ಭಟ್ಕಳದ ಮೊಹಮ್ಮದ್ ಎಂಬಾತರಿಗೆ ಕೇರಳದ ಲಾರಿ ಗುದ್ದಿದ ಪರಿಣಾಮ ಅವರು ನಡುರಸ್ತೆಯಲ್ಲಿ ಹೆಣವಾಗಿದ್ದಾರೆ. ವೇಗವಾಗಿ ಲಾರಿ ಚಲಾಯಿಸಿದ ಅಭಿಲಾಶ್ ಕುಮಾರ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಫಿರ್ದೋಸ್ ನಗರದ ಮಹಮ್ಮದ್ @ ಮಹಮ್ಮದ್ ಅನಿಸ್ ಮೊತಶ್ಯಾಮ್ (18) ಅವರು ಅಲಿ ಪಬ್ಲಿಕ್ ಶಾಲೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದರು. ಕುಂದಾಪುರ ಕಡೆಯಿಂದ ಹೊನ್ನಾವರ ಕಡೆಗೆ ಅತಿವೇಗವಾಗಿ ಬಂದ ಲಾರಿ ತೆಂಗಿನಗುAಡಿ ಕ್ರಾಸ್ ಬಳಿ ಮುಂದೆ ಸಾಗುತ್ತಿದ್ದ ಸ್ಕೂಟರಿಗೆ ಡಿಕ್ಕಿ ಹೊಡೆಯಿತು. ಆ ಸ್ಕೂಟಿಯಲ್ಲಿದ್ದ ಮಹಮದ್ ಅವರು ನೆಲಕ್ಕೆ ಬಿದ್ದಿದ್ದು, ಲಾರಿಯ ಹಿಂದಿನ ಚಕ್ರ ಅವರ ತಲೆ ಒಡೆಯಿತು. ಮಹಮದ್ ಅವರು ಅಲ್ಲಿಯೇ ತಮ್ಮ ಪ್ರಾಣಬಿಟ್ಟರು.
ಬುಧವಾರ ರಾತ್ರಿ ಈ ಅಪಘಾತ ನಡೆದಿದ್ದು, ಅಪಘಾತದ ನಂತರ ಬೈಕಿಗೆ ಸಿಕ್ಕಿಬಿದ್ದು ಆ ಲಾರಿ ನಿಂತಿತು. ವೇಗವಾಗಿದ್ದ ಲಾರಿ ಅಡಿಗೆ ಬೈಕ್ ಸಿಕ್ಕಿ ಬೀಳದೇ ಇದ್ದಿದ್ದರೆ ಇನ್ನಷ್ಟು ಅವಘಡಗಳು ನಡೆಯುವ ಸಾಧ್ಯತೆಗಳಿತ್ತು. ರಕ್ತದ ಮಡುವಿನಲ್ಲಿ ಯುವಕನ ಶವ ಬಿದ್ದಿರುವುದನ್ನು ನೋಡಿ ಜನ ಜಮಾಯಿಸಿದರು. ಲಾರಿ ಚಾಲಕನ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು.
ಲಾರಿ ಚಾಲಕನನ್ನು ಬಂಧಿಸಿದ ಪೊಲೀಸರು ಲಾರಿಯನ್ನು ವಶಕ್ಕೆಪಡೆದರು. ಮಹಮದ್ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.