ಕುಮಟಾ ಅಳ್ವೆಕೊಡಿಯ ಜೈವಿಠ್ಠಲ ಕುಬಾಲ ಅವರು ಅಂಕೋಲಾದ ಸವಿತಾ ಜೋಷಿ ಅವರ ಮನೆಗೆ JCB ನುಗ್ಗಿಸಿದ್ದಾರೆ. ಸವಿತಾ ಜೋಷಿ ಅವರ ಮನೆ ಮುರಿದ ಅವರು ಆ ಮನೆಯೊಳಗಿದ್ದ ಆಭರಣ ದೋಚಿ ಪರಾರಿಯಾಗಿದ್ದಾರೆ. ಈ ದುಷ್ಕೃತ್ಯಕ್ಕೆ ಅಂಕೋಲಾದ ಉಪೇಂದ್ರ ನಾಯ್ಕ, ವಿಶ್ವನಾಥ ನಾಯ್ಕ, ಗಣೇಶ ನಾಯ್ಕ ಹಾಗೂ ವಿನಾಯಕ ಗಜಾನನ ಶೆಟ್ಟಿ ಅವರು ಕೈ ಜೋಡಿಸಿದ್ದಾರೆ.
ಅಂಕೋಲಾದ ಗಾಭೀತಕೇಣಿಯಲ್ಲಿ ಸವಿತಾ ಗಣಪತಿ ಜೋಷಿ ಅವರು ವಾಸವಾಗಿದ್ದಾರೆ. ಬಾವಿಕೇರಿ ಗ್ರಾಮ ವ್ಯಾಪ್ತಿಯಲ್ಲಿ ಅವರು ಮನೆ ಹೊಂದಿದ್ದಾರೆ. ಆ ಮನೆಯಲ್ಲಿ ಅವರು ಕುಟುಂಬದ ಜೊತೆಯಿದ್ದು, ಸೆಪ್ಟೆಂಬರ್ 21ರಂದು ಅವರ ಮನೆಗೆ ಕುಮಟಾ ಅಳ್ವೆಕೊಡಿಯ ಜೈವಿಠ್ಠಲ ಚಂದ್ರಕಾOತ ಕುಬಾಲ ಅವರು ನುಗ್ಗಿದ್ದಾರೆ. ಅಂಕೋಲಾದ ಉಪೇಂದ್ರ ನಾಯ್ಕ, ವಿಶ್ವನಾಥ ನಾಯ್ಕ, ಗಣೇಶ ನಾಯ್ಕ ಹಾಗೂ ವಿನಾಯಕ ಗಜಾನನ ಶೆಟ್ಟಿ ಅವರ ಜೊತೆ ಇನ್ನಿತರರು ಅಲ್ಲಿಗೆ ಆಗಮಿಸಿ ಗಲಾಟೆ ಮಾಡಿದ್ದಾರೆ. ಸವಿತಾ ಜೋಷಿ ಅವರ ಮನೆಗೆ ಜೆಸಿಬಿ ನುಗ್ಗಿಸಿ ಆ ಮನೆಯನ್ನು ಕೆಡವಿದ್ದಾರೆ.
ಇದನ್ನು ನೋಡಿದ ಸವಿತಾ ಜೋಷಿ ಅವರು ತಕ್ಷಣ ವಿರೋಧವ್ಯಕ್ತಪಡಿಸಿದ್ದಾರೆ. `ಯಾಕೆ ಹೀಗೆ ಮಾಡುವಿರಿ?’ ಎಂದು ಸಹ ಪ್ರಶ್ನಿಸಿದ್ದಾರೆ. ಆಗ, ಜೈವಿಠ್ಠಲ ಕುಬಾಲ ಅವರು ಸವಿತಾ ಜೋಷಿ ಅವರಿಗೆ `ಕುಂಟಿ’ ಎಂದು ನಿಂದಿಸಿದ್ದಾರೆ. ಸವಿತಾ ಜೋಷಿ ಅವರ ಬಟ್ಟೆ ಬಿಚ್ಚಿ ಅವಮಾನ ಮಾಡುವುದಾಗಿ ಉಪೇಂದ್ರ ನಾಯ್ಕ, ವಿಶ್ವನಾಥ ನಾಯ್ಕ, ಗಣೇಶ ನಾಯ್ಕ ಹಾಗೂ ವಿನಾಯಕ ಗಜಾನನ ಶೆಟ್ಟಿ ಅವರು ಬೆದರಿಸಿದ್ದಾರೆ. ಆಗ, ಜೈವಿಠ್ಠಲ ಕುಬಾಲ ಅವರು ಸವಿತಾ ಜೋಷಿ ಅವರ ಬಟ್ಟೆ ಬಿಚ್ಚಲು ಅವರ ಮೈ ಮುಟ್ಟಿದ್ದು, ಅದರಿಂದ ಮಹಿಳೆ ತಪ್ಪಿಸಿಕೊಂಡಿದ್ದಾರೆ. ಈ ವೇಳೆ ಅಲ್ಲಿದ್ದ ಜೆಸಿಬಿ ಮನೆಯೊಳಗೆ ನುಗ್ಗಿ ಅಲ್ಲಿನ ಪೀಠೋಪಕರಣ ಧ್ವಂಸ ಮಾಡಿದೆ. ಅದಾದ ನಂತರ ಆ ಎಲ್ಲಾ ಆರೋಪತರು ಮನೆಯಲ್ಲಿದ್ದ ಆಭರಣ ದೋಚದ್ದಾರೆ. ಅಲ್ಲಿದ್ದ ಹಣವನ್ನು ಎಗರಿಸಿ ಪರಾರಿಯಾಗಿದ್ದಾರೆ. ತಮಗಾದ ಅನ್ಯಾಯದ ಬಗ್ಗೆ ಸವಿತಾ ಜೋಷಿ ಅವರು ಪೊಲೀಸ್ ದೂರು ನೀಡಿ, ಕ್ರಮಕ್ಕೆ ಆಗ್ರಹಿಸಿದ್ದಾರೆ.