ಅರಣ್ಯ ಹಕ್ಕು ಕಾಯದೆಯ ಮೌಲ್ಯತೆ ಮತ್ತು ಅರಣ್ಯ ಹಕ್ಕು ಕಾಯಿದೆಯಲ್ಲಿ ತಿರಸ್ಕರಿಸಿದ ಅರ್ಜಿಯ ಒಕ್ಕಲೆಬ್ಬಿಸುವ ಪ್ರಕರಣಕ್ಕೆ ಸಂಬoಧಿಸಿ ಅಕ್ಟೊಬರ್ 14ರಂದು ತ್ರೀಸದಸ್ಯತ್ವ ನ್ಯಾಯಮೂರ್ತಿಗಳ ನ್ಯಾಯ ಪೀಠದಲ್ಲಿ ಅಂತಿಮ ವಿಚಾರಣೆ ಜರುಗಲಿದೆ.
ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಸೂರ್ಯಕಾಂತ, ಜಾಯಿಮಲ್ಯ ಮತ್ತು ಬಜಾಶಿ ಒಳಗೊಂಡ ತ್ರೀ ಸದಸ್ಯತ್ವ ನ್ಯಾಯಪೀಠ ವಿಚಾರಣೆ 41ನೇ ಕ್ರಮ ಸಂಖ್ಯೆಯಲ್ಲಿ ವಿಚರಣೆಗೆ ಬರಲಿದೆ. ಅರಣ್ಯ ಹಕ್ಕು ಕಾಯಿದೆ ಮೌಲ್ಯತೆ ರದ್ದು ಪಡಿಸುವ ಉದ್ದೇಶದಿಂದ 2008ರಲ್ಲಿ ವೈಲ್ಡ್ ಲೈಪ್ ಪಸ್ಟ್ ಸೊಸೈಟಿ ಮತ್ತು ಇನ್ನಿತರ ಎಂಟು ಪರಿಸರ ಸಂಘಟನೆಗಳು ಸುಪ್ರೀಂ ಕೊರ್ಟಗೆ ಅರ್ಜಿ ಸಲ್ಲಿಸಿ ಕೇಂದ್ರ ಸರ್ಕಾರ ಮತ್ತು ದೇಶದ 31 ರಾಜ್ಯಗಳ ವಿರುದ್ದ ಅರ್ಜಿ ಸಲ್ಲಿಸಿದ ಪ್ರಕರಣ ಇದಾಗಿದೆ.
ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಸಂಬoಧಿಸಿ ನಿರಂತರ ಹೋರಾಟ ಮಾಡುತ್ತಿರುವ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕರಣದ ವಿಷಯವಾಗಿ ಸ್ವಪ್ರೇರಣೆಯಿಂದ ದೆಹಲಿಗೆ ಹೋಗಿದ್ದಾರೆ. ಸುಪ್ರೀಂ ಕೊರ್ಟನಲ್ಲಿ ನಿವೃತ್ತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ್‌ದಾಸ ಅವರ ಮಾರ್ಗದರ್ಶನದಲ್ಲಿ ಉನ್ನತ ಮಟ್ಟದ ಕಾನೂನು ತಜ್ಞರ ತಂಡಗಳ ಮೂಲಕ ಅರಣ್ಯವಾಸಿಯ ಪರವಾದ ವಿಚಾರವನ್ನು ಮಂಡಿಸಲು ಅವರು ಸಿದ್ಧತೆ ನಡೆಸಿದ್ದಾರೆ.