ಕಾರವಾರದ ಬಿಣಗಾ ಬಳಿ ಸೈಕಲ್ ಸವಾರನಿಗೆ ಲಾರಿ ಗುದ್ದಿ ಪರಾರಿಯಾಗಿದ್ದ ಎಸ್ ಖಾಸೀಮ್ ಎಂಬಾತ 21 ವರ್ಷಗಳ ನಂತರ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಆತನಿಗೆ ಪೊಲೀಸರು ಜೈಲೂಟ ಹಾಕಿಸಿದ್ದಾರೆ.
2004ರಲ್ಲಿ ಕಾರವಾರದ ಬಿಣಗಾದಲ್ಲಿ ಅಪಘಾತ ನಡೆದಿತ್ತು. ಸೈಕಲ್ ಸವಾರಿ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಲಾರಿ ಗುದ್ದಿತ್ತು. ಪರಿಣಾಮ ಸೈಕಲ್ ಸವಾರ ಸ್ಥಳದಲ್ಲಿಯೇ ಸಾವನಪ್ಪಿದ್ದರು. ಆ ಕ್ಷಣಕ್ಕೆ ಲಾರಿ ಚಾಲಕನನ್ನು ಪೊಲೀಸರು ಬಂಧಿಸಿದ್ದರು. ಆದರೆ, ನ್ಯಾಯಾಲಯದಿಂದ ಜಾಮೀನುಪಡೆದಿದ್ದ ಬೆಂಗಳೂರಿನ ಸಿವಿ ರಾಮನ್ ನಗರದ ಲಾರಿ ಚಾಲಕ ಎಸ್ ಖಾಸೀಮ್ ನಂತರ ಈ ಕಡೆ ತಲೆಹಾಕಿರಲಿಲ್ಲ. ನ್ಯಾಯಾಲಯದ ನೋಟಿಸ್ ಜಾರಿಯಾದರೂ ನ್ಯಾಯಾಧೀಶರ ಮುಂದೆ ಮಾತ್ರ ಹಾಜರಾಗಿರಲಿಲ್ಲ.
ಪೊಲೀಸರು ಆ ದಿನದಿಂದಲೂ ಆರೋಪಿ ಹುಡುಕಾಟ ನಡೆಸುತ್ತಿದ್ದರು. ಬೆಂಗಳೂರಿನ ವಿಳಾಸದಲ್ಲಿಯೂ ಖಾಸೀಮ್ ಸಿಗುತ್ತಿರಲಿಲ್ಲ. ಆತನ ಲಾರಿಗೆ ಜಿಪಿಎಸ್ ಇದ್ದರೂ ಪೊಲೀಸರ ಬಳಿ ಆತನನ್ನು ಹಿಡಿಯಲು ಸಾಧ್ಯವಾಗಿರಲಿಲ್ಲ. ಅದಾಗಿಯೂ ಸಾಕಷ್ಟು ಸಾಹಸ ನಡೆಸಿದ ಪೊಲೀಸರು ವಿವಿಧ ತಂತ್ರಜ್ಞಾನದ ಮೊರೆ ಹೋದರು.
ಕಾರವಾರ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀಕಾಂತ ರಾಠೋಡ ಅವರು ಆರೋಪಿ ಗುರುತಿಸುವಲ್ಲಿ ಶ್ರಮಿಸಿದರು. ಬಳ್ಳಾರಿಯಲ್ಲಿ ಆತ ಅಡಿಗಿರುವುದನ್ನು ಪೊಲೀಸರು ಹುಡುಕಿದರು. ಕೊನೆಗೆ ಈ ದಿನ ಅಲ್ಲಿಗೆ ತೆರಳಿ ಖಾಸಿಮ್’ನನ್ನು ಹಿಡಿದರು. ನಂತರ ಆರೋಪಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಿದರು.