ಮೇಷ ರಾಶಿ: ನಿಮ್ಮ ಧೈರ್ಯ ಹಾಗೂ ನಿರಂತರ ಪ್ರಯತ್ನಕ್ಕೆ ಜಯ ಸಿಗಲಿದೆ. ಸಂಬAಧಗಳಲ್ಲಿ ಸಮಾಧಾನವಿರುತ್ತದೆ. ಆರೋಗ್ಯದ ಮೇಲೆ ಗಮನಕೊಡಿ. ಮನಸ್ಸು ಶಾಂತವಾಗಿರಲಿ.
ವೃಷಭ ರಾಶಿ: ನಿಮ್ಮ ಮನಸ್ಸು ಈ ದಿನ ಸ್ಥಿರವಾಗಿರಬೇಕು. ಕೆಲಸದಲ್ಲಿನ ಅಭಿಪ್ರಾಯಗಳು ನಿಮ್ಮ ಮೇಲೆ ಪ್ರಭಾವ ಬೀರಲಿದ್ದು, ಏನೇ ಬಂದರೂ ಎದುರಿಸಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ.
ಮಿಥುನ ರಾಶಿ: ನಿಮ್ಮ ಸಂವಹನ ಕೌಶಲ್ಯದಿಂದ ಕೆಲಸ ಸರಾಗವಾಗಲಿದೆ. ಹೊಸ ಜ್ಞಾನ ಪಡೆಯಲು ಅವಕಾಶ ಸಿಗಲಿದೆ. ಪ್ರಯಾಣದ ಯೋಗವಿದೆ.
ಕರ್ಕ ರಾಶಿ: ಗುರು-ಹಿರಿಯರ ಜೊತೆ ತಾಳ್ಮೆಯಿಂದ ನಡೆದುಕೊಳ್ಳಿ. ಒತ್ತಡ ಕಡಿಮೆ ಮಾಡಿಕೊಳ್ಳುವುದು ಅಗತ್ಯ. ಹಳೆಯ ಕೆಲಸಗಳನ್ನು ಬೇಗ ಮುಗಿಸಿ.
ಸಿಂಹ ರಾಶಿ: ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಹಣಕಾಸು ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಗೆಳೆಯರನ್ನು ಭೇಟಿ ಮಾಡುವಿರಿ.
ಕನ್ಯಾ ರಾಶಿ: ಪುನರಾವರ್ತಿತ ಸಮಸ್ಯೆಗಳು ದೂರವಾಗುವ ಲಕ್ಷಣವಿದೆ. ಪರಸ್ಪರ ಸಹಕಾರದಿಂದ ಯಶಸ್ಸು ಸಾಧ್ಯ.
ತುಲಾ ರಾಶಿ: ಆರೋಗ್ಯ ಹಾಗೂ ಆಹಾರದಲ್ಲಿ ಸಮತೋಲನ ಅಗತ್ಯವಿದೆ. ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಿಗಲಿದೆ.
ವೃಶ್ಚಿಕ ರಾಶಿ: ಗುರಿ ಸಾಧನೆಗಾಗಿ ಶ್ರಮಿಸಿ. ಅನಗತ್ಯವಾದ ವಾದ-ಜಗಳದಿಂದ ದೂರವಿರಿ. ಉತ್ತಮ ಆರೋಗ್ಯಕ್ಕಾಗಿ ವ್ಯಾಯಾಮ ಮಾಡಿ.
ಧನು ರಾಶಿ: ಪ್ರಯಾಣದ ಜೊತೆಯೇ ಕಲಿಕೆಗೆ ಅವಕಾಶವಿದೆ. ಆಧ್ಯಾತ್ಮಿಕ ಕ್ಷೇತ್ರದಲ್ಲಿ ಬೆಳವಣಿಗೆ ಸಾಧ್ಯವಿದೆ. ಹಣಕಾಸು ವಿಷಯ ಉತ್ತಮವಾಗಿರಲಿದೆ.
ಮಕರ ರಾಶಿ: ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಯಿದೆ. ಧೈರ್ಯದಿಂದ ನಡೆಯಿರಿ. ಆರ್ಥಿಕವಾಗಿ ಲಾಭ ಸಿಗಲಿದೆ.
ಕುಂಭ ರಾಶಿ: ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಿರಿ. ಹಣಕಾಸು ಉತ್ತಮವಾಗಿರಲಿದೆ. ಹೊಸ ಆಲೋಚನೆಗಳು ಬರಲಿದೆ.
ಮೀನ ರಾಶಿ: ನಿಮ್ಮ ಭಾವನೆಗಳು ಅತಿಯಾಗದಂತೆ ನಿಯಂತ್ರಿಸಿ. ಹೂಡಿಕೆಗೆ ಯೋಗ್ಯ ಸಮಯವಲ್ಲ. ಮನಸ್ಸು ಶಾಂತವಾಗಿರಲು ಧ್ಯಾನ ಮಾಡಿ.