ಶಿರಸಿ ಸಿಗಂದೂರೇಶ್ವರಿ ನಿಲಯದಲ್ಲಿ ವಾಸಿಸುವ ಮಣಿರಾಜ ತಲಗೇರಿ ಅವರು ಮಾದಕ ವ್ಯಸನ ಸೇವಿಸಿ ಹೊನ್ನಾವರ ಪಿಎಸ್‌ಐ ಮಂಜುನಾಥ ಅವರ ಬಳಿ ಸಿಕ್ಕಿಬಿದ್ದಿದ್ದಾರೆ. ಪೊಲೀಸ್ ಸಿಬ್ಬಂದಿ ಪೊಲೀಸ್ ಸಿಬ್ಬಂದಿ ಪ್ರಶಾಂತ ನಾಯ್ಕ ಹಾಗೂ ಮಂಜುನಾಥ ಕೊಂತಿಕಲ್ ಸೇರಿ ಮಣಿರಾಜ ತಲಗೇರಿ ಅವರನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದಿದ್ದು, ತಪಾಸಣೆಯಲ್ಲಿ ಗಾಂಜಾ ಸೇವನೆ ದೃಢವಾಗಿದೆ.
ಶಿರಸಿ ಟಿಎಸ್‌ಎಸ್ ರಸ್ತೆಯ ಜನತಾ ಬಜಾರ್ ಬಳಿಯ ಸಿಗಂದೂರೇಶ್ವರಿ ನಿಲಯದಲ್ಲಿ ಟಿ ಎನ್ ಮಣಿರಾಜ ತಲಗೇರಿ ಅವರು ವಾಸವಾಗಿದ್ದಾರೆ. ಚಾಲಕರಾಗಿರುವ ಅವರು ಸದ್ಯ ಹೊನ್ನಾವರದ ಕೆಳಗಿನಪಾಳ್ಯದ ತ್ರಿಶೂಲ ನಿವಾಸ ಹಿಂದೆ ವಸತಿ ಕಂಡುಕೊAಡಿದ್ದಾರೆ. ಅಕ್ಟೊಬರ್ 14ರಂದು ಅವರು ಮಾದಕ ವ್ಯಸನ ಸೇವಿಸಿ ಎಲ್ಲೆಂದರಲ್ಲಿ ಅಲೆದಾಡುತ್ತಿದ್ದು, ಈ ವೇಳೆಯಲ್ಲಿಯೇ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾರೆ.
ಹೊನ್ನಾವರ ಪಿಎಸ್‌ಐ ಮಂಜುನಾಥ ಅವರು ಪೊಲೀಸ್ ಸಿಬ್ಬಂದಿ ಪ್ರಶಾಂತ ನಾಯ್ಕ, ಮಂಜುನಾಥ ಕೊಂತಿಕಲ್ ಜೀಪ್ ಚಾಲಕ ಸಂತೋಷ ನಾಯ್ಕ ಹಾಗೂ ಮತ್ತೊಬ್ಬ ಸಿಬ್ಬಂದಿ ಮಂಜುನಾಥ ಅವರ ಜೊತೆ ಸೇರಿ ಗಸ್ತು ತಿರುಗುತ್ತಿದ್ದರು. ಹೊನ್ನಾವರ ಹೆದ್ದಾರಿ ಮೂಲಕ ಅವರು ಆರೋಳ್ಳಿ ಕಡೆ ಪ್ರವೇಶಿಸಿದ್ದರು. ಹೆದ್ದಾರಿ ಇಳಿಜಾರಿನಲ್ಲಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಮಣಿರಾಜ ತಲಗೇರಿ ಅವರನ್ನು ಪೊಲೀಸರು ನೋಡಿದರು. ಹತ್ತಿರ ಹೋಗಿ ಮಾತನಾಡಿಸಿದಾಗ ಮಣಿರಾಜ ತೆಲಗೇರಿ ಅವರ ಬಾಯಿಂದ ಕೆಟ್ಟ ವಾಸನೆ ಬಂದಿತು. ಆ ಕ್ಷಣಕ್ಕೆ ಮಣಿರಾಜ ತೆಲಗೇರಿ ಅವರು ಗಾಂಜಾ ಸೇವಿಸಿರುವುದನ್ನು ಒಪ್ಪಿಕೊಂಡರು.
ಅದಾಗಿಯೂ ಪೊಲೀಸರು ಅವರನ್ನು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿದರು. ವೈದ್ಯರು ಸಹ ಗಾಂಜಾ ಸೇವನೆಯ ವರದಿ ನೀಡಿದರು. ಈ ಹಿನ್ನಲೆ ಮಣಿರಾಜ ತಲಗೇರಿ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು.