ರೈತರಿಗೆ ಬೆಳೆ ಸಾಲ ನೀಡದ ಬಸವೇಶ್ವರ ಸೇವಾ ಸಹಕಾರಿ ಸಂಘಕ್ಕೆ ರೈತರು ಮುತ್ತಿಗೆ ಹಾಕಿದ್ದು, ಸೊಸೈಟಿಗೆ ಬೀಗ ಜಡಿದು ಪ್ರತಿಭಟಿಸಿದ್ದಾರೆ. ಹಳಿಯಾಳದ ಬೆಳವಟಗಿಯ ರೈತರು ಸೊಸೈಟಿ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದಾರೆ.
ಸಾಲ ಸಿಗದ ಕಾರಣ ಸಿಟ್ಟಾದ ರೈತರು ಸೊಸೈಟಿ ನಿರ್ದೇಶಕರನ್ನು ಕಚೇರಿಯಲ್ಲಿ ಕೂಡಿ ಹಾಕಿದ್ದಾರೆ. ಆಡಳಿತದಲ್ಲಿರುವವರ ವಿರುದ್ಧ ಆಕ್ರೋಶವ್ಯಕ್ತಪಡಿಸಿ ಹೊರಗಿನಿಂದ ಬೀಗ ಜಡಿದಿದ್ದಾರೆ. ಇದರಿಂದ ಸೊಸೈಟಿ ಅಧಿಕಾರಿ, ಸಿಬ್ಬಂದಿ ಜೊತೆ ಕಚೇರಿಯೊಳಗಿದ್ದ ನಿರ್ದೇಶಕರು ಕಂಗಾಲಾಗಿದ್ದಾರೆ. `ಮೂರು ತಿಂಗಳಿನಿAದ ಕಾದರೂ ಸೊಸೈಟಿ ಬೆಳೆ ಸಾಲ ನೀಡಿಲ್ಲ. ಸಾಲ ಸಿಗದ ಕಾರಣ ಸಮಸ್ಯೆಯಾಗಿದೆ’ ಎಂದು ಅಲ್ಲಿನವರು ದೂರಿದ್ದಾರೆ. `ಹಣದ ಕೊರತೆಯಿಂದ ಬಿತ್ತನೆ, ಗೊಬ್ಬರ ಖರೀದಿ ಸಾಧ್ಯವಾಗಿಲ್ಲ. ಸಾಲ ಕೇಳಲು ನಿತ್ಯ ಸೊಸೈಟಿಗೆ ಬಂದರೂ ಪ್ರಯೋಜನವಾಗಿಲ್ಲ’ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ. `150ಕ್ಕೂ ಅಧಿಕ ರೈತರಿಗೆ ಸಾಲ ಸಿಕ್ಕಿಲ್ಲ. ಈ ಬಗ್ಗೆ ಪ್ರಶ್ನಿಸಿದರೂ ಉತ್ತರಿಸುವವರಿಲ್ಲ’ ಎಂದು ದೂರಿದ್ದಾರೆ.
`ರೈತರ ಸಮಸ್ಯೆ ಬಗೆಹರಿಸದೇ ಇದ್ದರೆ ಪ್ರತಿಭಟನೆ ಮುಂದುವರೆಸುವುದು ಅನಿವಾರ್ಯ’ ಎಂದು ಅಲ್ಲಿನವರು ಎಚ್ಚರಿಸಿದ್ದಾರೆ. `ಸಮಯಕ್ಕೆ ಸರಿಯಾಗಿ ಸಾಲ ವಿತರಿಸಬೇಕು. ಸೊಸೈಟಿ ನಿರ್ದೇಶಕರು ಸಹ ರೈತರೇ ಆಗಿದ್ದು, ಸಮಸ್ಯೆ ಬಗೆಹರಿಸಬೇಕು’ ಎಂದು ಆಗ್ರಹಿಸಿದ್ದಾರೆ.