ಕಸ್ತೂರಿ ರಂಗನ್ ವರದಿ ವಿರೋಧಿಸಿ ಅಂಕೋಲಾದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದವರು ಪ್ರತಿಭಟನೆ ನಡೆಸಿದ್ದಾರೆ. ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಜನ ತಹಶೀಲ್ದಾರ್ ಕಚೇರಿ ಎದುರು ಜಮಾಯಿಸಿ ತಮ್ಮ ಆಕ್ರೋಶ-ಅಸಮಧಾನ ಹೊರಹಾಕಿದ್ದಾರೆ.
ಸ್ವಾತಂತ್ರ್ಯ ಸಂಗ್ರಮ ಸ್ಮಾರಕ ಭವನ ಎದುರಿನಿಂದ ಪ್ರತಿಭಟನೆ ಶುರು ಮಾಡಿದ ಜನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಈ ವರದಿ ವಿರುದ್ಧ ಜನಾಂದೋಲನ ನಡೆಸಿದ್ದಾರೆ. ಅದಾದ ನಂತರ ತಹಶೀಲ್ದಾರ್ ಕಚೇರಿ ಮೂಲಕ ಮುಖ್ಯಮಂತ್ರಿಗಳಿಗೆ ಪತ್ರ ರವಾನಿಸಿದ್ದಾರೆ. `ಕಸ್ತೂರಿ ರಂಗನ್ ವರದಿ ಬಗ್ಗೆ ಅಧಿವೇಶನದಲ್ಲಿ ವಿಶೇಷ ಚರ್ಚೆ ನಡೆಸಬೇಕು. ಅರಣ್ಯವಾಸಿಗಳ ಹಕ್ಕುಗಳನ್ನು ರಕ್ಷಿಸಲು ಅಗತ್ಯ ಕ್ರಮ ಜರುಗಿಸಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ಅವರು ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ರೈತ ಸಂಘದ ತಾಲೂಕ ಸಮಿತಿ ಅಧ್ಯಕ್ಷ ಗೌರೀಶ ನಾಯಕ, ಕಾರ್ಯದರ್ಶಿ ಸಂತೋಷ ನಾಯ್ಕ, ಪದಾದಿಕಾರಿಗಳಾದ ಉದಯ ನಾಯ್ಕ ಹೊಸಗದ್ದೆ, ವೆಂಕಟರಮಣ ಗೌಡ, ಮಾದೇವ ಗೌಡ ಮೀನಾಕ್ಷಿ ಗೌಡ, ಗುರು ನಾಯ್ಕ ಅಗಸೂರ, ಸಂದೀಪ್ ನಾಯ್ಕ ಸುಂಕಸಾಳ ಮುಂತಾದವರು ಪ್ರತಿಭಟನೆಯ ನೇತ್ರತ್ವವಹಿಸಿದ್ದಾರೆ. ನಾಗರಾಜ ಹೆಗಡೆ ಕೊಡ್ಲಗದ್ದೆ, ಬಾಲಚಂದ್ರ ಶೆಟ್ಟಿ, ರಮಾನಂದ ಅಚವೆ, ಜ್ಯೋತಿ ನಾಯ್ಕ, ವಿಠ್ಠಲ ಗೌಡ, ಕೇಶವ ನಾಯಕ, ಚಂದ್ರು ಗೌಡ ಶಿರಗುಂಜಿ, ಶಿವರಾಮ ಪಟಗಾರ ಬ್ರಹ್ಮೂರು ಸೇರಿ ನೂರಾರು ಜನ ಕಸ್ತೂರಿ ರಂಗನ್ ವರದಿ ವಿರುದ್ಧ ಕಿಡಿಕಾರಿದ್ದಾರೆ.