`ಕಸ್ತೂರಿ ರಂಗನ್ ವರದಿಯ ಅವೈಜ್ಞಾನಿಕ ಅಂಶಗಳ ಬಗ್ಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಬೆಳಕು ಚೆಲ್ಲಿದೆ. ಈ ವೇದಿಕೆ ಬಿಡುಗಡೆ ಮಾಡಿದ ಕೈಪಿಡಿ ಜನಪ್ರತಿನಿಧಿಗಳಿಗೂ ಮಾರ್ಗದಶಕವಾಗಲಿದೆ’ ಎಂದು ಕರ್ನಾಟಕ ಗಡಿ ಹಾಗೂ ನದಿಗಳ ರಕ್ಷಣಾ ಆಯೋಗ ಅಧ್ಯಕ್ಷ ಎಚ್ ಎನ್ ನಾಗಮೋಹನದಾಸ ಅವರು ಹೇಳಿದ್ದಾರೆ.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯವರು ಸಿದ್ಧಪಡಿಸಿದ ಕೈಪಿಡಿ ಓದಿದ ಅವರು ಅಲ್ಲಿನ ಅಂಶಗಳ ಬಗ್ಗೆ ಮಾತನಾಡಿದ್ದು, `ಕೇಂದ್ರ ಸರ್ಕಾರದ ಅರಣ್ಯ ಇಲಾಖೆಯು ಕಸ್ತೂರಿ ರಂಗನ್ ವರದಿಗೆ 7ನೇ ಅಧಿಸೂಚನೆ ಪ್ರಕಟಿಸಿದೆ. ಈ ಬಗ್ಗೆ ನ್ಯಾಯವಾದಿ ರವೀಂದ್ರ ನಾಯ್ಕ ಅವರು ಜನಜಾಗೃತಿಯ ಕೈಪಿಡಿ ರಚಿಸಿದ್ದಾರೆ. ಅದರಲ್ಲಿ ಗಾಡ್ಗೀಳ್ದ ಸಮಿತಿ ಉದ್ದೇಶ, ಗಾಡ್ಗೀಳ್ ಸಮಿತಿಯ ಪ್ರತಿರೋಧಕ್ಕೆ ಕಾರಣ, ಕಸ್ತೂರಿ ರಂಗನ್ ಸಮಿತಿಯ ಉದ್ದೇಶ ಹಾಗೂ ಕಸ್ತೂರಿ ರಂಗನ್ ವರದಿ ಮತ್ತು ಗಾಡ್ಗೀಳ್ ವರದಿಯ ವ್ಯತ್ಯಾಸಗಳ ಬಗ್ಗೆ ಬರೆಯಲಾಗಿದೆ. ಮುಖ್ಯವಾಗಿ, ಕಸ್ತೂರಿ ರಂಗನ್ ವರದಿಯ ಅವೈಜ್ಞಾನಿಕ ಆಕ್ಷೇಪಗಳ ವಿವರವಾದ ಅಂಶ ಮತ್ತು ಲೋಪಗಳನ್ನು ವಿಸ್ತರಿಸಲಾಗಿದೆ’ ಎಂದವರು ವಿಶ್ಲೇಷಿಸಿದರು.
`ರಾಜ್ಯ ಸರ್ಕಾರದ ಸಚಿವ ಸಂಪೂಟ ಸಮಿತಿ ರಚಿಸಿ, ಸಚಿವ ಸಂಪೂಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯ ಹಾಗೂ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಾದ ಶಿಫಾರಸ್ಸುಗಳ ಪ್ರಮುಖ ಅಂಶಗಳನ್ನ ಉಲ್ಲೇಖಿಸಲಾಗಿದೆ. ಯಥಾವತ್ತಾಗಿ ವರದಿಯನ್ನು ಜಾರಿಗೆ ತಂದಲ್ಲಿ ಜನಸಾಮಾನ್ಯರಿಗೆ ಸಮಸ್ಯೆ ಉಂಟಾಗುವ ಹಿನ್ನಲೆಯಲ್ಲಿ ಹೋರಾಟಗಾರರ ವೇದಿಕೆಯು ರಾಜ್ಯ ಸರ್ಕಾರಕ್ಕೆ ಪ್ರಮುಖ ಶಿಫಾರಸ್ಸು ಸಲಹೆಗಳು ಕೈಪಿಡಿಯಲ್ಲಿ ಸೂಚಿಸಲಾಗಿದೆ. ಕಸ್ತೂರಿ ರಂಗನ್ ಸಮಿತಿಯು ವರದಿಯಲ್ಲಿ ಪರಿಸರ ರಕ್ಷಣೆ, ಸಂರಕ್ಷಣೆ ಮತ್ತು ಅಭಿವೃದ್ದಿಯ ಹಿನ್ನಲೆಯಲ್ಲಿ ವರದಿಯಲ್ಲಿ ಬೆಂಬಲಿಸು ಕೈಪಿಡಿಯಲ್ಲಿ ಪ್ರಸ್ತಾಪಿಸಲಾಗಿದೆ’ ಎಂದವರು ವಿವರಿಸಿದರು.