ಸಣ್ಣ ಸಣ್ಣ ಮಕ್ಕಳ ನೀಲಿ ಚಿತ್ರವನ್ನು ವಾಟ್ಸಪ್ ಮೂಲಕ ಅವರಿವರಿಗೆ ಕಳುಹಿಸಿದ ಮುಂಡಗೋಡಿನ ಬೌದ್ಧ ಬಿಕ್ಕುವಿಗೆ ಸಂಕಷ್ಟ ಎದುರಾಗಿದೆ. ಆ ಸನ್ಯಾಸಿಗೂ ವಿನಾಯತಿ ನೀಡದೇ ಪೊಲೀಸರು ಪ್ರಕರಣ ದಾಖಲಿಸಿದ್ದು, ಕಾನೂನು ಪಾಠ ಶುರು ಮಾಡಿದ್ದಾರೆ.
ಮುಂಡಗೋಡಿನ ತಟ್ಟಿಹಳ್ಳಿ ನಗ್ರೆಹೌಸ್ ಬಳಿಯ ಸೋನಮ್ ಚೋಮ್ಫೆಲ್ ಅವರು ಬೌದ್ಧ ಸನ್ಯಾಸಿಯಾಗಿದ್ದಾರೆ. ಲಾಮಾ ಕ್ಯಾಂಪ್ 2ರಲ್ಲಿ ಅವರು ವಾಸಿಸುತ್ತಿದ್ದಾರೆ. ಬಾಲ್ಯದಲ್ಲಿಯೇ ಅವರ ತಂದೆ ಟೆಂಬಾ ಟ್ಸೆರಿಂಗ್ ಅವರು ಮಗನನ್ನು ಆಶ್ರಮಕ್ಕೆ ಬಿಟ್ಟಿದ್ದು, ಧರ್ಮ ಅಧ್ಯಯನಕ್ಕೆ ಕೂರಿಸಿದ್ದರು. ಆದರೆ, ಧರ್ಮದ ದಾರಿಯಲ್ಲಿ ನಡೆಯಬೇಕಿದ್ದ ಸೋನಮ್ ಚೋಮ್ಫೆಲ್ ಪೊಲಿ ಸ್ನೇಹಿತರ ಸಹವಾಸ ಮಾಡಿದರು. ಅಡ್ಡದಾರಿ ಹಿಡಿದ ಅವರು ತಮ್ಮ ವಾಟ್ಸಪ್ ಮೂಲಕ ಅವರಿವರಿಗೆ ಕೆಟ್ಟ ಸಂದೇಶ ಕಳುಹಿಸುವುದನ್ನು ರೂಢಿಸಿಕೊಂಡರು.
ಸುಪ್ರೀo ಕೋರ್ಟ ಆದೇಶದ ಅನ್ವಯ ಭಾರತ ಸರ್ಕಾರ 2019ರ ಏಪ್ರಿಲ್ 29ರಂದು ಕಾಣೆಯಾದ ಹಾಗೂ ಶೋಷಿತ ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆಗೆ ಪ್ರತ್ಯೇಕ ಅಂತರ್ಜಾಲ ವ್ಯವಸ್ಥೆಯನ್ನು ತಂದಿತು. ಇದಕ್ಕಾಗಿ ಎನ್‌ಸಿಎಂಸಿಇ ಎಂಬ ವೆಬ್ ಪೋರ್ಟಲನ್ನು ಸರ್ಕಾರ ತೆರೆಯಿತು. ಆ ವೆಬ್ ಪೋರ್ಟಲಿನಲ್ಲಿ ಕರ್ನಾಟಕಕ್ಕೆ ಸಂಬAಧಿಸಿದ ಮಕ್ಕಳ ದೂರುಗಳು ದಾಖಲಾಗುತ್ತಿದ್ದು, ಅದನ್ನು ಬೆಂಗಳೂರಿನ ಸಿಐಡಿ ತಂಡ ಗಮನಿಸಿತು. 2025ರ ಜನವರಿ 28ರಂದು ಬೌದ್ಧ ಬಿಕ್ಕು ಸೋನಮ್ ಚೋಮ್ಫೆಲ್ ಅವರು ವಾಟ್ಸಪ್ ಮೂಲಕ ಮಕ್ಕಳ ಅಶ್ಲೀಲ ಚಿತ್ರ ಹರಡುತ್ತಿರುವುದು ಗೊತ್ತಾಯಿತು.
ಈ ಪ್ರಕರಣ ಉತ್ತರ ಕನ್ನಡ ಜಿಲ್ಲೆಗೆ ಸಂಬoಧಿಸಿದ್ದoದ ವಿಷಯ ಕಾರವಾರದ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಟ್ಟಿತು. ಸಿಇಎನ್ ಪೊಲೀಸ್ ಠಾಣೆಯ ಉಪನಿರೀಕ್ಷಕ ಮಂಚೇಶ್ವರ ಚಂದಾವರ ಅವರು ಲಭ್ಯ ದಾಖಲೆ ಪರಿಶೀಲಿಸಿದರು. ಅಪ್ರಾಪ್ತರ ಅಶ್ಲೀಲ ವಿಡಿಯೋ ಅಪ್ಲೋಡ್ ಮಾಡಿದ್ದು ಮೇಲ್ನೋಟಕ್ಕೆ ಸಾಭೀತಾಗಿದ್ದರಿಂದ ಸೋನಮ್ ಚೋಮ್ಫೆಲ್ ವಿರುದ್ಧ ಪ್ರಕರಣ ದಾಖಲಿಸಿದರು.