64 ವರ್ಷಗಳ ಐತಿಹ್ಯಹೊಂದಿರುವ ಶಿರಸಿ ರೋಟರಿ ಕ್ಲಬ್ಬಿನ ಪ್ರಥಮ ಮಹಿಳಾ ಕಾರ್ಯದರ್ಶಿಯಾಗಿ ಸರಸ್ವತಿ ಎನ್ ರವಿ ಅವರು ಸೇವೆ ಸಲ್ಲಿಸಿದ್ದಾರೆ. ಸದ್ಯ ಅವರು 105 ವರ್ಷಗಳ ಇತಿಹಾಸಹೊಂದಿದ ಕೆಡಿಸಿಸಿ ಬ್ಯಾಂಕಿನ ಮೊದಲ ಮಹಿಳಾ ನಿರ್ದೇಶಕರಾಗುವ ಉತ್ಸಾಹದಲ್ಲಿದ್ದಾರೆ.
ಸಹಕಾರಿ ಸಂಸ್ಥೆ ಮಾತೃಸಂಸ್ಥೆಯಾದ ಕೆಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನಬಯಸಿ ಸರಸ್ವತಿ ಎನ್ ರವಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಯಾವುದೇ ಆಮೀಷ-ಒತ್ತಡಗಳಿಗೆ ಒಳಗಾಗದೇ ಕಾರ್ಯ ನಿರ್ವಹಿಸುವುದಾಗಿ ಅವರು ಘೋಷಿಸಿದ್ದಾರೆ. ರೋಟರಿ ಕ್ಲಬ್, ಕೆಡಿಸಿಸಿ ಬ್ಯಾಂಕ್ ಮಾತ್ರವಲ್ಲದೇ ಸರಸ್ವತಿ ಎನ್ ರವಿ ಅವರು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಗೆ ಉತ್ತರ ಕನ್ನಡ ಜಿಲ್ಲೆ ಪ್ರತಿನಿಧಿಸಿದ ಪ್ರಥಮ ಮಹಿಳಾ ನಿರ್ದೇಶಕರಾಗಿದ್ದಾರೆ.
ಬೆಳಗಾವಿ ವಿಭಾಗದಲ್ಲಿಯೇ ಪ್ರಥಮವಾಗಿ ರಚಿತವಾದ ಉತ್ತರ ಕನ್ನಡ ಜಿಲ್ಲಾ ಸೌಹಾರ್ದ ಸಹಕಾರಿಗಳ ಪ್ರಥಮ ಒಕ್ಕೂಟದ ಪ್ರಥಮ ಪ್ರವರ್ತಕ ನಿರ್ದೇಶಕರಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜ್ಯಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಥಮ ಮಹಿಳಾ ಸೌಹಾರ್ದ ಸಹಕಾರಿಯ ಪ್ರಥಮ ಅಧ್ಯಕ್ಷರಾಗಿಯೂ ಅವರು ಕೆಲಸ ಮಾಡಿದ್ದಾರೆ. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ 2017-2022ರ ಅವಧಿಯ ಆಡಳಿತ ಮಂಡಳಿಯ ಏಕೈಕ ಚುನಾಯಿತ ಮಹಿಳಾ ನಿರ್ದೇಶಕಿಯೂ ಆಗಿದ್ದಾರೆ. ಇದೆಲ್ಲದರ ಜೊತೆ ಸ್ಕೊಡವೆಸ್ ಸಂಸ್ಥೆಯ ಪ್ರಥಮ ಮಹಿಳಾ ಕಾರ್ಯದರ್ಶಿಯಾಗಿಯೂ ಅವರು ಸೇವೆಯಲ್ಲಿದ್ದಾರೆ.
ಹತ್ತು ಹಲವು ಸಂಘ-ಸOಸ್ಥೆಗಳಲ್ಲಿ ಪ್ರಥಮ ಮಹಿಳೆಯಾಗಿ ಗುರುತಿಸಿಕೊಂಡಿರುವ ಅವರು ಕೆಡಿಸಿಸಿ ಬ್ಯಾಂಕಿನ ಮೊದಲ ಮಹಿಳಾ ನಿರ್ದೇಶಕರಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಬ್ಯಾಂಕಿನ 105 ವರ್ಷಗಳ ಇತಿಹಾಸದಲ್ಲಿ ಒಬ್ಬ ಮಹಿಳೆ ಸಹ ನಿರ್ದೇಶಕರಾಗಿಲ್ಲ ಎಂಬ ವಿಷಯ ಸಹಕಾರಿ ವಲಯದ ಹಿರಿಯರಿಗೆ ಮನವರಿಕೆಯಾಗಿದ್ದು, `ಈ ಬಾರಿಯಾದರೂ ಮಹಿಳೆಗೆ ಅವಕಾಶ ನೀಡೋಣ’ ಎಂಬ ಮಾತು ದಟ್ಟವಾಗಿದೆ.
ಸದ್ಯ ಕೆಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ಎರಡು ಬಣಗಳಿಂದ ಪ್ರಚಾರ ಕಾರ್ಯ ನಡೆಯುತ್ತಿದೆ. ಆದರೆ, ಸರಸ್ವತಿ ಎನ್ ರವಿ ಅವರು ಈ ಎರಡೂ ಬಣಗಳಲ್ಲಿಲ್ಲ. ಅವರು ಸಂಪೂರ್ಣ ಸ್ವತಂತ್ರ ಅಭ್ಯರ್ಥಿಯಾಗಿ ನಿರ್ದೇಶಕ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದು, ಬ್ಯಾಂಕಿನ ಆಡಳಿತಾತ್ಮಕ ದೃಷ್ಠಿಯಿಂದ ಎಲ್ಲರ ಜೊತೆಯೂ ಉತ್ತಮ ನಂಟು ಹೊಂದಿದ್ದಾರೆ. ಮಹಿಳಾ ಪ್ರಾತಿನಿಧ್ಯ, ಎಲ್ಲಾ ಸಹಕಾರಿ ಸಂಘಗಳಿಗೂ ಸಮಾನ ಅವಕಾಶಗಳು ಸಿಗಬೇಕು ಎಂಬ ಸಾಮಾಜಿಕ ನ್ಯಾಯಕ್ಕಾಗಿ ಅವರು ಚುನಾವಣೆಗೆ ಸ್ಪರ್ಧಿಸಿರುವ ಬಗ್ಗೆ ಪ್ರಚಾರದ ಅವಧಿಯಲ್ಲಿ ಹೇಳುತ್ತಿದ್ದಾರೆ.
`ರಾಜ್ಯ ಮತ್ತು ರಾಷ್ಟಮಟ್ಟದ ಸಂಸ್ಥೆಗಳ ಸದಸ್ಯರಾಗಿ ಕಾರ್ಯನಿರ್ವಹಿಸಿದ ಅನುಭವದ ಹಿನ್ನೆಲೆಯಲ್ಲಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಡಳಿಗೆ ಸರಸ್ವತಿ ಎನ್ ರವಿ ಅವರ ಆಯ್ಕೆ ಯೋಗ್ಯ’ ಎಂಬುದು ಹೇಮಲತಾ ಚೌಗುಲೆ ಹಾಗೂ ಸ್ವಾತಿ ಶೆಟ್ಟಿ, ಲಲಿತಾ ಹೆಗಡೆ, ಭಾಗೀರತಿ ನಾಯ್ಕ ಅವರ ಮಾತು. `ಬ್ಯಾಂಕ್ ಆಡಳಿತ ವ್ಯವಸ್ಥೆಯಲ್ಲಿ ನಾರಿಶಕ್ತಿ ಪ್ರದರ್ಶನಕ್ಕೆ ಇದೊಂದು ಉತ್ತಮ ಅವಕಾಶ. ಸಹಕಾರಿ ದುರಿಣರು ಈ ಬಗ್ಗೆ ಚಿಂತಿಸಿ ಸರಸ್ವತಿ ಎನ್ ರವಿ ಅವರಿಗೆ ಅವಕಾಶ ಮಾಡಿಕೊಡಬೇಕು’ ಎಂಬುದು ಗೀತಾ ಹಣಬರ್, ವೀಣಾ ಮೊಗೇರ, ಸರೋಜಾ ಗಂಗೊಳ್ಳಿ ಅವರ ಮನವಿ.