ಸರ್ಕಾರ ಸೂಚಿಸಿದ ಪ್ರಕಾರ ತರಾತುರಿಯಲ್ಲಿ ಸಮೀಕ್ಷೆ ಮುಗಿಸುವುದಕ್ಕಾಗಿ ಜೋರಾಗಿ ಬೈಕ್ ಓಡಿಸಿದ ಶಿಕ್ಷಕ ಪ್ರಕಾಶ ಗಾವಡಿ ಅವರು ಬೈಕಿನಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಸದ್ಯ ಅವರು ಆಸ್ಪತ್ರೆಗೆ ತೆರಳಿ ಚಿಕಿತ್ಸೆಪಡೆದಿದ್ದಾರೆ.
ಕುಮಟಾ ಕಗಾಲ ಮೂಲದ ಪ್ರಕಾಶ ಮೋಹನ ಗಾವಡಿ (44) ಅವರು ಕಾರವಾರ ಕೆಇಬಿ ರಸ್ತೆ ಬಳಿ ವಾಸವಾಗಿದ್ದರು. ಶಿಕ್ಷಕರಾಗಿರುವ ಅವರನ್ನು ಸರ್ಕಾರ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿಗೆ ನಿಯೋಜಿಸಿತ್ತು. ತಮಗೆವಹಿಸಿದ್ದ ಕೆಲಸವನ್ನು ಬೇಗ ಮುಗಿಸಬೇಕು ಎಂಬ ಅವಸರದಲ್ಲಿ ಅವರು ವೇಗವಾಗಿ ಬೈಕ್ ಓಡಿಸುತ್ತಿದ್ದರು.
ಅಕ್ಟೊಬರ್ 9ರಂದು ಶಿರವಾಡ ಕಡೆ ಅವರು ಜೋರಾಗಿ ಬೈಕ್ ಓಡಿಸುತ್ತಿದ್ದರು. ಮೋಹನ ಗಾವಡಿ ಅವರ ಬೈಕಿಗೆ ನಾಗರಕೇರಿ ಬಿಷಪ್ ಮನೆ ಬಳಿ ದನ ಅಡ್ಡ ಬಂದಿತು. ಆ ದನಕ್ಕೆ ಶಿಕ್ಷಕರ ಬೈಕ್ ಗುದ್ದಿತು. ಪರಿಣಾಮ ಮೋಹನ ಗಾವಡಿ ಅವರು ಬೈಕಿನಿಂದ ಬಿದ್ದು ಕೈಗೆ ನೋವು ಮಾಡಿಕೊಂಡರು.
ಶೇಜವಾಡ ಶಿಕ್ಷಕ ವೀರೇಂದ್ರ ನಾಯ್ಕ ಅವರು ಅಪಘಾತದ ಬಗ್ಗೆ ಅರಿತು ಮೋಹನ ಗಾವಡಿ ಅವರ ಆರೋಗ್ಯ ವಿಚಾರಿಸಿದರು. ಅದಾದ ನಂತರ `ಮೋಹನ ಗಾವಡಿ ಅವರ ಅತಿ ವೇಗದ ಬೈಕ್ ಚಾಲನೆಯೇ ಈ ಅಪಘಾತಕ್ಕೆ ಕಾರಣ’ ಎಂದು ಅವರ ವಿರುದ್ಧವೇ ಪೊಲೀಸ್ ದೂರು ನೀಡಿದರು.