಾದಕ ವ್ಯಸನ ಸರಬರಾಜು ಮಾಡುವವರ ಜೊತೆಯೂ ಸಂಪರ್ಕದಲ್ಲಿರುವ ಅನುಮಾನಗಳಿವೆ.
ಶಿರಸಿಯ ಗಣೇಶ ನಗರದ ಹರೀಶ ಅರುಣ ಹೆಗಡೆ ಅವರು ವಾಸವಾಗಿದ್ದಾರೆ. 40 ವರ್ಷದ ಅವರು ವ್ಯಾಪಾರ-ವ್ಯವಹಾರ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಅಗಸ್ತ್ಯ ಎಜನ್ಸಿ ಎಂಬ ಮಳಿಗೆ ಮೂಲಕ ಅವರು ವಿವಿಧ ಬಗೆಯ ಉತ್ಪನ್ನಗಳನ್ನು ಪೂರೈಕೆ ಮಾಡುತ್ತಿದ್ದಾರೆ. ಅಲ್ಲಿಂದ ಬರುವ ಆದಾಯದಿಂದ ಅವರು ಮೋಜು-ಮಸ್ತಿ ಮಾಡಿದ್ದು, ಮಾದಕ ವ್ಯಸನಕ್ಕೆ ದಾಸರಗಿದ್ದಾರೆ. ಆನೆಹೊಂಡದ ಬಳಿ ಮಾದಕ ವಸ್ತು ಸೇವಿಸುತ್ತಿದ್ದಾಗ ಹರೀಶ ಹೆಗಡೆ ಅವರು ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ.
ಅಕ್ಟೊಬರ್ 5ರಂದು ಸಹ ಹರೀಶ ಹೆಗಡೆ ಅವರು ಆನೆಹೊಂಡದ ಬಳಿ ಹೋಗಿ ಅಪಾರ ಪ್ರಮಾಣದಲ್ಲಿ ಹೊಗೆ ಎಳೆದಿರುವುದನ್ನು ಪೊಲೀಸರು ನೋಡಿದ್ದಾರೆ. ಶಿರಸಿ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ನಾರಾಯಣ ರಾಥೋಡ್ ಅವರು ಹರೀಶ ಹೆಗಡೆ ಅವರನ್ನು ವಶಕ್ಕೆಪಡೆದು ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ. ಈ ವೇಳೆ ಹರೀಶ ಹೆಗಡೆ ಅವರು ಅಮಲಿನಲ್ಲಿದ್ದರೂ ತಮ್ಮ ಪ್ರಭಾವ ಬೀರುವ ಪ್ರಯತ್ನ ಮಾಡಿದ್ದಾರೆ. ಆದರೆ, ವೈದ್ಯಕೀಯ ವರದಿಯಲ್ಲಿ ಹರೀಶ ಹೆಗಡೆ ಅವರು ಗಾಂಜಾ ಸೇವಿಸಿದ್ದು, ದೃಢವಾಗಿದೆ. ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ಅವರ ವಿರುದ್ಧ ಕೇಸು ಮಾಡಿದ್ದಾರೆ. ಆದರೆ, ಹರೀಶ ಹೆಗಡೆ ಅವರಿಗೆ ಮಾದಕ ವ್ಯಸನ ಪೂರೈಸಿದವರು ಯಾರು? ಹರೀಶ ಹೆಗಡೆ ಅವರು ಎಷ್ಟು ಕಾಲದಿಂದ ಮಾದಕ ವ್ಯಸನ ಸರಬರಾಜು ಮಾಡುವವರ ಜೊತೆ ಸಂಪರ್ಕದಲ್ಲಿದ್ದಾರೆ? ಎನ್ನುವುದು ತನಿಖೆ ಆಗಿಲ್ಲ.
ಮಾಧ್ಯಮದವರನ್ನು ಬೆದರಿಸುವ ಪ್ರಯತ್ನ:
ಹರೀಶ ಹೆಗಡೆ ಅವರು ಮಾದಕ ವ್ಯಸನ ಸೇವಿಸಿದ ಬಗ್ಗೆ mobiletime.in ಮಂಗಳವಾರ ವರದಿ ಪ್ರಸಾರ ಮಾಡಿತ್ತು. ಅದಾದ ನಂತರ ಹರೀಶ ಹೆಗಡೆ ಅವರು ಮಾಧ್ಯಮದವರಿಗೆ ಬೆದರಿಕೆ ಹಾಕಿದ್ದಾರೆ. ಮಾದಕ ವ್ಯಸನದ ಗುಂಗಿನಿAದ ಇನ್ನೂ ಹೊರಬಾರದ ರೀತಿ ಅವರು ಮಾತನಾಡಿದ್ದಾರೆ. ಮಾದಕ ವ್ಯಸನ ಸೇವಿಸಿದನ್ನು ಈ ವೇಳೆಯೂ ಅವರು ಒಪ್ಪಿಕೊಂಡಿದ್ದು, ಅದನ್ನು ಬಹಿರಂಗಪಡಿಸಿದ ರೀತಿಯ ಬಗ್ಗೆ ಆಕ್ಷೆಪವ್ಯಕ್ತಪಡಿಸಿದ್ದಾರೆ. mobiletime.in ಕಚೇರಿ ಸಂಖ್ಯೆಗೆ 10 ಮಿಸ್ ಕಾಲ್ ಮಾಡಿದ ಹರೀಶ ಹೆಗಡೆ ಅವರು ಅದಾದ ನಂತರ `ಕಾಲ್ ಮೀ ಅರ್ಜಂಟ್’ ಎಂದು ಮೆಸೆಜ್ ಮಾಡಿದ್ದಾರೆ. ನಂತರ ರಾಜೇಶ ಹೆಗಡೆ ಎಂಬಾತರ ಫೋನ್ ಬಳಸಿಕೊಂಡು ಫೋನ್ ಮಾಡಿ ಬೆದರಿಕೆ ಹಾಕಿದ್ದಾರೆ.