ಹೆಗಡೆಕಟ್ಟಾದ ಪಾನ್ ಅಂಗಡಿ ಮಾಲಕ ವಿನಾಯಕ ನಾಯ್ಕ ಅವರು ಅಂಕಿ-ಸoಖ್ಯೆಗಳ ಮಾರಾಟ ಆಟಕ್ಕಿಳಿದಿದ್ದಾರೆ. ಪಾನ್ ಅಂಗಡಿಯ ವ್ಯಾಪಾರದಲ್ಲಿ ಒಳ್ಳೆಯ ಲಾಭವಿದ್ದರೂ ಹೆಚ್ಚಿನ ಹಣದಾಸೆಗೆ ಅವರು ಅಡ್ಡದಾರಿಹಿಡಿದಿದ್ದಾರೆ.
ಶಿರಸಿ ಹೆಗಡೆಕಟ್ಟಾದಲ್ಲಿ ವಿನಾಯಕ ಈರಪ್ಪ ನಾಯ್ಕ ಅವರು ವಾಸವಾಗಿದ್ದಾರೆ. ಪಾನ್ ಶಾಫ್ ನಡೆಸುವ ಅವರಿಗೆ ಉತ್ತಮ ಆದಾಯವಿದ್ದರೂ ಅತಿ ಆಸೆಗೆ ಬಿದ್ದು ಅಕ್ರಮ ಚಟುವಟಿಕೆ ನಡೆಸಲು ಆಸಕ್ತರಾಗಿದ್ದಾರೆ. ಇದಕ್ಕಾಗಿ ಅವರು ಶಿರಸಿ-ಯಾಣ ರಸ್ತೆಯ ಮಕ್ಕಳತಾಯಿಮನೆಗೆ ಹೋಗುವ ರಸ್ತೆ ಬದಿ ನಿಂತು ಮಟ್ಕಾ ಆಟ ಶುರು ಮಾಡಿದ್ದಾರೆ. ಆ ಮಾರ್ಗವಾಗಿ ಸಂಚರಿಸುವ ಜನರನ್ನು ಮಾತನಾಡಿಸಿ ಅವರಿಗೆ ಆಮೀಷ ಒಡ್ಡಿ ಹಣ ಪಡೆಯುತ್ತಿದ್ದಾರೆ.
ಅಗಸ್ಟ 4ರ ಸಂಜೆ 6.30ಕ್ಕೆ ಅವರು ಮಟ್ಕಾ ಸಂಖ್ಯೆಗಳ ಮಾರಾಟ ಮಾಡುವಾಗ ಪಿಸೈ ಅಶೋಕ ರಾಥೋಡ್ ಅವರ ಬಳಿ ಸಿಕ್ಕಿ ಬಿದ್ದಿದ್ದಾರೆ. ವಿನಾಯಕ ನಾಯ್ಕ ಅವರು ಜನರಿಗೆ ಆಮೀಷ ಒಡ್ಡಿ ಸಂಗ್ರಹಿಸಿದ್ದ 650ರೂ ಹಣ, ಬಾಲ್ ಪೆನ್ ಜೊತೆ ಇನ್ನಿತರ ಪರಿಕ್ಕರಗಳನ್ನು ಪೊಲೀಸರು ಜಪ್ತು ಮಾಡಿದ್ದಾರೆ.