ಮಜ್ಜಿಗೇರಿಯ ಭರತೇಶ ನೂಲ್ವಿ ಅವರು ಹೈಸ್ಕೂಲ್ ಹುಡುಗಿಯನ್ನು ಅಪಹರಿಸಿದ್ದು, ಮೂರು ದಿನಗಳ ಕಾಲ ಆ ಹುಡುಗಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಶಿಗ್ಗಾವಿಯ ರಾಕ್ ಗಾರ್ಡನ್, ಸನವಳ್ಳಿ ಡ್ಯಾಂ, ಟಿಬೇಟಿಯನ್ ಕ್ಯಾಂಪ್ ಸೇರಿ ಎಲ್ಲಾ ಕಡೆ ಹುಡುಗಿ ಜೊತೆ ಸುತ್ತಾಟ ನಡೆಸಿದ ಅವರು ದೈಹಿಕ ಸಂಪರ್ಕ ಮಾಡುವಂತೆ ಒತ್ತಡ ಹೇರಿದ್ದಾರೆ.
ಮುಂಡಗೋಡಿನ ಮಜ್ಜಿಗೇರಿಯಲ್ಲಿ ಭರತೇಶ ಹೊಳೆಪ್ಪ ನೂಲ್ವಿ ಅವರು ವಾಸವಾಗಿದ್ದಾರೆ. 25 ವರ್ಷದ ಅವರು ಕೃಷಿಕರಾಗಿದ್ದು, ಹೈಸ್ಕೂಲ್ ಹುಡುಗಿಯೊಬ್ಬರಿಗೆ ಬಲೆ ಬೀಸಿದ್ದಾರೆ. ಕಳೆದ ಒಂದು ವರ್ಷದಿಂದ ಆ ಹುಡುಗಿ ಹಿಂದೆ ಬಿದ್ದ ಅವರು ಪ್ರೀತಿಸುವ ನಾಟಕವಾಡಿದ್ದಾರೆ. 16 ವರ್ಷದ ಆ ಹುಡುಗಿಯನ್ನು ಪುಸಲಾಯಿಸಿ ಮೂರು ದಿನದ ಮಟ್ಟಿಗೆ ಅಪಹರಣವನ್ನು ಮಾಡಿದ್ದಾರೆ. ಅಕ್ಟೊಬರ್ 8ರ ಬೆಳಗ್ಗೆ 9 ಗಂಟೆಗೆ ಆ ಹುಡುಕಿ ಕಾಣೆಯಾಗಿದ್ದು, ಭರತೇಶ ನೂಲ್ವಿ ಅವರು ಆ ಹುಡುಗಿಯನ್ನು ವಿವಿಧ ಕಡೆ ಕರೆದೊಯ್ದಿದ್ದಾರೆ.
ಟಿಪೇಟಿಯನ್ ಕ್ಯಾಂಪ್, ಶಿಗ್ಗಾವಿಯ ರಾಕ್ ಗಾರ್ಡನ್, ಬಾಚಣಗಿ ಸನವಳ್ಳಿ, ಡ್ಯಾಂ ಸೇರಿ ವಿವಿಧ ಕಡೆ ಬೈಕಿನಲ್ಲಿ ಓಡಾಡಿದ ಅವರಿಬ್ಬರು ನಂತರ ಮನೆಗೆ ಮರಳಿದ್ದಾರೆ. ಈ ಸುತ್ತಾಟದ ವೇಳೆ ಭರತೇಶ ನೂಲ್ವಿ ಅವರು ಹುಡುಗಿಗೆ ಚುಂಬಿಸಿದ್ದಾರೆ. ಪದೇ ಪದೇ ಮೈ ಮುಟ್ಟಿದ್ದಾರೆ. ಜೊತೆಗೆ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಾರೆ. ಇದಕ್ಕೆ ಹುಡುಗಿ ಒಪ್ಪದೇ ಇದ್ದಾಗ `ಮದುವೆ ಆಗುವುದಿಲ್ಲ’ ಎಂದು ಹೆದರಿಸಿದ್ದಾರೆ. ಹುಡುಗಿಯ ಒಪ್ಪಿಗೆ ಇಲ್ಲದಿದ್ದರೂ ಅವರ ಗುಪ್ತಾಂಗ ಮುಟ್ಟುವ ಪ್ರಯತ್ನ ಮಾಡಿದ್ದಾರೆ. `ಈ ವಿಷಯ ಯಾರಿಗಾದರೂ ಹೇಳಿದರೂ ಮದುವೆ ಆಗುವುದಿಲ್ಲ’ ಎಂದು ಬೆದರಿಸಿದ್ದಾರೆ.
ಅಕ್ಟೋಬರ್ 12ರಂದು ಈ ಎಲ್ಲಾ ವಿಷಯ ಹುಡುಗಿಯ ಪಾಲಕರಿಗೆ ಗೊತ್ತಾಗಿದೆ. ಇದರಿಂದ ಸಿಟ್ಟಾದ ಪಾಲಕರು ಭರತೇಶ ನೂಲ್ವಿ ಅವರ ಮನೆಗೆ ಹೋಗಿ ಪ್ರಶ್ನಿಸಿದ್ದಾರೆ. ಆಗ, `ನಿನ್ನ ಮಗಳನ್ನು ನಾನೇಕೆ ಓಡಿಸಿಕೊಂಡು ಹೋಗಲಿ? ನನಗೆ ಬೇರೆ ಕೆಲಸ ಇದೆ’ ಎಂದು ಭರತೇಶ ನೂಲ್ವಿ ಅವರು ಹಾರಿಕೆ ಉತ್ತರ ನೀಡಿದ್ದಾರೆ. ಇದರಿಂದ ನೊಂದ ಹುಡುಗಿಯ ಪಾಲಕರು ತಮ್ಮ ಮಗಳಿಗೆ ಆದ ಅನ್ಯಾಯದ ಬಗ್ಗೆ ಪೊಲೀಸರಿಗೆ ದೂರಿದ್ದಾರೆ.