‘ಸಾಮಾಜಿಕ ಜಾಲತಾಣ ಬಳಸುವಾಗ ಎಚ್ಚರಿಕೆವಹಿಸುವುದು ಅಗತ್ಯ. ಒಂದೇ ಒಂದು ತಪ್ಪು ಸಂದೇಶವೂ ಸಮಾಜದ ಮೇಲೆ ಅತಿದೊಡ್ಡ ದುಷ್ಪರಿಣಾಮ ಬೀರುವ ಸಾಧ್ಯತೆಯಿದ್ದು, ಜಾಲತಾಣಗಳ ಮುಖ್ಯಸ್ಥರು ಈ ಕುರಿತು ಆಲೋಚಿಸಿ ಮುನ್ನಡೆಯಬೇಕು’ ಎಂದು ಗೋಕರ್ಣ ಪಿಐ ಶ್ರೀಧರ ಎಸ್ ಆರ್ ಅವರು ಹೇಳಿದ್ದಾರೆ.
‘ಖಾಸಗಿ ಕಾರ್ಯಕ್ರಮಗಳಲ್ಲಿ ಡ್ರೋಣ್ ಹೋರಾಟಕ್ಕೆ ಯಾವುದೇ ತೊಂದರೆ ಇಲ್ಲ. ಆದರೆ, ಸಾರ್ವಜನಿಕ ಸ್ಥಳದಲ್ಲಿ ಡ್ರೋಣ್ ಹಾರಿಸಲು ಅನುಮತಿ ಕಡ್ಡಾಯ. ವಿವಿಧ ಪ್ರದೇಶದಲ್ಲಿ ಡ್ರೋಣ್ ಹಾರಿಸುವ ಮುನ್ನ ಸಾಕಷ್ಟು ಮುನ್ನಚ್ಚರಿಕೆವಹಿಸಬೇಕು. ಜೊತೆಗೆ ಸಂಬಂಧಿಸಿದ ಪ್ರಾಧಿಕಾರದಿಂದ ಅನುಮತಿಯನ್ನುಪಡೆಯಬೇಕು. ಡ್ರೋಣ್ ಸಹ ನೋಂದಣಿಯಾಗಿದ್ದು, ಅಗತ್ಯ ಪರವಾನಿಗೆಯನ್ನುಪಡೆದಿರಬೇಕು’ ಎಂದವರು ವಿವರಿಸಿದರು.
‘ಸಾಮಾಜಿಕ ಜಾಲತಾಣಗಳನ್ನು ಬಳಸುವ ಪ್ರತಿಯೊಬ್ಬರು ಎಚ್ಚರಿಕೆಯಿಂದರಬೇಕು. ಅಶ್ಲೀಲ ಪೋಟೋ-ವಿಡಿಯೋ, ಪ್ರಚೋದನಾಕಾರಿ ಭಾಷಣ, ಸಂಘರ್ಷಗಳಿಗೆ ಕಾರಣವಾಗಬಹುದಾದ ಅಂಶಗಳ ಬಗ್ಗೆ ಪ್ರಸಾರ ಮಾಡುವ ಹಾಗಿಲ್ಲ. ಮುಖ್ಯವಾಗಿ ಮಹಿಳೆ ಹಾಗೂ ಮಕ್ಕಳ ವಿಷಯವಾಗಿ ಪ್ರಸಾರ ಮಾಡುವಾಗ ಅವರ ಖಾಸಗಿತನಕ್ಕೆ ಧಕ್ಕೆ ಆಗದ ರೀತಿ ವರ್ತಿಸಬೇಕು’ ಎಂದವರು ತಿಳಿಸಿದರು. ‘ಮಾದಕ ವಸ್ತುಗಳ ನಿಯಂತ್ರಣ ಕುರಿತು ಅರಿವು ಮೂಡಿಸುವಲ್ಲಿ ಜಾಲತಾಣಗಳ ಮುಖ್ಯಸ್ಥರು ಹೆಚ್ಚು ಮುತುವರ್ಜಿವಹಿಸಬೇಕು. ಸಂಚಾರಿ ನಿಯಮಗಳ ಪಾಲನೆ, ಕಾನೂನು ಸುವ್ಯವಸ್ಥೆ ಕುರಿತು ಜನ ಜಾಗೃತಿ ಕೆಲಸದಲ್ಲಿ ಪೊಲೀಸರ ಜೊತೆ ಕೈ ಜೋಡಿಸಬೇಕು’ ಎಂದು ಮನವಿ ಮಾಡಿದರು.
‘ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಶಿಯಲ್ ಮಿಡಿಯಾ ಮಾನಿಟಿರಂಗ್ ಸೆಲ್ ಇದ್ದು, ಪ್ರತಿಯೊಂದು ಜಾಲತಾಣಗಳ ಮೇಲೆ ವಿಶೇಷ ನಿಗಾವಹಿಸಲಾಗಿದೆ. ಅಪಾಯಕಾರಿ ಸ್ಥಳಗಳಿಗೆ ಹೋಗಿ ಪೋಟೋ-ವಿಡಿಯೋ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಪ್ರತಿ ಊರಿನಲ್ಲಿಯೂ ಬೀಟ್ ಪೊಲೀಸ್ ವ್ಯವಸ್ಥೆಯಿದ್ದು, ಆ ಭಾಗದಲ್ಲಿ ಸಕ್ರೀಯವಾಗಿರುವ ಜಾಲತಾಣ ಪ್ರಮುಖರು ಹಂಚುವ ವಿಷಯಗಳ ಕುರಿತು ಗಮನಿಸಲಾಗುತ್ತಿದೆ’ ಎಂದರು.
‘ಸಾಮಾಜಿಕ ಜಾಲತಾಣಗಳನ್ನು ಪ್ರತಿಯೊಬ್ಬರು ಸಮಾಜದ ಒಳತಿಗೆ ಬಳಸಬೇಕು. ನಕಲಿ ಐಡಿ ರಜನೆ, ಬೇರೆಯವರ ಹೆಸರಿನಲ್ಲಿ ಸಂದೇಶ ರವಾನೆ ಸೇರಿ ಜಾಲತಾಣಗಳ ದುರುಪಯೋಗ ಮಾಡುವುದು ಅಪರಾಧ’ ಎಂದು ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ವಿವರಿಸಿದರು.