ಹೊನ್ನಾವರದಲ್ಲಿನ ಅರಣ್ಯವಾಸಿಗಳ ಮೇಲೆ ಅರಣ್ಯಾಧಿಕಾರಿಗಳು ಪದೇ ಪದೇ ದೌರ್ಜನ್ಯ ಎಸಗುತ್ತಿದ್ದು, ಇದನ್ನು ವಿರೋಧಿಸಿ ಅಲ್ಲಿನವರು ಪ್ರತಿಭಟನೆ ನಡೆಸಿದ್ದಾರೆ. ತೀವ್ರ ಆಕ್ರೋಶವ್ಯಕ್ತಪಡಿಸಿದ ಪ್ರತಿಭಟನಾಕಾರರು ಪ್ರಶ್ನೆಗಳ ಸುರಿಮಳೆ ಸುರಿಸಿದ್ದು, ಅದಕ್ಕೆ ಉತ್ತರ ನೀಡಲಾಗದೇ ಅಧಿಕಾರಿಗಳು ತಬ್ಬಿಬ್ಬಾಗಿದ್ದಾರೆ.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಹೊನ್ನಾವರ ಉಪಅರಣ್ಯ ಸಂರಕ್ಷಣಾಧಿಕಾರಿ ಕಛೇರಿ ಎದುರು ಅರಣ್ಯವಾಸಿಗಳ ಸಮಸ್ಯೆ ಸ್ಪಂದಿಸಲು ಆಗ್ರಹಿಸಿ ಧರಣಿ ನಡೆದಿದೆ. ಉಪಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಹಾಗೂ ಭಟ್ಕಳ ವಿಭಾಗದ ಉಪ ವಿಭಾಗ ಅಧಿಕಾರಿ ಜೆ ಮಹೇಶ್ ಹೊನ್ನಾವರ ತಹಶೀಲ್ದಾರ ಪ್ರವೀಣ ಕರಾಂಡೆ, ಪೋಲಿಸ್ ಇನ್ಸೆಪೇಕ್ಟರ್ ಸಿದ್ದರಾಮೇಶ್ವರ ಅವರು ಪ್ರತಿಭಟನಾ ಸ್ಥಳದಲ್ಲಿ ಹಾಜರಿದ್ದಾರೆ. ಹೋರಾಟಗಾರ ರವೀಂದ್ರ ನಾಯ್ಕ ಅವರು ಸಾವಿರಾರು ಜನರ ಜೊತೆ ಕಚೇರಿಗೆ ಆಗಮಿಸಿ ತಮ್ಮ ಅಸಮಧಾನಹೊರಹಾಕಿದ್ದಾರೆ.
`ಕಾನೂನುಬಾಹಿರವಾಗಿ ಕಾನೂನು ವಿಧಿ ವಿಧಾನ ಅನುಸರಿಸದೇ ಅರಣ್ಯ ಹಕ್ಕು ಕಾಯಿದೆ ಉಲ್ಲಂಘಿಸಿ ರಾಜ್ಯ ಸರ್ಕಾರದ ಆದೇಶವನ್ನು ನಿರ್ಲಕ್ಷಿಸಿ ಅರಣ್ಯವಾಸಿಗಳಿಗೆ ನೀಡಿರುವ ಕಿರುಕುಳ ನೀಡಲಾಗುತ್ತಿದೆ’ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಅರಣ್ಯ ಸಿಬ್ಬಂದಿ ಮಾಡಿದ ದಬ್ಬಾಳಿಕೆಯ ಬಗ್ಗೆ ಫೋಟೋ-ವಿಡಿಯೋ ಪ್ರದರ್ಶನ ಮಾಡಿದ್ದಾರೆ. ಪ್ರಮುಖರಾದ ಮಹೇಶ ನಾಯ್ಕ ಕಾನಕ್ಕಿ, ಸುರೇಶ್ ಮೇಸ್ತ, ರಾಮ ಮರಾಠಿ ಯಲಕೊಟಗಿ, ಮಹಾಭಲೇಶ್ವರ ನಾಯ್ಕ, ರಾಜೇಶ್ ಮಿತ್ರ ನಾಯ್ಕ, ಮಂಜುನಾಥ ಮರಾಠಿ, ರಮಾನಂದ ನಾಯಕ, ಕಿರಣ ಮರಾಠಿ ದೇವನಳ್ಳಿ, ಸಂಕೇತ್ ನಾಯ್ಕ ಹಲಗೇರಿ ಸೇರಿ ಅನೇಕ ಪ್ರಶ್ನೆ ಕೇಳಿದ್ದಾರೆ.
ಧರಣಿಯ ನೇತೃತ್ವವನ್ನು ಗಣೇಶ ನಾಯ್ಕ ಚಂದಾವರ, ಜನಾರ್ಧನ್ ನಾಯ್ಕ ಚಂದಾವರ, , ಸಂಕೇತ್ ನಾಯ್ಕ ಯಲಕೊಟಗಿ, ವಿನೋದ ನಾಯ್ಕ ಯಲಕೊಟಗಿ, ಮಂಜು ನಾಯ್ಕ ಹೆರಾವಲಿ, ಗಣೇಶ್ ನಾಯ್ಕ ಹೆರಾವಲಿ, ವಿನಯ ನಾಯ್ಕ ಜನಕಡಕಲ್, ಮಾರುತಿ ನಾಯ್ಕ ಜಂಬೆಬೆಟ್ಟ, ಸುರೇಶ್ ಮೇಸ್ತ, ಅನಿತಾ ಲೋಪೀಸ್ ಮುಗ್ವಾ, ಸಂತಾನ ಫರ್ನಾಂಡಿಸ್ ಕಾಸರಗೋಡ, ರಜಾಕ್ ಪ್ರಭಾತ ನಗರ,ಮಂಜುನಾಥ ನಾಯ್ಕ ಚಂದಾವರ, ಸುರೇಶ್ ನಾಯ್ಕ ತುಂಬೊಳ್ಳಿ ವಹಿಸಿದ್ದರು. `ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳಿಗೆ ಸಾಗುವಳಿ ಕ್ಷೇತ್ರಕ್ಕೆ ಆತಂಕಗೊಳಿಸದAತೆ ಸ್ಪಷ್ಟ ವಿಚಾರಕ್ಕೆ ಅರಣ್ಯ ಸಿಬ್ಬಂಧಿಗಳು ಭದ್ದರಾಗಿದ್ದೇವೆ’ ಎಂದು ಈ ವೇಳೆ ಉಪಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ್ ಅವರು ಆಶ್ವಾಸನೆ ನೀಡಿದರು. `ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳಿಗೆ ಅರಣ್ಯ ಸಿಬ್ಬಂಧಿಗಳಿAದ ಆತಂಕ ಉಂಟಾದಲ್ಲಿ ಸಾಗುವಳಿ ಕ್ಷೇತ್ರದ ಪೋಟೋ, ಸಲ್ಲಿಸಿದ ಅರ್ಜಿ ಪ್ರತಿ ಮತ್ತು ಒಕ್ಕಲೆಬ್ಬಿಸುವ ಸಂಭAಧಿಸಿ ತೆಗೆದಂತಹ ಫೋಟೋ ಮತ್ತು ವಿಡಿಯೋ ದಾಖಲೆ ಸಹಿತ ದೂರು ಸಲ್ಲಿಸಿ’ ಎಂದು ಉಪವಿಭಾಗ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಹಾಗೂ ಉಪ ವಿಭಾಗದ ಅಧಿಕಾರಿಗಳಾದ ಜೆ ಮಹೇಶ್ ಅವರು ಸೂಚಿಸಿದರು.