ನಸುಕಿನಲ್ಲಿ ತಾಯಿಯ ಎದೆಹಾಲು ಕುಡಿದ ಮಗು ಬೆಳಕು ಹರಿಯುವುದರೊಳಗೆ ಸಾವನಪ್ಪಿದೆ. ಎರಡು ತಿಂಗಳ ಹಸುಗೂಸಿನ ಮೂಗಿನಿಂದ ರಕ್ತ ಸುರಿದಿದ್ದು, ಆಸ್ಪತ್ರೆಗೆ ಕರೆದೊಯ್ದರೂ ಮಗುವನ್ನು ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ.
ಕಾರವಾರದ ಹಬ್ಬುವಾಡದಲ್ಲಿ
ಗಾಯತ್ರಿ ಸುಧೀರ ವರ್ಣೇಕರ್ ಅವರು ವಾಸವಾಗಿದ್ದಾರೆ. 31 ವರ್ಷದ ಅವರು ಎರಡು ತಿಂಗಳ ಹಿಂದೆ ಎರಡನೇ ಮಗುವಿಗೆ ತಾಯಿ ಆಗಿದ್ದಾರೆ. ಕೆಲ ದಿನಗಳ ಆ ಮಗುವಿನ ನಾಮಕರಣವೂ ನಡೆದಿದ್ದು, ಮಗುವಿಗೆ ಆದಿತಿ ಎಂದು ಹೆಸರಿಟ್ಟಿದ್ದರು. ಆ ಮಗು ಎಲ್ಲರಂತೆಯೇ ಆರೋಗ್ಯವಾಗಿದ್ದು, ಲವಲವಿಕೆಯಿಂದ ಕೂಡಿತ್ತು.
ರಾತ್ರಿ ಗಾಯತ್ರಿ ವರ್ಣೇಕರ್ ಅವರು ಮಗು ಆದಿತಿ ಜೊತೆ ಮಲಗಿದ್ದರು. ಅಗಸ್ಟ 1ರ ನಸುಕಿನ 4 ಗಂಟೆಗೆ ಆ ಮಗು ಅಳಲು ಶುರು ಮಾಡಿತು. ಅಳುವ ಮಗುವಿಗೆ ಗಾಯತ್ರಿ ಅವರು ಎದೆಹಾಲು ಕುಡಿಸಿದರು. ಅದಾದ ನಂತರ ಮಗು ನಿದ್ದೆಗೆ ಜಾರಿದ್ದು, ಗಾಯತ್ರಿ ಅವರು ಮಲಗಿದರು. ಬೆಳಗ್ಗೆ 7.30ಕ್ಕೆ ಗಾಯತ್ರಿ ವರ್ಣೇಕರ್ ಅವರು ಎದ್ದಾಗ ಮಗುವಿನ ಮೂಗಿನಿಂದ ರಕ್ತ ಬರುತ್ತಿತ್ತು. ಜೊತೆಗೆ, ಬಾಯಿಂದಲೂ ನೊರೆ ಶುರುವಾಗಿತ್ತು.
ಆತಂಕಗೊಂಡ ಗಾಯತ್ರಿ ವರ್ಣೇಕರ್ ಅವರು ಮಗುವನ್ನು ಎಬ್ಬಿಸುವ ಪ್ರಯತ್ನ ಮಾಡಿದರು. ಮಗು ಏಳದ ಕಾರಣ ಕೂಡಲೇ ಸುಧೀರ ವರ್ಣೆಕರ್ ಅವರನ್ನು ಕರೆದರು. ಪಾಲಕರಿಬ್ಬರು ಸೇರಿ ಮಗುವನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅಷ್ಟರೊಳಗೆ ಮಗು ಉಸಿರು ನಿಲ್ಲಿಸಿತ್ತು.