ಕಾರವಾರ – ಯಶವಂತಪುರ ನಡುವೆ ಸಂಚರಿಸುವ ಎಕ್ಸ್ಪ್ರೆಸ್ ರೈಲು 11 ದಿನಗಳ ಕಾಲ ಓಡಾಟ ನಿಲ್ಲಿಸಿದೆ.
ದಕ್ಷಿಣ ಪಶ್ಚಿಮ ರೈಲ್ವೆಯ ಶ್ರಿವಾಗಿಲು ಹಾಗೂ ಯಡಕುಮಾರಿ ವಿಭಾಗಗಳ ನಡುವೆ ರೈಲ್ವೆ ಹಳಿಗಳ ಟ್ಯಾಂಪಿoಗ್ ಮತ್ತು ಮೆಟೀರಿಯಲ್ ಕಾಮಗಾರಿ ನಡೆಯುತ್ತಿರುವ ಹಿನ್ನಲೆ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.
ಈ ಕುರಿತು ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಧಾ ಕೃಷ್ಣಮೂರ್ತಿ ಅವರು ಮಾಹಿತಿ ನೀಡಿದ್ದಾರೆ. `ಯಶವಂತಪುರದಿAದ ಕಾರವಾರಕ್ಕೆ ತೆರಳುವ (ರೈಲು ಸಂಖ್ಯೆ 16515) ಎಕ್ಸ್ಪ್ರೆಸ್ ರೈಲು ಅಕ್ಟೋಬರ್ 5, 7, 9, 12, 14, 21, 23, 26, 28, 30 ಹಾಗೂ ನವೆಂಬರ್ 2ರಂದು ಸಂಚರಿಸುವುದಿಲ್ಲ. ಹಾಗೆಯೇ, ಕಾರವಾರದಿಂದ ಯಶವಂತಪುರಕ್ಕೆ ಮರಳುವ (ರೈಲು ಸಂಖ್ಯೆ 16516) ಎಕ್ಸ್ಪ್ರೆಸ್ ರೈಲು ಅಕ್ಟೋಬರ್ 6, 8, 10, 13, 15, 22, 24, 27, 29, 31 ಮತ್ತು ನವೆಂಬರ್ 3ರಂದು ರದ್ದಾಗಲಿದೆ’ ಎಂದವರು ಹೇಳಿದ್ದಾರೆ.
ಈ ಮಾರ್ಗದಲ್ಲಿ ಪ್ರಯಾಣಿಸಲು ಯೋಜಿಸಿರುವ ಪ್ರಯಾಣಿಕರು ಬದಲಿ ವ್ಯವಸ್ಥೆ ಕಲ್ಪಿಸಿಕೊಳ್ಳುವುದು ಉತ್ತಮ. ರೈಲು ರದ್ದತಿಯ ದಿನಾಂಕಗಳನ್ನು ಗಮನದಲ್ಲಿಟ್ಟುಕೊಂಡು ಟಿಕೆಟ್ ಕಾಯ್ದಿರಿಸಿಕೊಳ್ಳುವಂತೆ ರೈಲ್ವೆ ನಿಗಮ ಮನವಿ ಮಾಡಿದೆ.