ಅರಬೈಲ್ ಘಟ್ಟದ ಮೂಲೆಪಾಲ್ ಗಟಾರದಲ್ಲಿ ಅನಾಥವಾಗಿ ಬಿದ್ದ ಶವ ನೋಡಿದ ಪೊಲೀಸರು ಆ ಪ್ರಕರಣದ ಬೆನ್ನು ಬಿದ್ದಿದ್ದು, ಕೊಲೆಗಾರನನ್ನು ಬಂಧಿಸಿದ್ದಾರೆ. ಸಾವನಪ್ಪಿದ ವ್ಯಕ್ತಿ ವಿರುದ್ಧ ದರೋಡೆ ದೂರು ನೀಡಕು ಕೊಲೆಗಾರ ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದಿರುವುದು ಈ ಪ್ರಕಣದ ವಿಶೇಷ!
ಮಹಾರಾಷ್ಟ್ರದ ರಾಥಾ ಅಹ್ಮದನಗರದ ಕೇಲವಾಡ ಪ್ರಕಾಶ ಗಣಪತಿ ವಿಘೇ ಅವರು ಈಚರ್ ಲಾರಿ ಚಾಲಕರಾಗಿದ್ದರು. ಅವರ ಲಾರಿಯಲ್ಲಿ ಅದೇ ಊರಿನ ಆಕಾಶ ದಶರಥ ರಜಪೂತ ಅವರು ಕ್ಲಿನರ್ ಆಗಿ ಕೆಲಸ ಮಾಡಿಕೊಂಡಿದ್ದರು. ಅಗಸ್ಟ 12ರಂದು ಪ್ರಕಾಶ ಹಾಗೂ ಆಕಾಶ ಅವರ ನಡುವೆ ಜಗಳ ನಡೆದಿದ್ದು, ಆ ಜಗಳದ ಪರಿಣಾಮ ಆಕಾಶ ಅವರು ಕೊಲೆಯಾದರು. ಕೊಲೆ ನಡೆದ ಬಳಿಕ ಪ್ರಕಾಶ ಅವರು ಯಲ್ಲಾಪುರ ಪೊಲೀಸ್ ಠಾಣೆಗೆ ಬಂದು ‘ಆಕಾಶ ಅವರು ತನ್ನ ಕತ್ತಿನಲ್ಲಿದ್ದ ಸರ ಕದ್ದಿದ್ದಾರೆ’ ಎಂದು ದೂರು ನೀಡಲು ಬಂದಿದ್ದರು.
ಈ ವೇಳೆ ಕೊಡ್ಲಗದ್ದೆಯ ರವಿ ಕೃಷ್ಣ ಸಿದ್ದಿ ಅವರು ಪೊಲೀಸ್ ಠಾಣೆಗೆ ಆಗಮಿಸಿ ‘ಅರಬೈಲ್ ಘಟ್ಟದ ಮೂಲೆಪಾಲ್ ಬಳಿ ಶವ ಬಿದ್ದಿದೆ’ ಎಂದು ಪೊಲೀಸರಿಗೆ ಹೇಳಿದರು. ಆಗ, ಪೊಲೀಸರು ಪ್ರಕಾಶ ವಘೆ ಅವರೊಂದಿಗೆ ಮೂಲೆಪಾಲ್ ಕಡೆ ಹೋಗಿದ್ದು, ವಿಚಾರಣೆ ವೇಳೆ ಲಾರಿ ಚಾಲಕ ಪ್ರಕಾಶ ಅವರೇ ಕ್ಲಿನರ್ ಪ್ರಕಾಶ ಅವರನ್ನು ಕೊಲೆ ಮಾಡಿರುವುದು ಗೊತ್ತಾಯಿತು.
ಸಿಸಿ ಟಿವಿ ಹಾಗೂ ವಿವಿಧ ದಾಖಲೆ ಪರಿಶೀಲನೆ ಮಾಡಿದಾಗ ಪ್ರಕಾಶ ಅವರ ಲಾರಿಯಲ್ಲಿ ಆಕಾಶ ಅವರು ಇದ್ದಿದ್ದು ಬೆಳಕಿಗೆ ಬಂದಿತು. ಪ್ರಕಾಶ ಅವರು ಸಹ ಆಕಾಶ ಅವರನ್ನು ಕೊಂದು ಸಾಕ್ಷಿನಾಶ ಮಾಡಲು ಉದ್ದೇಶಿಸಿದ್ದು ಬೆಳಕಿಗೆ ಬಂದಿತು. ಕೊಲೆಗೆ ಬಳಸಿದ ಆಯುಧ, ಈಚರ್ ವಾಹನವನ್ನು ಪೊಲೀಸರು ಜಪ್ತು ಮಾಡಿದರು.
ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್, ಪಿಐ ರಮೇಶ ಹಾನಾಪುರ, ಪಿಸೈ ರಾಜಶೇಖರ ವಂದಲಿ, ಮಹಾವೀರ ಕಾಂಬಳೆ, ಸಿದ್ದಪ್ಪ ಗುಡಿ ಅವರ ಜೊತೆ ಪೊಲೀಸ್ ಸಿಬ್ಬಂದಿ ರಾಘವೇಂದ್ರ ಮೂಳೆ, ಸಂತೋಷ ಬಾಳೇರಾ, ಬಸವರಾಜ ಡಿಕೆ, ರಾಚಪ್ಪ ದನಗರ್, ಪ್ರವೀಣ ಪೂಜಾರ, ಕೆ ಎಚ್ ಮಾರುತಿ, ವಿಶ್ವನಾಥ ಜಾಯನಗೌಡರ್ ಅವರು ಈ ಕಾರ್ಯಾಚರಣೆಯಲ್ಲಿದ್ದರು. ಕಾರವಾರ ಟೆಕ್ನಿಕಲ್ ಸೆಲ್’ನ ಬಬನ ಕದಂ, ಉದಯ ಗುನಗಾ ಅವರು ಸಹಕಾರ ನೀಡಿದ್ದರು.