ಬನವಾಸಿ ಬಳಿಯ ಭಟ್ಟರಕೆರೆಗೆ ಈಜಲು ಹೋಗಿದ್ದ ಸುಜಯ್ ಚೆನ್ನಯ್ಯ ಅವರು 15 ಅಡಿ ಆಳಕ್ಕೆ ಹೋಗಿ ಸಾವನಪ್ಪಿದ್ದಾರೆ. ಮಾರಿಕಾಂಬಾ ಲೈಫ್‌ಗಾರ್ಡನವರು ಕೆರೆ ಆಳದಿಂದ ಅವರ ದೇಹ ಹೊರಗೆಳೆದಿದ್ದಾರೆ.
ಬನವಾಸಿ ಬಳಿಯ ಸುಗಾವಿಯಲ್ಲಿ ಸುಜಯ್ ಕೃಷ್ಣ ಚೆನ್ನಯ್ಯ ಅವರು ವಾಸವಾಗಿದ್ದರು. 17 ವರ್ಷದ ಅವರು ಮಂಗಳವಾರ ಮೂವರು ಸ್ನೇಹಿತರ ಜೊತೆ ಸೇರಿ ಈಜಲು ನಿರ್ಧರಿಸಿದ್ದರು. ಅದಕ್ಕಾಗಿ ಅವರು ಸುಗಾವಿಯ ಭಟ್ಟರಕರೆ ಬಳಿ ಹೋಗಿದ್ದರು. ಸ್ನೇಹಿತರಿಬ್ಬರು ದಡದಲ್ಲಿರುವಾಗ ಸುಜಯ್ ಅವರು ನೀರಿಗೆ ಹಾರಿದರು. ಕೆರೆಯ ಮಧ್ಯಭಾಗದವರೆಗೂ ಅವರು ಆರಾಮಾಗಿ ಈಜಿದರು. ಆದರೆ, ಅಲ್ಲಿ ಅವರು ಆಯಾಸಗೊಂಡಿದ್ದು, ಮರಳಿ ಬರಲಾಗದೇ ಸಮಸ್ಯೆ ಅನುಭವಿಸಿದರು. ಅಲ್ಲಿಯೇ ಅವರು ಮುಳುಗಲು ಶುರು ಮಾಡಿದರು.
ಇದನ್ನು ನೋಡಿದ ಸ್ನೇಹಿತರಿಬ್ಬರು ದೊಡ್ಡದಾಗಿ ಬೊಬ್ಬೆ ಹೊಡೆದರು. ಅಲ್ಲಿ ಯಾರೂ ಇರದ ಕಾರಣ ಸಹಾಯ ಸಿಗಲಿಲ್ಲ. ಕೂಡಲೇ ಗ್ರಾಮದ ಕಡೆ ಓಡಿ ಜನರಿಗೆ ವಿಷಯ ಮುಟ್ಟಿಸಿದರು. ಊರಿನವರು ಮಾರಿಕಾಂಬಾ ಲೈಫ್‌ಗಾರ್ಡ ಸಿಬ್ಬಂದಿಗೆ ಫೋನ್ ಮಾಡಿದರು. ಎಲ್ಲರೂ ಕೆರೆ ಬಳಿ ಬಂದು ಶೋಧ ಶುರು ಮಾಡಿದ್ದು, 15 ಅಡಿ ಆಳದಲ್ಲಿ ಸುಜಯ ಚೆನ್ನಯ್ಯ ಅವರ ಶವ ಕಾಣಿಸಿತು. ರಕ್ಷಣಾ ಸಿಬ್ಬಂದಿ ಶವವನ್ನು ಮೇಲೆತ್ತಿದರು. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಕಾನೂನು ಕ್ರಮ ಜರುಗಿಸಿದ್ದಾರೆ.