ಅಡಿಕೆ ತೋಟಕ್ಕೆ ಸೊಪ್ಪು ಹೊದೆಸುವುದಕ್ಕಾಗಿ ಕಾಡಿಗೆ ಹೋಗಿದ್ದ ಯಲ್ಲಾಪುರದ ಗಣಪತಿ ಭಟ್ಟ ಅವರು ಅಕಾಲಿಕ ಮರಣಕ್ಕೀಡಾಗಿದ್ದಾರೆ. ಮರ ಹತ್ತಿ ಸೊಪ್ಪು ಕಡಿಯುವಾಗ ಕೆಳಗೆ ಬಿದ್ದ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಯಲ್ಲಾಪುರದ ಮಾಗೋಡು ಕಾಲೋನಿ ಬಳಿಯ ಮೇಲಿನ ತಾರಿಮನೆಯಲ್ಲಿ ಗಣಪತಿ ನಾರಾಯಣ ಭಟ್ಟ ಅವರು ವಾಸವಾಗಿದ್ದರು. ತಮ್ಮ 62ನೇ ವಯಸ್ಸಿನಲ್ಲಿಯೂ ಅವರು ಉತ್ಸಾಹದಿಂದ ಕೃಷಿ ಕೆಲಸ ಮಾಡಿಕೊಂಡಿದ್ದರು. ನಿತ್ಯವೂ ಬೆಟ್ಟ-ಗುಡ್ಡಗಳನ್ನು ಅಲೆದಾಡುವುದು, ತೋಟ ಸುತ್ತುವುದು ಅವರ ಕಾಯಕವಾಗಿತ್ತು.
ಅಕ್ಟೊಬರ್ 9ರಂದು ಅವರು ತೋಟಕ್ಕೆ ಸೊಪ್ಪು ಹಾಕಲು ನಿರ್ಧರಿಸಿದ್ದರು. ಆ ದಿನ ಸಂಜೆಯವರೆಗೂ ಕೃಷಿ ಕಾಯಕ ನಡೆಸಿದ ಗಣಪತಿ ಭಟ್ಟರು ಸಂಜೆಯಾದರೂ ಕೆಲಸ ಮಾಡುತ್ತಿದ್ದರು. ಸಂಜೆ 5.30ರ ವೇಳೆಗೆ ಸೊಪ್ಪು ಕಡಿಯುವುದಕ್ಕಾಗಿ ಮರ ಏರಿದ್ದರು. ಕೊಂಚ ಎಡವಿದ ಅವರು ಕಾಡು ಜಾತಿಯ ಮರದಿಂದ ಅವರು ಜಾರಿ ಬಿದ್ದರು.
ನೆಲಕ್ಕೆ ಬಿದ್ದು ಗಾಯಗೊಂಡಿದ್ದ ಗಣಪತಿ ಭಟ್ಟ ಅವರನ್ನು ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅದರಿಂದ ಪ್ರಯೋಜನವಾಗಲಿಲ್ಲ. ಸಂಜೆ 6.30ಕ್ಕೆ ವೈದ್ಯರು ಗಣಪತಿ ಭಟ್ಟರ ಸಾವಿನ ಘೋಷಣೆ ಮಾಡಿದರು. ತಂದೆಯ ಸಾವಿನ ಬಗ್ಗೆ ಅವರ ಮಗ ರಾಜೇಶ ಭಟ್ಟ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲಿಸಿದರು.
`ಕೃಷಿ ಕೆಲಸ ಮಾಡುವಾಗ ಜಾಗೃತರಾಗಿರಿ’