ಶಿರಸಿಯ ಅರ್ಚಕ ವೆಂಕಟ್ರಮಣ ಭಟ್ಟ ಹಾಗೂ ಮಂಜುನಾಥ ಭಟ್ಟ ಅವರ ಜೊತೆ ಮುಸ್ಲೀಂ ಹಾಗೂ ಕ್ರಿಸ್ತ ಧರ್ಮಗುರುಗಳು ಸೇರಿ ಈ ದಿನ ಸರ್ವಧರ್ಮ ಪೂಜೆ ಮಾಡಿದ್ದಾರೆ. ಮುಸ್ಲೀಂ ಧರ್ಮಗುರು ಎ ರೆಹಮಾನ್ ಗೌಡಳ್ಳಿ, ಅಬ್ದುಲ್ ರೆಹಮಾನ್ ಹುಬ್ಬಳ್ಳಿ ನವಾಜ್ ಗರೀಬ್ ಕಾತೂರ್ ಹಾಗೂ ಕ್ರಿಸ್ತ ಗುರು ಕೆಜೆ ಕುರಿಯಾ ಕೊಸ್, ಅಲವೀಸ್ ಫರ್ನಾಂಡಿಸ್, ಕಾರ್ಲೂಸ್ ಫರ್ನಾಂಡಿಸ್ ಅವರು ತಮ್ಮ ತಮ್ಮ ಧರ್ಮದ ಅನುಸಾರ ಪ್ರಾರ್ಥನೆ ನೆರವೇರಿಸಿದ್ದಾರೆ.
ಶಿರಸಿಯ ಅರಣ್ಯವಾಸಿ ಹೋರಾಟಗಾರರ ಕಚೇರಿಯಲ್ಲಿ ಹಿಂದೂ, ಮುಸ್ಲಿಂ ಹಾಗೂ ಕ್ರೆöÊಸ್ತರ ಸಭೆ ನಡೆದಿದೆ. ಜೊತೆಗೆ ಆಯಾ ಧರ್ಮದ ಅನುಸಾರ ವಿಶೇಷ ಪೂಜೆಯನ್ನು ಮಾಡಲಾಗಿದೆ. ವೈದಿಕ ವೆಂಕಟ್ರಮಣ ಭಟ್ಟ ಹಾಗೂ ಮಂಜುನಾಥ ಭಟ್ಟ ಅವರು ಗಣಹೋಮ ನೆರವೇರಿಸಿದ್ದು, ಅದೇ ಅವಧಿಯಲ್ಲಿ ಮುಸ್ಲೀಂ ಧರ್ಮಗುರು ಎ ರೆಹಮಾನ್ ಗೌಡಳ್ಳಿ, ಅಬ್ದುಲ್ ರೆಹಮಾನ್ ಹುಬ್ಬಳ್ಳಿ ನವಾಜ್ ಗರೀಬ್ ಕಾತೂರ್ ಹಾಗೂ ಕ್ರೆöÊಸ್ತ ಗುರು ಕೆಜೆ ಕುರಿಯಾ ಕೊಸ್, ಅಲವೀಸ್ ಫರ್ನಾಂಡಿಸ್, ಕಾರ್ಲೂಸ್ ಫರ್ನಾಂಡಿಸ್ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಕಳೆದ ಮೂರುವರೆ ದಶಕದಿಂದ ಅರಣ್ಯ ಭೂಮಿ ಹಕ್ಕಿಗಾಗಿ ಹೋರಾಡುತ್ತೀರುವ ಅರಣ್ಯವಾಸಿಗಳು ಹೋರಾಟಗಾರರ ಕಾರ್ಯಾಲಯದಲ್ಲಿ ಅರಣ್ಯವಾಸಿಗಳ ಒಳಿತಿಗಾಗಿ ಈ ಪೂಜೆ ನೆರವೇರಿಸಲಾಗಿದೆ. ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಇಬ್ರಾಹೀಂ ಸಾಬ ಗೌಡಳ್ಳೀ, ಬಸ್ತಾöಂವ್ ಡಿಸೋಜಾ ನೇತೃತ್ವದಲ್ಲಿ ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ನಡೆದಿವೆ.
ಈ ಕಾರ್ಯಕ್ರಮದಲ್ಲಿ ಮಾಬ್ಲೇಶ್ವರ ನಾಯ್ಕ ಬೆಡ್ಕಣಿ, ಇಬ್ರಾಹೀ ಸಾಬ ಗೌಡಳ್ಳೀ, ನೆಹರು ನಾಯ್ಕ, ಎಮ್ ಆರ್ ನಾಯ್ಕ, ರಾಜು ನರೇಬೈಲ್, ಹರಿಹರ ನಾಯ್ಕ, ಸತೀಶ್ ನಾಯ್ಕ, ಲಕ್ಷöಣ ನಾಯ್ಕ, ಸಂಕೇತ ನಾಯ್ಕ ಹಲಗೇರಿ, ಕಿರಣ ಮರಾಠಿ, ಚಂದ್ರಣ್ಣ ಮರಗುಂಡಿ, ಉಮೇಶ್ ನಾಯ್ಕ ತ್ಯಾಗಲಿ, ನಾಗರಾಜ ದೇವಸ್ಥಳಿ, ಈಶ್ವರ ನಾಯ್ಕ ಬಿಳೂರು, ಶಿವಾಜಿ ಬೇಡಸ್ಗಾಂವ್, ಬಸ್ತಾಂವ್ ಡಿಸೋಜಾ, ಕಲ್ಪನಾ ಪಾವಸ್ಕರ್, ಕೆ ಜೆ ಕುರಿಯಾಸ್ ಇದ್ದರು. ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಅವರು ಸರ್ವಧರ್ಮ ಪೂಜೆಯಲ್ಲಿ ಭಾಗಿಯಾಗಿದ್ದಾರೆ. `ನಿರಂತರ 35 ವರ್ಷ ರವೀಂದ್ರ ನಾಯ್ಕ ಅವರು ನಡೆಸಿದ ಹೋರಾಟವು ನಿಸ್ವಾರ್ಥ ಸೇವೆಯಿಂದ ಕೂಡಿದೆ’ ಎಂದು ಆರ್ ವಿ ದೇಶಪಾಂಡೆ ಅವರು ಹೇಳಿದ್ದಾರೆ.