ಹೈ ಚರ್ಚ ರಸ್ತೆ ಅಂಚಿನಲ್ಲಿ ವಾಸವಾಗಿರುವ ಶಿಕ್ಷಕಿ ಮೇರಿ ಫರ್ನಾಂಡಿಸ್ ಅವರು ಗೂಗಲ್ ಮ್ಯಾಪ್ ಮೂಲಕ ಹೊಟೇಲುಗಳಿಗೆ 5* ರೇಟಿಂಗ್ ನೀಡುವ ಕೆಲಸ ಒಪ್ಪಿಕೊಂಡಿದ್ದು, ಆ ಕೆಲಸ ಮಾಡಿಯೂ 3.45 ಲಕ್ಷ ರೂ ಕಳೆದುಕೊಂಡಿದ್ದಾರೆ. ಆನ್‌ಲೈನ್ ಮೂಲಕ ಪಾರ್ಟ ಟೈಂ ಜಾಬ್ ನೀಡುವುದಾಗಿ ಶಿಕ್ಷಕಿಗೆ ಬಲೆ ಬೀಸಿದ ವಂಚಕರು ಹಣ ದೋಚಿ ಫೋನ್ ಸ್ವಿಚ್ ಆಫ್ ಮಾಡಿದ್ದಾರೆ.
ಕಾರವರದ ಹೈ ಚರ್ಚ ರಸ್ತೆ ಬಳಿ ಮೇರಿ ಫರ್ನಾಂಡಿಸ್ ಅವರು ವಾಸವಾಗಿದ್ದಾರೆ. 28 ವರ್ಷದ ಅವರು ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಬಿಡುವಿನ ವೇಳೆ ಏನಾದರೂ ಕೆಲಸ ಮಾಡಿ, ಇನ್ನಷ್ಟು ಹಣ ಮಾಡಬೇಕು ಎಂದು ಯೋಚಿಸುತ್ತಿದ್ದ ಅವರಿಗೆ ಇನಸ್ಟಾಗ್ರಾಮಿನಲ್ಲಿ `ಆನ್‌ಲೈನ್ ಜಾಬ್’ ಎಂಬ ಜಾಹೀರಾತು ಕಾಣಿಸಿದೆ. ಆ ಜಾಹೀರಾತು ಅವರ ಆಸಕ್ತಿ ಹೆಚ್ಚಿಸಿದ್ದು, ಅದನ್ನು ಕ್ಲಿಕ್ ಮಾಡಿದ್ದಾರೆ. ಆಗ, ಅವರು ಟೆಲಿಗ್ರಾಂ ಗುಂಪೊAದನ್ನು ಸೇರಿದ್ದಾರೆ.
ಆ ಗುಂಪಿನ ಅಡ್ಮಿನ್ ಶಂಕರ ವಿಜಯ ಎಂಬಾತರು ಮೇರಿ ಫರ್ನಾಂಡಿಸ್ ಅವರನ್ನು ಮಾತನಾಡಿಸಿದ್ದಾರೆ. `ಪಾರ್ಟ ಟೈಂ ಜಾಬ್ ಮಾಡುವಿರಾ?’ ಎಂದು ಪ್ರಶ್ನಿಸಿದ್ದಾರೆ. ಆಗ, ಮೇರಿ ಫರ್ನಾಂಡಿಸ್ ಅವರು `ಹೌದು’ ಎಂದು ತಲೆಯಾಡಿಸಿದ್ದಾರೆ. ನಂತರ ಇನ್ನೊಂದ ಫೋನ್ ಸಂಖ್ಯೆಯಿoದ ಮೇರಿ ಫರ್ನಾಂಡಿಸ್ ಅವರಿಗೆ ಗೂಗಲ್ ಮ್ಯಾಪ್ ಲಿಂಕ್ ಬಂದಿದೆ. `ಅಲ್ಲಿರುವ ಹೊಟೇಲುಗಳಿಗೆ 5* ರೇಟಿಂಗ್ ನೀಡಿದರೆ ಹಣಗಳಿಸಲು ಸಾಧ್ಯ’ ಎಂಬ ಸೂಚನೆಯೂ ಸಿಕ್ಕಿದೆ.
ಇದನ್ನು ನಂಬಿದ ಮೇರಿ ಫರ್ನಾಂಡಿಸ್ ಅವರು ಕೆಲಸ ಶುರು ಮಾಡಿದ್ದಾರೆ. ಆ ವೇಳೆ `ನಾವು ಹೇಳಿದ ಕಡೆ ಹೂಡಿಕೆ ಮಾಡಿದರೆ ಇನ್ನಷ್ಟು ಹಣ ಮಾಡಲು ಸಾಧ್ಯ’ ಎಂದು ಶಂಕರ ವಿಜಯ ಅವರು ಹೇಳಿದ್ದಾರೆ. ಅದನ್ನು ನಂಬಿದ ಮೇರಿ ಫರ್ನಾಂಡಿಸ್ ಅವರು 800ರೂ ಹೂಡಿಕೆ ಮಾಡಿ, ಒಂದೇ ದಿನದಲ್ಲಿ 1040ರೂ ದುಡಿದಿದ್ದಾರೆ. ಇನ್ನಷ್ಟು ಹಣ ಮಾಡುವ ಆಸೆಯಿಂದ ಸೆ 22ರಿಂದ 24ರ ಅವಧಿಯಲ್ಲಿ 3.45 ಲಕ್ಷ ರೂ ಕೂಡಿಸಿ ಅವರು ಹೇಳಿದ ಕಡೆ ಜಮಾ ಮಾಡಿದ್ದಾರೆ. ಆದರೆ, ಅದಕ್ಕೆ ಅವರಿಗೆ ಯಾವ ಲಾಭವೂ ಸಿಕ್ಕಿಲ್ಲ.
`ಆಮೀಷಗಳಿಗೆ ಬಲಿಯಾಗಬೇಡಿ’