ಹೆಗಡೆ ಬಳಿಯ ಭಾಸ್ಕರ ಮುಕ್ರಿ ಅವರು ಜಾಂಡಿಸ್ ರೋಗಕ್ಕೆ ತುತ್ತಾಗಿದ್ದು, ಆಸ್ಪತ್ರೆಗೆ ಸಾಗಿಸುವ ವೇಳೆ ಆಂಬುಲೆನ್ಸಿನಲ್ಲಿಯೇ ಸಾವನಪ್ಪಿದ್ದಾರೆ. ದುಡಿಯುವ ವಯಸ್ಸಿನ ಮಗನನ್ನು ಕಳೆದುಕೊಂಡಿದ್ದರಿoದ ಭಾಸ್ಕರ ಮುಕ್ರಿ ಅವರ ತಾಯಿ ಸಾವಿತ್ರಿ ಮುಕ್ರಿ ಅವರು ಕಣ್ಣೀರಾಗಿದ್ದಾರೆ.
ಕುಮಟಾದ ಹೆಗಡೆ ಬಳಿಯ ಚಿಟ್ಟಕಂಬಿಯಲ್ಲಿ ಭಾಸ್ಕರ ಸಾರಿಂಗ ಮುಕ್ರಿ ಅವರು ವಾಸವಾಗಿದ್ದರು. 33 ವರ್ಷದ ಅವರು ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದರು. ಭಾಸ್ಕರ ಮುಕ್ರಿ ಅವರು ಸರಾಯಿ ಕುಡಿಯುವ ವ್ಯಸನಕ್ಕೆ ಅಂಟಿಕೊoಡಿದ್ದು, ಐದು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರಿಗೆ ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗಿತ್ತು.
ಚಿಕಿತ್ಸೆ ನಂತರ ಮನೆಗೆ ಮರಳಿದ್ದ ಅವರು ನಿತ್ಯದ ಕೆಲಸದಲ್ಲಿ ತೊಡಗಿಸಿಕೊಳ್ಳುವ ಪ್ರಯತ್ನದಲ್ಲಿದ್ದರು. ಅಗಸ್ಟ 6ರಂದು ಭಾಸ್ಕರ ಮುಕ್ರಿ ಅವರು ಹೊಟ್ಟೆ ನೋವು ಎಂದು ಚೀರಾಟ ಶುರು ಮಾಡಿದರು. ಅವರ ಕಣ್ಣು ಮತ್ತು ಕೈಯಲ್ಲಿ ಹಳದಿ ಬಣ್ಣ ಕಾಣಿಸಿದ್ದು, ಕುಟುಂಬದವರು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದರು. ಹೆಗಡೆ ಬಳಿಯ ತಣ್ಣೀರಕುಳಿ ಕ್ರಾಸಿನ ಬಳಿ ತೆರಳುವಾಗ ಆಂಬುಲೆನ್ಸಿನಲ್ಲಿಯೇ ಅವರು ಉಸಿರು ನಿಲ್ಲಿಸಿದರು.
ಅದಾಗಿಯೂ, ಕುಟುಂಬದವರು ಭಾಸ್ಕರ ಮುಕ್ರಿ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದು ವೈದ್ಯರು ಸಾವನ್ನು ದೃಢಪಡಿಸಿದರು. ಭಾಸ್ಕರ್ ಮುಕ್ರಿ ಅವರು ಜಾಂಡಿಸ್ ರೋಗದಿಂದ ಸಾವನಪ್ಪಿದ ಸಾಧ್ಯತೆಯಿರುವ ಬಗ್ಗೆ ಕುಟುಂಬದವರು ಹೇಳಿದ್ದಾರೆ.
`ಆರೋಗ್ಯದ ಬಗ್ಗೆ ಕಾಳಜಿವಹಿಸಿ’