ಯಲ್ಲಾಪುರದ ಇಡಗುಂದಿ ಬಳಿಯಿಂದ ಕಾಣೆಯಾಗಿದ್ದ ಶಶಾಂಕ ಸಿ ಎಚ್ ಅವರು ಸುರಕ್ಷಿತವಾಗಿದ್ದಾರೆ. mobiletime.in ವರದಿ ನೋಡಿದ ರವೀಂದ್ರ ನಗರದ ದೇವೇಂದ್ರ ಯಾಮಕೆ ಹಾಗೂ ಜಾವೀದ್ ಹನುಮಸಾಗರ್ ಸೇರಿ ಅವರನ್ನು ಪೊಲೀಸ್ ಠಾಣೆಗೆ ಬಿಟ್ಟಿದ್ದಾರೆ.
ಸೋಮವಾರ ಸಂಜೆ 5.30ಕ್ಕೆ ಶಶಾಂಕ ಸಿ ಎಚ್ ಅವರು ಕಾಣೆಯಾಗಿದ್ದರು. ರಾತ್ರಿ 9.5ಕ್ಕೆ Mobile Media Networkನ mobiletime.in ಈ ಬಗ್ಗೆ ವರದಿ ಪ್ರಸಾರ ಮಾಡಿತ್ತು. 9.30ರ ವೇಳೆಗೆ ಯಲ್ಲಾಪುರದ ರವೀಂದ್ರ ನಗರದ ದೇವೇಂದ್ರ ಯಾಮಕೆ ಅವರು ಈ ವರದಿ ನೋಡಿದರು. 9.40ರ ವೇಳೆಗೆ ದೇವೇಂದ್ರ ಯಾಮಕೆ ಹಾಗೂ ಜಾವೀದ್ ಹನುಮಸಾಗರ್ ಅವರು ದೇವಿ ದೇವಸ್ಥಾನದ ಬಳಿ ಶಶಾಂಕ ಸಿ ಎಚ್ ಅವರು ತಿರುಗಡುತ್ತಿರುವುದನ್ನು ನೋಡಿದರು.
ರವೀಂದ್ರ ಯಾಮಕೆ ಅವರು ಶಶಾಂಕ ಅವರನ್ನು ಮಾತನಾಡಿಸಿದ್ದು, `ಎಲ್ಲಿಗೆ ಹೋಗುವಿರಿ?’ ಎಂದು ಪ್ರಶ್ನಿಸಿದರು. ಆಗ, ಶಶಾಂಕ ಅವರು ತಮ್ಮ ಹೆಸರು ಹೇಳಿ ಶಿರಸಿಗೆ ಹೋಗುವುದಾಗಿ ತಿಳಿಸಿದರು. ದೇವೇಂದ್ರ ಯಾಮಕೆ ಹಾಗೂ ಜಾವೀದ್ ಹನುಮಸಾಗರ್ ಸೇರಿ ಶಶಾಂಕ ಸಿ ಎಚ್ ಅವರನ್ನು ಅಲ್ಲಿನ ಪೊಲೀಸ್ ಠಾಣೆಗೆ ಕರೆದೊಯ್ದರು. ಶಶಾಂಕ ಅವರನ್ನು ನೋಡಿದ ಪೊಲೀಸರು ನಾಯ್ಕನಕೆರೆ ವಸತಿ ನಿಲಯದ ಮುಖ್ಯಸ್ಥ ಚಂದ್ರಪ್ಪ ಅವರಿಗೆ ಫೋನ್ ಮಾಡಿದರು.
ಸದ್ಯ ಹಾಸ್ಟೇಲ್ ಸಿಬ್ಬಂದಿ ಪೊಲೀಸ್ ಠಾಣೆಗೆ ಹೋಗಿ ಶಶಾಂಕ ಅವರನ್ನು ಮಾತನಾಡಿಸಿದ್ದಾರೆ. ಶಶಾಂಕ ಅವರನ್ನು ಸುರಕ್ಷಿತವಾಗಿದ್ದಾರೆ.