20 ಲಕ್ಷ ರೂಪಾಯಿಗೂ ಅಧಿಕ ಹಣಹೊಂದಿದ್ದ ಸರ್ಕಾರಿ ನೌಕರರೊಬ್ಬರು ಆ ಹಣವನ್ನು ಡಬಲ್ ಮಾಡುವ ಆಮೀಷಕ್ಕೆ ಬಿದ್ದು, ಬ್ಯಾಂಕ್ ಖಾತೆ ಖಾಲಿ ಮಾಡಿಕೊಂಡಿದ್ದಾರೆ. ಸಂಕಷ್ಟ ಎದುರಾದಾಗ ಹೂಡಿಕೆ ಮಾಡಿದ ಹಣಹಿಂಪಡೆಯಲು ಸಾಧ್ಯವಾಗದೇ ಅವರು ತೊಂದರೆ ಅನುಭವಿಸಿದ್ದಾರೆ.
ಸದ್ಯ ಮಂಜಪ್ಪ ಟಿ ತಿಪ್ಪೇಸ್ವಾಮಿ ಅವರು ಸಿದ್ದಾಪುರದಲ್ಲಿ ವಾಸವಾಗಿದ್ದಾರೆ. ಸರ್ಕಾರಿ ನೌಕರರಾಗಿರುವ ಅವರಿಗೆ ಉತ್ತಮ ಆದಾಯ ಸಿಗುತ್ತಿದೆ. ಅದಾಗಿಯೂ, ಅವರು ತಮಗೆ ಬರುವ ಹಣವನ್ನು ಡಬಲ್ ಮಾಡಿಕೊಳ್ಳುವ ಆಸೆಗೆ ಬಿದ್ದಿದ್ದಾರೆ. ಈ ಬಗ್ಗೆ ಅರಿತ ವಂಚಕರು ಮಂಜಪ್ಪ ಅವರನ್ನು ಸಂಪರ್ಕಿಸಿ, ನಯವಾಗಿ ಮಾತನಾಡಿದ್ದಾರೆ. ಅವರ ಮಾತಿನ ಮೋಡಿಗೆ ಮರುಳಾದ ಮಂಜಪ್ಪ ಅವರು 2025ರ ಜೂನ್ 2ರಿಂದ ತಮ್ಮ ಹಣ ಹೂಡಿಕೆ ಶುರು ಮಾಡಿದ್ದಾರೆ. ಒಂದು ವರ್ಷಗಳ ಕಾಲ ಅವರು ವಂಚಕರು ಹೇಳಿದ ಕಡೆಗಳೆಲ್ಲ ಹಣ ಹೂಡಿಕೆ ಮಾಡಿದ್ದು, ಒಟ್ಟು 2072580ರೂ ಖಾಲಿ ಮಾಡಿದ್ದಾರೆ.
2026ರ ಅವಧಿಯಲ್ಲಿ ಮಂಜಪ್ಪ ಅವರಿಗೆ ಹಣಕಾಸಿನ ಅಡಚಣೆ ಶುರುವಾಗಿದೆ. ಆಗ ಅವರು ಹೂಡಿಕೆ ಮಾಡಿದ ಹಣ ಹಿಂಪಡೆಯುವ ನಿರ್ಧಾರ ಮಾಡಿದ್ದಾರೆ. ಆದರೆ, ಹೂಡಿಕೆ ಮಾಡಿದ ಹಣ ಡಬಲ್ ಆಗುವ ಬದಲು ಎಲ್ಲವೂ ಖಾಲಿಯಾಗಿದೆ. ದುಡ್ಡು ಡಬಲ್ ಮಾಡಲು ಹೋಗಿ ಮಂಜಪ್ಪ ಅವರು ಮೋಸ ಹೋಗಿದ್ದಾರೆ. ಜಾಪ್ ಪ್ಲಾಟ್ ಪಾರ್ಮ ಎಂಬ ವೇದಿಕೆ ಮೂಲಕ ವಂಚಕರು ಅವರಿಗೆ ಮೂರು ನಾಮ ಹಾಕಿದ್ದಾರೆ. ಎಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾದಲ್ಲಿ ಖಾತೆ ಹೊಂದಿದ್ದ ಮಂಜಪ್ಪ ಅವರು ತಮ್ಮ ಫೋನ್ ಫೇ ಮೂಲಕವೇ ಹಣವನ್ನು ವಂಚಕರಿಗೆ ವರ್ಗಾಯಿಸಿ ಕೈ ಸುಟ್ಟುಕೊಂಡಿದ್ದಾರೆ.
ಸದ್ಯ ತಮಗಾದ ಅನ್ಯಾಯದ ಬಗ್ಗೆ ಅವರು 1930ಗೆ ಫೋನ್ ಮಾಡಿದ್ದಾರೆ. ಆದರೆ, ಅದರಿಂದ ಯಾವ ಪ್ರಯೋಜನವೂ ಆಗಿಲ್ಲ. ಅಲ್ಲಿ ಫೋನ್ ಮಾಡಿದರೂ ಹಣ ಮರಳಿ ಬಾರದ ಕಾರಣ ಅವರು ಪೊಲೀಸ್ ದೂರು ನೀಡಿದ್ದಾರೆ. ಕಷ್ಟದ ಕಾಲದಲ್ಲಿ ಹಣ ಸಿಗದೇ ಸಮಸ್ಯೆ ಅನುಭವಿಸುತ್ತಿರುವ ಮಂಜಪ್ಪ ಅವರು `ತಮ್ಮ ಹಣ ತಮಗೆ ಮರಳಿಸಿ ಎಂದು ಅವರು ಅಂಗಲಾಚಿದ್ದಾರೆ.
`ಆಮೀಷಗಳಿಗೆ ಬಲಿಯಾಗಬೇಡಿ’