`ಮಾನವೀಯ ನೆಲೆಯಲ್ಲಿ ಅರಣ್ಯ ಅತಿಕ್ರಮಣದಾರರ ಸಮಸ್ಯೆ ಬಗೆಹರಿಸಬೇಕು ಎಂದು ಸರ್ಕಾರವೂ ಹೇಳಿದೆ. ಶಾಸಕರು ಹೇಳಿದ್ದಾರೆ. ಅದಕ್ಕೆ ವಿರುದ್ಧ ಕೆಲಸ ಮಾಡಿ, ಶಾಸಕರ ಮರ್ಯಾದೆ ತೆಗೆಯಬೇಡಿ’ ಎಂದುಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಅರಣ್ಯಾಧಿಕಾರಿಗಳಿಗೆ ಕಿವಿಮಾತು ಹೇಳಿದ್ದಾರೆ. ಈ ದಿನ ಯಲ್ಲಾಪುರ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಅಬ್ದುಲ್ ಅಜೀಜ್ ಅವರನ್ನು ಭೇಟಿ ಮಾಡಿದ ನ್ಯಾಯವಾದಿ ರವೀಂದ್ರ ನಾಯ್ಕ ಅವರು ತಾಸುಗಳ ಕಾಲ ಚರ್ಚೆ ನಡೆಸಿದ್ದಾರೆ.
`ಸರ್ಕಾರ ಅರಣ್ಯವಾಸಿಗಳ ಪರವಾದ ಧೋರಣೆ ಹೋಂದಿದೆ. ಅದಾಗಿಯೂ, ಅರಣ್ಯ ಸಿಬ್ಬಂದಿ ಕಾನೂನುಬಾಹಿರ ಕೆಲಸ ಮಾಡಿ ಶಾಸಕರ ಗೌರವಕ್ಕೆ ಕುಂದು ಬರುವಂತೆ ಮಾಡುತ್ತಿದ್ದಾರೆ. ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಅರಣ್ಯ ಸಿಬ್ಬಂದಿ ಮಾನವೀಯತೆಯ ಮೌಲ್ಯದ ಅಡಿಯಲ್ಲಿ ಕೆಲಸ ಮಾಡಬೇಕು’ ಎಂದವರು ಹೇಳಿದ್ದಾರೆ. ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರದಲ್ಲಿ ಉಂಟಾಗುತ್ತೀರುವ ಆತಂಕ ಮತ್ತು ಸಮಸ್ಯೆಗಳು ಕುರಿತು ಎಸಿಎಫ್ ಹೇಮಾವತಿ ಭಟ್, ಆರ್‌ಎಫ್‌ಓ ಸಂಘಮೇಶ್ವರ, ಬಸವರಾಜ್ ಮತ್ತು ಎಮ್ ಎಚ್ ನಾಯ್ಕ ಅವರ ಜೊತೆಯೂ ಅತಿಕ್ರಮಣದಾರರು ಚರ್ಚೆ ನಡೆಸಿದರು.
ಈ ವೇಳೆ `ಈಚೆಗೆ ಶಿರಸಿಯಲ್ಲಿ ಮುಖ್ಯ ಅರಣ್ಯ ಸಂರಕ್ಷಣಾದಿಕಾರಿ ಟಿ ಹಿರೇಲಾಲ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಅರಣ್ಯವಾಸಿಗಳೊಂದಿಗೆ ಜರುಗಿದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಕ್ಕೆ ಬದ್ಧ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಅಬ್ದುಲ್ ಅಜೀಜ್ ಅವರು ಹೇಳಿದರು. `ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳಿಗೆ ಅರ್ಜಿ ವಿಲೇವಾರಿ ಆಗುವವರೆಗೂ ಆತಂಕ ಪಡೆಸಲಾಗಗುವುದಿಲ್ಲ’ ಎಂದು ಭರವಸೆ ನೀಡಿದರು. ಈ ಸಭೆಯಲ್ಲಿ ಸಂಘಟನೆಯ ತಾಲೂಕಾಧ್ಯಕ್ಷ ಭೀಮಸೀ ವಾಲ್ಮೀಕಿ, ಜಿಲ್ಲಾ ಸಂಚಾಲಕರಾದ ಚಂದ್ರಶೇಖರ ಪೂಜಾರಿ ವಟಗೇರಿ, ರಾಜೇಶ್ ಮಿತ್ರ ನಾಯ್ಕ ತೆಂಗಿನಕೇರಿ, ಸೀತಾರಾಮ ನಾಯ್ಕ ಕುಂದರಗಿ , ಪ್ರಶಾಂಕ ಜೈನ ಅಟಬೈಲ್, ಸುಬ್ರಾಯ ಹೆಗಡೆ ಆನಗೋಡ, ವಿನೋದ ತಳೇಕರ್, ಜಿ ವಿ ಹೆಗಡೆ ನಂದೋಳ್ಳಿ ರಾಘವೇಂದ್ರ ಕುಣಬಿ, ಶಿವರಾಮ ಆಚಾರಿ, ನಾಗೇಂದ್ರ ಮರಾಠಿ, ಗೀತಾ ಮರಾಠಿ, ಬಸ್ತಾöಂವ್ ಡಿಸೋಜ ಕಣ್ಣಿಗೇರಿ ಇದ್ದರು.