ಯಲ್ಲಾಪುರದ ಹೋಲಿ ರೋಜರಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ‍್ಯೋತ್ಸವದ ಧ್ವಜಾರಣ ನೆರವೇರಿಸಿದ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಂ ರಾಜಶೇಖರ್ ಅವರು `ಸ್ವಾತಂತ್ರ‍್ಯಕ್ಕೂ ಸ್ವೇಚ್ಛಾಚಾರಕ್ಕೂ ಇರುವ ವ್ಯತ್ಯಾಸವನ್ನು ಅರಿತು ದೇಶದ ಅಭಿವೃದ್ದಿಗೆ ಎಲ್ಲರೂ ಕೈ ಜೋಡಿಸಬೇಕು’ ಎಂದು ಕರೆ ನೀಡಿದ್ದಾರೆ.
`ನಮ್ಮ ದೇಶ, ಸಂಸ್ಕಾರ, ಸಂಸ್ಕೃತಿ ಎಲ್ಲವೂ ಹಿರಿಯರು ನೀಡಿದ ಬದುಕಿನ ಕ್ರಮವಾಗಿದೆ. ಸ್ವಾತಂತ್ರ‍್ಯ ಎಂದರೆ ಗುಲಾಮಗಿರಿಯಿಂದ ಮುಕ್ತಿ ಕೊಡಿಸಿದ ಕ್ಷಣವಾಗಿದ್ದು, ಈ ಬದುಕನ್ನು ನೀಡಿದ ಮಹನೀಯರ ಸೇವೆ ಪ್ರಾತಸ್ಮರಣೀಯ. ಹಿರಿಯ ತಲೆಮಾರಿನ ಜನ ಒಗ್ಗಟ್ಟಿನಿಂದ ನೀಡಿರುವ ಸ್ವಾತಂತ್ರ‍್ಯವನ್ನು ನಾವು ಅನುಭವಿಸುತ್ತಿದ್ದೇವೆ. ಈ ಸ್ವಾತಂತ್ರ‍್ಯದ ಸವಿ ಅತ್ಯಂತ ಅಮೂಲ್ಯ ಅದನ್ನ ಪಡೆಯಬೇಕಾದರೆ ನಡೆಸಿದ ಹೋರಾಟಗಳ ಅರಿವಿಲ್ಲದೆ ನಾವಿಂದು ದೇಶದ ಬಗ್ಗೆ ದೇಶದ ಕುರಿತು ಚಿಂತನೆ ಮಾಡುವಲ್ಲಿ ಎಡವುತ್ತಿದ್ದೇವೆ’ ಎಂದವರು ಹೇಳಿದ್ದಾರೆ.
`ಎಳೆಯ ಮನಸ್ಸಿನ ಮಕ್ಕಳಲ್ಲಿ ಸುಭದ್ರ ಸಮಷ್ಟಿ ಭಾವದ ರಾಷ್ಟ್ರದ ಕಲ್ಪನೆ ಅತ್ಯಂತ ಅಮೂಲ್ಯ. ನನ್ನ ದೇಶ ನನಗೇನು ನೀಡಿದೆ ಎನ್ನುವುದನ್ನು ಯೋಚಿಸುವುದಕ್ಕಿಂತ ದೇಶಕ್ಕಾಗಿ ನಾನೇನು ಮಾಡಬಲ್ಲೆ ಎಂದು ಚಿಂತಿಸಬೇಕು’ ಎಂದು ಕರೆ ನೀಡಿದ್ದಾರೆ. `ಸ್ವಾತಂತ್ರ‍್ಯಕ್ಕೂ ಸ್ವೇಚ್ಛಾಚಾರಕ್ಕೂ ಇರುವ ವ್ಯತ್ಯಾಸವನ್ನು ಅರಿತು ನಾವು ದೇಶವನ್ನು ಕಟ್ಟಬೇಕಾಗಿದೆ. ನಿವೃತ್ತ ಶಿಕ್ಷಕ ದಾಸಿಂತ್ ಫರ್ನಾಂಡಿಸ್ ಚಂದ್ರಶೇಖರ್ ಅವರು ಧ್ವಜವಂದನೆಯಲ್ಲಿ ಭಾಗವಹಿಸಿದ್ದು, ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಧ್ಯಾಪಕ ಆಗ್ನೇಯಲ್ ಫರ್ನಾಂಡಿಸ್, ಹಿರಿಯ ಶಿಕ್ಷಕರ ವೆಂಕಟರಮಣ ಭಟ್ಟ, ಶಿಕ್ಷಕ ನೆಲ್ಸನ್ ಗೋನ್ಸಾಲ್ವಿಸ ಮತ್ತು ಮಲ್ಲಿಕಾರ್ಜುನ ಅವರು ವಿವಿಧ ಜವಾಬ್ದಾರಿ ನಿಭಾಯಿಸಿದರು. ಸ್ವಾತಂತ್ರ‍್ಯೋತ್ಸವದ ನಿಮಿತ್ತ ನಡೆಸಿದ ದೇಶಭಕ್ತಿ ಗೀತೆ ಚಿತ್ರಕಲಾ ಸ್ಪರ್ಧೆ ಇನ್ನಿತರ ಹಲವು ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು.