ರಾಜ್ಯದ ಶಕ್ತಿ ಪೀಠಗಳಲ್ಲಿ ಒಂದಾದ ಶಿರಸಿ ಮಾರಿಕಾಂಬಾ ದೇವಾಲಯ ಶರನ್ನವರಾತ್ರಿಯ ಸಂಭ್ರಮಕ್ಕೆ ಸಜ್ಜಾಗಿದೆ. ಅಕ್ಟೊಬರ್ 3ರಿಂದಲೇ ಇಲ್ಲಿ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳ ಜೊತೆ ಕ್ರೀಡಾ ಹಾಗೂ ವಿವಿಧ ಸ್ಪರ್ಧೆಗ ಶುರುವಾಗಲಿದೆ.
ಮಾರಿಕಾಂಬಾ ದೇವಾಲಯದಲ್ಲಿ ಗುರುವಾರ ದೇವಿಗೆ ಪೂಜೆ ಸಲ್ಲಿಸಿ ಬಳಿಕ ನವರಾತ್ರಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಗಿದೆ. ನಂತರ ದೇವಾಲಯದ ಅಧ್ಯಕ ್ಷರವಿ ಬೆಳ್ಳೇಮನೆ ಅವರು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ. `ಅಕ್ಟೊಬರ್ 11ರಿಂದ 20ರವರೆಗೆ ಪ್ರತಿ ದಿನ ಬೆಳಗ್ಗೆ 6 ಗಂಟೆಯಿAದ 8 ಗಂಟೆಯವರೆಗೆ ಭಜನಾ ಕಾರ್ಯಕ್ರಮಗಳು, ಸಪ್ತಶತಿ ಪಾರಾಯಣ ಹಾಗೂ ಪಲ್ಲವ ಪಾರಾಯಣ ನಡೆಯಲಿದೆ. ಪ್ರತಿ ದಿನ ಸಂಜೆ 7ರಿಂದ ಕೀರ್ತನೆ ಕಾರ್ಯಕ್ರಮ ನಡೆಯಲಿದೆ. ಕೀರ್ತನಾ ಕಲಾವಿದರಾದ ವಿ ಮಾಲಿನಿ, ಮಧುಸೂಧನ ದಾಸರು, ಸುಮಿತ್ರನಂದ ಬೆಂಗಳೂರು ನಡೆಸಿಕೊಡಲಿದ್ದಾರೆ. ಅ.20ರಂದು ವಿಜಯದಶಮಿ ಅಂಗವಾಗಿ ಪಡಲಿಗೆ ಉತ್ಸವ, ಸೀಮೋಲ್ಲಂಘನ, ಪಲ್ಲಕ್ಕಿ ಉತ್ಸವ, ಕೋಟೆಕೆರೆ ಗದ್ದುಗೆಯ ಮೇಲೆ ಮಾರಿಕಾಂಬಾ ದೇವಿಯ ಪಲ್ಲಕ್ಕಿ ಉತ್ಸವ, ಕಲಶ ವಿಸರ್ಜನೆ ಇನ್ನಿತರ ಕಾರ್ಯಕ್ರಮಗಳು ನಡೆಯಲಿವೆ’ ಎಂದವರು ಹೇಳಿದ್ದಾರೆ.
`ಅಕ್ಟೊಬರ್ 11ರಿಂದ 9ರವರೆಗೂ ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಯಲಿವೆ. ಅ.11ರಂದು ಚದುರಂಗ ಸ್ಪರ್ಧೆ, ಭಕ್ತಿಗೀತೆಗಳ ಸ್ಪರ್ಧೆ, ಸಮೂಹ ದೇಶಭಕ್ತಿಗೀತೆಗಳ ಸ್ಪರ್ಧೆ ನಡೆಯಲಿದೆ. ಅ.12ರಂದು ಭಗವದ್ಯೀತೆ ಕಂಠಪಾಠ ಸ್ಪರ್ಧೆ, ಶಾಸತ್ರೀಯ ನೃತ್ಯ, ಭರತನಾಟ್ಯ ಸ್ಪರ್ಧೆ, ಅ.13ರಂದು ರಂಗವಲ್ಲೀ ಸ್ಪರ್ಧೆ, ಜಾನಪದ ಹಾಡುಗಳ ಸ್ಪರ್ಧೆ, ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಭರತನಾಟ್ಯ ಸ್ಪರ್ಧೆ ನಡೆಯಲಿದೆ. ಅ.14ರಂದು ಧ್ಯಾನ ಮಾಲಿಕೆ ಸ್ಪರ್ಧೆ, ಹಳ್ಳಿ ಹಾಡು ಸ್ಪರ್ಧೆ, ಅ.15ರಂದು ಕರಕುಶಲ ವಸ್ತುಗಳ ಸ್ಪರ್ಧೆ ಹಾಗೂ ಪ್ರದರ್ಶನ, ಜಾನಪದ ಗುಂಪು ನೃತ್ಯ ಸ್ಪರ್ಧೆ, ಅ.16ರಂದು ಸಾಮಾನ್ಯ ಜ್ಞಾನ ಸ್ಪರ್ಧೆ, ಅಂಗನವಾಡಿ ಪುಟಾಣಿಗಳಿಗಾಗಿ ನೃತ್ಯ ಸ್ಪರ್ಧೆ, ಅ.17ರಂದು ಆರತಿ ತಾಟಿನ ಸ್ಪರ್ಧೆ, ಭಾವಗೀತೆ ಸ್ಪರ್ಧೆ, ಅ.18ರಂದು ಚಿತ್ರಕಲೆ ಸ್ಪರ್ಧೆ, ಚಿಕ್ಕ ಮಕ್ಕಳ ಫ್ಯಾನ್ಸಿ ಡ್ರೆಸ್ ಸ್ಪರ್ಧೆ ಹಾಗೂ ಅ. 19ರಂದು ಚಿತ್ರಕಲೆ ಸ್ಪರ್ಧೆ, ಚಿಕ್ಕ ಮಕ್ಕಳ ಫ್ಯಾನ್ಸಿ ಡ್ರೆಸ್ ಸ್ಪರ್ಧೆ ಆಯೋಜಿಸಲಾಗಿದೆ’ ಎಂದವರು ತಿಳಿಸಿದರು.
`ನವರಾತ್ರಿ ಅಂಗವಾಗಿ ನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳು ಹಾಗೂ ಯುವ ಜನತೆಗಾಗಿ ಕ್ರೀಡಾ ಸ್ಪರ್ದೆಗಳು ನಡೆಯಲಿವೆ. ಅ. 3ರಂದು ಪ್ರಾಥಮಿಕ ಮತ್ತು ಕಾಲೇಜು ವಿಭಾಗದವರಿಗಾಗಿ ಖೋಖೋ ಸ್ಪರ್ಧೆ, ಕಬಡ್ಡಿ ಸ್ಪರ್ಧೆ, ವಾಲಿಬಾಲ್ ಸ್ಪರ್ಧೆ ಆಯೋಜಿಸಲಾಗಿದೆ. ಅ.4ರಂದು 40ರಿಂದ 60 ವರ್ಷದವರಿಗಾಗಿ 50 ಮೀ., 100 ಮೀ. 400 ಮೀ., 800 ಮೀ., ಗುಂಡು ಎಸೆತ ಸ್ಪರ್ಧೆ, 1 ಕಿಮೀ. ನಡುಗೆ ಸ್ಪರ್ಧೆ ಹಾಗೂ ಬಾಲ್ ಎಸೆತವನ್ನು ಮಹಿಳೆಯರು ಮತ್ತು ಪುರುಷರ ಪ್ರತ್ಯೇಕ ವಿಭಾಗಗಳಲ್ಲಿ ಆಯೋಜಿಸಲಾಗಿದೆ. ಅದರಂತೆ 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗಾಗಿ 50 ಮೀ. ಓಟ, ಗುಂಡು ಎಸೆತ, 1 ಕಿ.ಮೀ. ನಡುಗೆ ಆಯೋಜಿಸಿದ್ದೇವೆ. ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದರು. ಉಪಾಧ್ಯಕ್ಷ ಅಶೋಕ ಪವಾರ, ಧರ್ಮದರ್ಶಿಗಳಾದ ಕೇಶವ ಹೆಗಡೆ, ವಿನಾಯಕ ಶೇಟ್, ಬಾಬುದಾರ ಮುಖ್ಯಸ್ಥ ಜಗದೀಶ ಗೌಡ ಇತರರಿದ್ದರು.