ಉತ್ತರ ಕನ್ನಡ ಜಿಲ್ಲೆಯ ಗಲ್ಲಿ ಗಲ್ಲಿಗಳಲ್ಲಿಯೂ ಮಟ್ಕಾ ಆಟ ಜೋರಾಗಿದೆ. ಗೂಡಂಗಡಿಕಾರರು, ಹೊಟೇಲ್ ಕಾರ್ಮಿಕರು, ಚಾಲಕರು ಸೇರಿ ಕೂಲಿ ಕಾರ್ಮಿಕರು ಸಹ ಕಾನೂನುಬಾಹಿರ ಮಟ್ಕಾ ಆಡಿಸಿ ಕಾಸು ಮಾಡಿಕೊಳ್ಳುತ್ತಿದ್ದಾರೆ.
ಬಡ ವ್ಯಾಪಾರಿಗಳಿಗೆ ಕಮಿಷನ್ ಆಸೆ ತೋರಿಸಿ ಅವರನ್ನು ದುರುಪಯೋಗಪಡಿಸಿಕೊಳ್ಳುವ ಮಟ್ಕಾ ಬುಕ್ಕಿಗಳ ಸಂಖ್ಯೆಯೂ ಜಿಲ್ಲೆಯಲ್ಲಿ ಕಡಿಮೆ ಇಲ್ಲ. ಪ್ರತಿ ತಾಲೂಕಿನಲ್ಲಿಯೂ 2-3 ಜನ ಮಟ್ಕಾ ಬುಕ್ಕಿಗಳಿದ್ದು, ಅವರ ಅಡಿ ನೂರಾರು ಜನ ಈ ಆಟ ಆಡಿಸುತ್ತಿದ್ದಾರೆ. ಕಾರವಾರದಲ್ಲಿ ಸುಭಾಷ್ ಎಂಬಾತರು ಮಟ್ಕಾ ಆಟದ ರೂವಾರಿಯಾಗಿದ್ದಾರೆ. ಅವರ ವಿಳಾಸ ಈವರೆಗೂ ಸಿಗದ ಕಾರಣ ಪೊಲೀಸರು ಹುಡುಕಾಟದಲ್ಲಿದ್ದಾರೆ. ಅಂಕೋಲಾದ ರವಿ ನಾಯ್ಕ ಅವರು ಕಾರವಾರದ ಮಲ್ಲಾಪುರ ಭಾಗದಲ್ಲಿ ಹಿಡಿತಹೊಂದಿದ್ದು, ಅಲ್ಲಿ ಮಟ್ಕಾ ಬುಕ್ಕಿಯಾಗಿ ಅಂಗಡಿಕಾರರಿಗೆ ಆಮೀಷ ಒಡ್ಡುತ್ತಿದ್ದಾರೆ.
ಕುಮಟಾದ ಹೆರವಟ್ಟಾದ ವಿನೋದ ಭಂಡಾರಿ ಮಟ್ಕಾ ಬುಕ್ಕಿಯಾಗಿದ್ದಾರೆ. ಶಿರಸಿ ಗಿಡಮಾವಿನಕಟ್ಟಾದ ವಿಜಯ ನಾರಾಯಣ ದೇವಾಡಿಗ, ರಾಘು ಶೆಟ್ಟಿ, ವಿವೇಕಾನಂದ ನಗರದ ರಾಹುಲ್ ಶಿವಕುಮಾರ ದೇವಗಿ ಮಟ್ಕಾ ಬುಕ್ಕಿಯಾಗಿ ಕಾಸು ಸಂಪಾದಿಸುತ್ತಿದ್ದಾರೆ. ಬನವಾಸಿಯಲ್ಲಿ ವಿಜಯ ನಾರಾಯಣ ದೇವಾಡಿಗ ಅವರ ಜೊತೆ ಶಿರಸಿಯ ಉದಯ ಶೆಟ್ಟಿ ಸಹ ಮಟ್ಕಾ ಸಂಖ್ಯೆ ಸಂಖ್ಯೆ ಮಾರಾಟ ದಂದೆಯಲ್ಲಿದ್ದಾರೆ. ಶಿರಸಿಯಲ್ಲಿ ಮೀನು ಮಾರುಕಟ್ಟೆ ಬಳಿಯ ಪಾವಲು ಅಂದ್ರು ವಾಜ್ ಸಹ ಮಟ್ಕಾ ಬುಕ್ಕಿಯಾಗಿದ್ದು, ಅಂಗಡಿಕಾರರು ಸಂಗ್ರಹಿಸಿದ ಹಣಪಡೆಯುತ್ತಿದ್ದಾರೆ.
ದಾಂಡೇಲಿ ಪಟೇಲ್ ನಗರದ ನಿಜಾಮುದ್ದಿನ್ ಮಹಮದ್ ನದಾಫ್ ತಮ್ಮ ಗ್ಯಾರೇಜು ಕೆಲಸದ ಜೊತೆಯಲ್ಲಿಯೇ ಮಟ್ಕಾ ಬುಕ್ಕಿಯಾಗಿಯೂ ಪ್ರಸಿದ್ಧಿಪಡೆದಿದ್ದಾರೆ. ಹಳಿಯಾಳ ಸೆಂಟ್ ಜೋವರ್ ನಿವಾಸಿ ಸಂತಾನ್ ಅಂತೋನ್ ಡಿಸೋಜಾ ಅವರು ಮೀನು ಮಾರುಕಟ್ಟೆ ಬಳಿ ಪಾನ್ ಅಂಗಡಿ ನಡೆಸುತ್ತಿದ್ದು, ಅಲ್ಲಿಂದಲೇ ಇಡೀ ತಾಲೂಕಿನ ಮಟ್ಕಾ ವ್ಯವಹಾರ ನೋಡಿಕೊಳ್ಳುತ್ತಾರೆ. ಹಳಿಯಾಳದ ಭಜಂತ್ರಿ ಗಲ್ಲಿಯ ಮಂಜುನಾಥ ಹನುಮಂತ ಕೋಳಿಪುಚ್ಚ ಅವರು ಸಹ ಕಾನೂನುಬಾಹಿರ ಆಟದ ರೂವಾರಿಯಾಗಿದ್ದಾರೆ.
ಭಟ್ಕಳದಲ್ಲಿ ಜಾಲಿ ಬಳಿಯ ತಲಗೇರಿಯ ರೂಪೇಶ ನಾಯ್ಕ ಹಾಗೂ ಹೆಬಳೆ ಗಾಂಧೀನಗರದ ಈಶ್ವರ ನಾರಾಯಣ ನಾಯ್ಕ ಅವರು ಮಟ್ಕಾ ಬುಕ್ಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಭಟ್ಕಳದಲ್ಲಿ ಹೆಬಳೆ ಹಡೀನದ ಶ್ರೀಧರ ದೇವಯ್ಯ ನಾಯ್ಕ ಅವರು ಬುಕ್ಕಿಯಾಗಿ ಓಡಾಡಿಕೊಂಡಿದ್ದಾರೆ. ಜೊತೆಗೆ ಭಟ್ಕಳದಲ್ಲಿ ಬೇಂಗ್ರೆ ಮೂಡಶಿರಾಲಿಯ ನಾಗರಾಜ ಭೈರಪ್ಪ ನಾಯ್ಕ, ಜಗದೀಶ ನಾಯ್ಕ ಎಂಬಾತರು ಮಟ್ಕಾ ಬುಕ್ಕಿಯಾಗಿ ದುಡ್ಡು ಮಾಡುತ್ತಿದ್ದಾರೆ.
ಹೊನ್ನಾವರದ ದಿಬ್ಬಣಗಲ್ಲಿನ ಮಣಿಕಂಠ ಶಂಕರ್ ಗೌಡ ಅವರು ಸಹ ಕೂಲಿ ಕೆಲಸದ ಜೊತೆ ಮಟ್ಕಾ ಹಿಂದೆ ಬಿದ್ದಿದ್ದಾರೆ. ಅಮಾಯಕರನ್ನು ಬಳಸಿಕೊಂಡು ಅವರಿಗೆ ಕಮಿಷನ್ ಆಸೆ ಒಡ್ಡಿ ಕಾನೂನುಬಾಹಿರ ಮಟ್ಕಾ ಆಡಿಸುತ್ತಿದ್ದಾರೆ. ಹೊನ್ನಾವರದಲ್ಲಿ ಕಮಟೆಹಿತ್ಲದ ಮಾರುತಿ ಸುಬ್ರಾಯ ಭಂಡಾರಿ ಅವರು ಮಟ್ಕಾ ಬುಕ್ಕಿಯಾಗಿ ವಿವಿಧ ಅಂಗಡಿಕಾರರಿಗೆ ಕಮಿಷನ್ ಆಧಾರದಲ್ಲಿ ಕೆಲಸ ಕೊಟ್ಟಿದ್ದಾರೆ. ಮುಂಡಗೋಡು ಹಳ್ಳೂರಿ ಓಣಿಯ ವಿನಾಯಕ ಶೇಟ್ ಅವರು ಮಟ್ಕಾ ಬುಕ್ಕಿಯಾಗಿದ್ದು, ಯಲ್ಲಾಪುರ ತಾಲೂಕಿನಲ್ಲಿಯೂ ಅವರು ಹಿಡಿತ ಹೊಂದಿದ್ದಾರೆ. ಕಿರವತ್ತಿ ಭಾಗದಲ್ಲಿ ವಿನಾಯಕ ಶೇಟ್ ಅವರ ಅಧೀನದಲ್ಲಿ ಮಟ್ಕಾ ಆಟ ಆಡಿಸುವವರಿದ್ದಾರೆ.
ಮುಂಡಗೋಡಿನ ಹೊಟೇಲ್ ಕೆಲಸ ಮಾಡುವ ಮಂಜುನಾಥ ಗಂಗಾಧರ ನೂಲನೂರು ಸಹ ಮಟ್ಕಾ ಬುಕ್ಕಿಯಾಗಿ ಕಾಸು ಮಾಡಿದ್ದಾರೆ. ಅಂಕೋಲಾದಲ್ಲಿ ರಾಜಾ ನಾಯ್ಕ ಹಾಗೂ ಲಕ್ಕಣ್ಣ ಗಾಂವ್ಕರ ಅವರು ಮಟ್ಕಾ ಬುಕ್ಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಹಳಿಯಾಳದಲ್ಲಿ ಪಾನ್ ಅಂಗಡಿ ನಡೆಸುವ ದುರ್ಗಾನಗರದ ಪರಶುರಾಮ ಬೇರು ಬೈಲಪ್ಪಗೋಳ್ ಹಾಗೂ ಸಿದ್ದಾಪುರದಲ್ಲಿ ರಾಜಮಾರ್ಗದ ರಾಜು ಪೈ ಮಟ್ಕಾ ಆಟದ ಒಡೆಯರಾಗಿದ್ದಾರೆ. ಈ ಎಲ್ಲರ ಹೆಸರು ಸರ್ಕಾರಿ ದಾಖಲೆಗಳಲ್ಲಿ ನಮೂದಾಗಿದ್ದು, ಅನೇಕ ಬಾರಿ ಅವರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಆದರೆ, ಅವರರೂ ತಮ್ಮ ಹಳೆ ಚಾಳಿ ಬಿಟ್ಟಿಲ್ಲ. ಪೊಲೀಸರು ಸಹ ತಮ್ಮ ದಾಳಿ ನಿಲ್ಲಿಸಿಲ್ಲ.