ಬೆಂಗಳೂರಿಗೆ ಹೋಗುವಾಗಲೂ 42 ಗ್ರಾಂ ತೂಕದ ಸರ ಮೈಮೇಲೆ ಧರಿಸಿದ್ದ ಯಲ್ಲಾಪುರದ ಉಮ್ಮಚ್ಗಿ ರಧೀಕ್ ನಾಯರ್ ಅವರ ಮೇಲೆ ದಾಳಿ ನಡೆದಿದೆ. ಸುರೇಬೈಲಿನ ಪರಶುರಾಮ ಸಿದ್ದಿ, ಲಕ್ಷಣ ಸಿದ್ದಿ ಹಾಗೂ ರಾಮಾ ಸಿದ್ದಿ ಸೇರಿ ಅವರನ್ನು ಥಳಿಸಿದ್ದಾರೆ. ಇದಕ್ಕೆ ರಧೀಕ್ ನಾಯರ್, ರಧೀಶ್ ನಾಯರ್, ರೂಪಾ ನಾಯರ್ ಅವರು ಸಹ ಪ್ರತಿದಾಳಿ ಮಾಡಿದ್ದಾರೆ.
ಸೆಪ್ಟೆಂಬರ್ 22ರಂದು ಉಮ್ಮಚ್ಗಿ ಬಸ್ ನಿಲ್ದಾಣದ ಬಳಿ ಈ ಗಲಾಟೆ ನಡೆದಿದೆ. ಉಮ್ಮಚ್ಗಿಯ ಇಂಜಿನಿಯರ್ ವಿದ್ಯಾರ್ಥಿ ರಿಧೀಕ್ ರಿಧೇಶ್ ನಾಯರ್ ಅವರು ಬೆಂಗಳೂರಿಗೆ ಹೋಗಲು ನಿರ್ಧರಿಸಿದ್ದು, ಅದಕ್ಕಾಗಿ ತಮ್ಮ ಕುಟುಂಬದ ಜೊತೆ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಆಗ, ಅಲ್ಲಿ ಪರಶುರಾಮ ಸಿದ್ದಿ ಅವರು ಆಗಮಿಸಿದ್ದಾರೆ. ರಿಧೀಕ್ ನಾಯರ್ ಅವರು ಪರಶುರಾಮ ಸಿದ್ದಿ ಅವರನ್ನು ಗುರಾಯಿಸಿದ್ದಾರೆ. ಇದರಿಂದ ಕೆರಳಿದ ಪರಶುರಾಮ ಸಿದ್ದಿ ಅವರು ಗುರಾಯಿಸಿದನ್ನು ಪ್ರಶ್ನಿಸಿದ್ದಾರೆ. ಈ ವೇಳೆ ರಿಧೀಕ್ ನಾಯರ್ ಅವರು ಪರಶುರಾಮ ಸಿದ್ದಿ ಅವರಲ್ಲಿ ಹಳೆಯ ಕೇಸ್ ಒಂದನ್ನು ಹಿಂಪಡೆಯುವAತೆ ಒತ್ತಾಯಿಸಿದ್ದು, ಆ ವೇಳೆ ಗಲಾಟೆ ಶುರುವಾಗಿದೆ.
ರಧೀಶ ರಘುನಾಥ ನಾಯರ್ ಹಾಗೂ ರೂಪಾ ರದೀಶ್ ನಾಯರ್ ಸೇರಿ ಪರಶುರಾಮ ಸಿದ್ದಿ ಅವರ ಮೇಲೆ ದಾಳಿಗೆ ಪ್ರಯತ್ನಿಸಿದ್ದಾರೆ. ಆಗ, ಪರಶುರಾಮ ಸಿದ್ದಿ ಅವರು ಲಕ್ಷಣ ಸಿದ್ದಿ ಹಾಗೂ ರಾಮಾ ಸಿದ್ದಿ ಅವರನ್ನು ಕರೆಯಿಸಿದ್ದಾರೆ. ಆ ಮೂವರು ಸೇರಿ ಈ ಮೂವರಿಗೆ ಹೊಡೆದಿದ್ದಾರೆ. ಈ ವೇಳೆ ಲಕ್ಷಣ ಸಿದ್ದಿ ಅವರು ರಧಿಕ್ ನಾಯರ್ ಅವರ ಕತ್ತಿನಲ್ಲಿದ್ದ ಸರ ನೋಡಿದ್ದಾರೆ. ಅದನ್ನು ಹಿಡಿದು ಎಳೆದಿದ್ದಾರೆ. ಈ ಗಲಾಟೆಯ ಬಗ್ಗೆ ನಂತರ ಎರಡು ಕಡೆಯವರು ಪೊಲೀಸರಿಗೆ ದೂರಿದ್ದಾರೆ. ಪೊಲೀಸರು ಎರಡು ಕಡೆಯವರಿಂದ ಪ್ರಕರಣ ದಾಖಲಿಸಿ ತನಿಖೆ ಶುರು ಮಾಡಿದ್ದಾರೆ.