ಕಾರವಾರದ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳಿಬ್ಬರು ದಿಢೀರ್ ಆಗಿ ಕಾಣೆಯಾಗಿದ್ದಾರೆ. ಅವರಿಬ್ಬರ ಹುಡುಕಾಟಕ್ಕೆ ಪಾಲಕರು ಹರಸಾಹಸಪಟ್ಟಿದ್ದು, ಎಲ್ಲಿಯೂ ಸಿಗದ ಕಾರಣ ಪಾಲಕರು ಪೊಲೀಸರ ಮೊರೆ ಹೋಗಿದ್ದಾರೆ.
ಕಾರವಾರದ ನಂದನಗದ್ದಾ ಬಾಡದ ಪ್ರೀಮಿಯರ್ ಸೈನ್ಸ್ ಆಂಡ್ ಕಾಮರ್ಸ್ ಪಿ ಯು ಕಾಲೇಜಿನಲ್ಲಿ ಪೂನಮ್ ಜಿತೇಂದ್ರ ವೈಷ್ಣವ್ (16) ಹಾಗೂ ಸಾಗರ ಬಿಷನುಪದ ಪೋರಿಯಾ (17) ಅವರು ಕಲಿಯುತ್ತಿದ್ದರು. ಅವರಿಬ್ಬರು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ವಾಣಿಜ್ಯ ವಿಭಾಗವನ್ನು ಆರಿಸಿಕೊಂಡಿದ್ದರು. ಜೂನ್ 24ರಂದು ಅವರಿಬ್ಬರು ಒಟ್ಟಿಗೆ ಕಾಣೆಯಾಗಿದ್ದಾರೆ. ಆ ದಿನ ಕಾಲೇಜಿಗೆ ಬಂದಿದ್ದ ಅವರು ಮರಳಿ ಮನೆಗೆ ಹೋಗಿಲ್ಲ. ಅವರು ಎಲ್ಲಿ ಹೋದರು? ಎಂಬುದು ಯಾರಿಗೂ ಗೊತ್ತಾಗಿಲ್ಲ.
ಪೂನಮ್ ಜಿತೇಂದ್ರ ವೈಷ್ಣವ್ ಅವರು ಬಿಳಿ ಮೈಬಣ್ಣಹೊಂದಿದ್ದು ಸಾಧಾರಣ ಮೈಕಟ್ಟಿನವರಾಗಿದ್ದಾರೆ. 5.6 ಅಡಿ ಎತ್ತರವಿದ್ದಾರೆ. ಹಿಂದಿ, ರಾಜಸ್ತಾನಿ, ಕೊಂಕಣಿ ಜೊತೆ ಇಂಗ್ಲೀಷ್’ನ್ನು ಅವರು ಮಾತನಾಡುತ್ತಾರೆ. ಕಾಲೇಜಿನಿಂದ ಕಾಣೆಯಾಗುವಾಗ ಅವರು ಬಿಳಿ ಬಣ್ಣದ ಚೂಡಿದಾರ ಟಾಪ್ ಮತ್ತು ಬ್ಲೂö್ಯ ಜೀನ್ಸ್ ಪ್ಯಾಂಟ್ ಧರಸಿದ್ದರು. ಸಾಗರ ಬಿಷನುಪದ ಪೋರಿಯಾ ಅವರು ಗೋಧಿ ಮೈಬಣ್ಣದವರಾಗಿದ್ದು, ಸಾಧಾರಣ ಮೈಕಟ್ಟುಹೊಂದಿದ್ದಾರೆ. 5.5 ಅಡಿ ಎತ್ತರವಿದ್ದಾರೆ. ಸಾಗರ ಅವರು ಹಿಂದಿ, ಬಂಗಾಲಿ, ಕೊಂಕಣಿ ಹಾಗೂ ಇಂಗ್ಲೀಷ್ ಭಾಷೆ ಬಲ್ಲವರಾಗಿದ್ದಾರೆ. ಕಾಲೇಜಿನಿಂದ ಕಾಣೆ ಆಗುವ ವೇಳೆ ಅವರು ಬೂದು ಬಣ್ಣದ ಟೀ ಶರ್ಟ್ ಮತ್ತು ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಸಿದ್ದರು.
ಅವರಿಬ್ಬರ ಹುಡುಕಾಟ ಮುಂದುವರೆದಿದ್ದು, ಅವರ ಪತ್ತೆಗೆ ಪೊಲೀಸರು ಸಾರ್ವಜನಿಕರ ಸಹಾಯ ಯಾಚಿಸಿದ್ದಾರೆ. ಹೀಗಾಗಿ ಅವರು ಎಲ್ಲಾದರೂ ಕಂಡರೆ ಇಲ್ಲಿ ಫೋನ್ ಮಾಡಿ: 8277987514, 8277987555 ಅಥವಾ 9480805200