ಮೇಷ ರಾಶಿ: ನೀವು ಮಾಡುವ ಹೊಸ ಪ್ರಯತ್ನಗಳು ಯಶಸ್ಸು ಕಾಣಲಿದೆ. ಕುಟುಂಬದಲ್ಲಿ ಸಂತೋಷ ವಾತಾವರಣ ಮೂಡಿಬರಲಿದೆ. ಸ್ನೇಹಿತರ ಜೊತೆ ಸಂಭಾಷಣೆ ಮಾಡಿದರೆ ಸಹಾಯ ಆಗುತ್ತದೆ.
ವೃಷಭ ರಾಶಿ: ಆರೋಗ್ಯದ ಕಡೆ ಗಮನಹರಿಸುವುದು ಮುಖ್ಯ. ಆರ್ಥಿಕ ವಿಷಯದಲ್ಲಿ ಯಶಸ್ಸು ಸಿಗಲಿದೆ. ಕೆಲಸದ ವಿಷಯದಲ್ಲಿ ಜಾಗೃತಿವಹಿಸಿ.
ಮಿಥುನ ರಾಶಿ: ಹಳೆಯ ಸ್ನೇಹಿತರ ಸಂಪರ್ಕ ಸಾಧ್ಯವಿದೆ. ಬಾಕಿ ಕೆಲಸಗಳು ಪೂರ್ಣವಾಗಲಿದೆ. ವ್ಯವಹಾರದಲ್ಲಿ ಲಾಭ ಸಿಗಲಿದೆ.
ಕರ್ಕ ರಾಶಿ: ಆರೋಗ್ಯದಲ್ಲಿ ಸುಧಾರಣೆ ಆಗಲಿದೆ. ಹೊಸ ಜವಾಬ್ದಾರಿಗಳು ನಿಮಗೆ ಸಿಗಲಿದೆ. ಹಣಕಾಸು ಒತ್ತಡ ಕಡಿಮೆ ಆಗಲಿದ್ದು, ಕುಟುಂಬದಲ್ಲಿಯೂ ಸಾಮರಸ್ಯ ಮೂಡಲಿದೆ.
ಸಿಂಹ ರಾಶಿ: ಮಕ್ಕಳ ವಿಷಯವಾಗಿ ಸಂತೋಷ ಮೂಡಲಿದೆ. ಕೆಲಸದ ವಿಷಯದಲ್ಲಿ ತೃಪ್ತಿ ಸಿಗಲಿದೆ. ಸ್ನೇಹಿತರ ಸಹಾಯ ಸ್ಮರಿಸಿ.
ಕನ್ಯಾ ರಾಶಿ: ಆರೋಗ್ಯದಲ್ಲಿ ಏರಿಳಿತ ಸಾಮಾನ್ಯ. ನಿಮ್ಮ ವ್ಯವಹಾರ ವೃದ್ಧಿಗಾಗಿ ಡಿಜಿಟಲ್ ವೇದಿಕೆಗಳನ್ನು ಬಳಸಿಕೊಳ್ಳಿ. ಕುಟುಂಬದ ಜೊತೆ ಮುಕ್ತವಾಗಿ ಮಾತನಾಡಿ.
ತುಲಾ ರಾಶಿ: ವೃತ್ತಿಯಲ್ಲಿ ಬದಲಾವಣೆ ಸಾಧ್ಯವಿದ್ದು, ಹೊಸ ಸಂಪರ್ಕಗಳು ಲಾಭ ತರಲಿದೆ. ಪ್ರೀತಿ-ಪ್ರೇಮದ ವಿಷಯಗಳು ಸರಿಯಾಗಿ ಕೂಡಿ ಬರಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಲಿದೆ.
ವೃಶ್ಚಿಕ ರಾಶಿ: ಉದ್ಯೋಗದಲ್ಲಿ ಪ್ರಗತಿ ಕಾಣಲಿದೆ. ನಿಮ್ಮ ಯೋಜನೆಗಳು ಪೂರ್ಣವಾಗಲಿದೆ. ಆಹಾರ ಸೇವನೆ ವಿಷಯದಲ್ಲಿ ಮುನ್ನಚ್ಚರಿಕೆ ಅಗತ್ಯ.
ಧನು ರಾಶಿ: ನಿಮ್ಮ ಕೆಲಸದ ವಿಷಯದಲ್ಲಿ ಶ್ರಮ ಅಗತ್ಯ. ವ್ಯಾಪಾರದಲ್ಲಿನ ಒಪ್ಪಂದಗಳು ಕೈಗೂಡಲಿದೆ. ಕುಟುಂಬದಲ್ಲಿನ ಒಡನಾಟ ಆಪ್ತವಾಗಿರಲಿದೆ.
ಮಕರ ರಾಶಿ: ಈ ದಿನ ಜಗಳ ಮಾಡಿದರೆ ವಿಕೋಪಕ್ಕೆ ತೆರಳುವ ಸಾಧ್ಯತೆಗಳಿವೆ. ಹಣಕಾಸು ವಿಷಯದಲ್ಲಿ ಸುಧಾರಣೆ ಸಾಧ್ಯವಿದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಯೋಚಿಸಿ.
ಕುಂಭ ರಾಶಿ: ಉದ್ಯೋಗದಲ್ಲಿ ಬದಲಾವಣೆ ಲಕ್ಷಣಗಳಿವೆ. ಉದ್ಯೋಗ ಸ್ಥಳದಲ್ಲಿ ಒತ್ತಡಗಳು ಬರಲಿದೆ. ಮನೆಯಲ್ಲಿನ ಸಮಸ್ಯೆಗಳು ದೂರವಾಗಲಿದೆ.
ಮೀನ ರಾಶಿ: ಕೆಲಸದಲ್ಲಿ ಒತ್ತಡ ಕಡಿಮೆ ಆಗಲಿದ್ದು, ನಿಮ್ಮ ಕೆಲಸ ಬೇರೆಯವರ ಗಮನಸೆಳೆಯುತ್ತದೆ. ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆವಹಿಸಿ. ಕುಟುಂಬದಲ್ಲಿ ಸಂತೋಷ ವಾತಾವರಣ ಸಿಗಲಿದೆ.