ಕಾರವಾರದ ಕಿಮ್ಸ್ ಒಳಗೆ ಡಿ ದರ್ಜೆಯ ನೌಕರರಾಗಿ ಅಂಕೋಲಾದ ಸ್ಕಾಯ್‌ಲೈನ್ ಎಂಟರ್ ಪ್ರೈಸಸ್ ಮೂಲಕ ನೇಮಕವಾದ ಅಸ್ನೋಟಿಯ ಕಿಶನ್ ವಾರಿಕ್ ಅವರಿಗೆ ಎಜನ್ಸಿಯವರು ಸಮಯಕ್ಕೆ ಸರಿಯಾಗಿ ಸಂಬಳ ಕೊಟ್ಟಿಲ್ಲ. ಪ್ರಶ್ನಿಸಿದರೆ 2 ಲಕ್ಷ ರೂ ಮೌಲ್ಯದ ಡಿಸೇಲ್ ಕದ್ದ ಅಪವಾದ ಹೋರಿಸುತ್ತಿದ್ದು, ಇದರಿಂದ ಮನನೊಂದ ಅವರು ಆತ್ಮಹತ್ಯೆಯ ನಿರ್ಧಾರ ಮಾಡಿದ್ದಾರೆ!
ADVERTISEMENT
ಡಿ ದರ್ಜೆಯ ನೌಕರರಿಗೆ ಡ್ರೈವಿಂಗ್ ಕೆಲಸ ಕೊಟ್ಟಿದ್ದು ಮೊದಲ ಅಪರಾಧ. ಅದಾಗಿಯೂ ಸಮಯಕ್ಕೆ ಸರಿಯಾಗಿ ಸಂಬಳ ಕೊಡದೇ ಕೆಲಸಗಾರನ ಮೇಲೆ ಕಳ್ಳತನದ ಆರೋಪ ಹೋರಿಸಿದ್ದು ಮತ್ತೊಂದು ವಿವಾದ. ಡಿ ದರ್ಜೆಯ ನೌಕರರಾದ ಕಿಶನ್ ವಾರಿಕ್ ಅವರನ್ನು 2020ರಿಂದ ಜಿಲ್ಲಾ ಸರ್ಜನ್ ಅವರ ವಾಹನ ಚಾಲಕರಾಗಿ ದುಡಿಸಿಕೊಳ್ಳಲಾಗುತ್ತಿದೆ. ಸಂಬಳದ ವಿಷಯದಲ್ಲಿ ಸಾಕಷ್ಟು ಸಮಸ್ಯೆ ಅನುಭವಿಸಿದರೂ ಕಿಶನ್ ವಾರಿಕ್ ಅವರು ಅದನ್ನು ಸಹಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಅದಾಗಿಯೂ ಕಳೆದ ಮೂರು ತಿಂಗಳಿನಿoದ ಅವರಿಗೆ ಎಜನ್ಸಿಯವರು ವೇತನ ಕೊಡದೇ ಕಾಡಿಸುತ್ತಿದ್ದಾರೆ.
ADVERTISEMENT
ಸಂಬಳ ಆಗದ ಬಗ್ಗೆ ಕಿಶನ್ ವಾರಿಕ್ ಅವರು ಕಿಮ್ಸ ನಿರ್ದೇಶಕಿ ಡಾ ಪೂರ್ಣಿಮಾ ಅವರನ್ನು ಪ್ರಶ್ನಿಸಿದ್ದಾರೆ. ಆದರೆ, `ಎಜನ್ಸಿ ಮೂಲಕ ನೇಮಕವಾದವರಿಗೆ ವೇತನ ಪಾವತಿಸುವುದು ನಮಗೆ ಸಂಬoಧಿಸಿದಲ್ಲ’ ಎಂದು ಪೂರ್ಣಿಮಾ ಅವರು ಹೇಳುತ್ತಾರೆ. ಅಂಕೋಲಾದ ಸ್ಕಾಯ್‌ಲೈನ್ ಎಂಟರ್ ಪ್ರೈಸಸ್ ಎಜನ್ಸಿಯವರನ್ನು ಪ್ರಶ್ನಿಸಿದರೆ 2 ಲಕ್ಷ ರೂ ಮೌಲ್ಯದ ಡಿಸೇಲ್ ಕದ್ದಿದ್ದು, ಆ ಹಣ ಪಾವತಿಸಿದರೆ ಮೂರು ಕಾಸಿನ ಸಂಬಳ ಕೊಡುವುದಾಗಿ ಹೇಳುತ್ತಾರೆ. ಜಿಲ್ಲಾ ಸರ್ಜನ್ ವಾಹನಕ್ಕೆ 2 ಲಕ್ಷ ರೂ ಮೌಲ್ಯದ ಡಿಸೇಲ್ ಒಟ್ಟಿಗೆ ಹಾಕಲು ಸಾಧ್ಯವಿಲ್ಲ. ಸರ್ಕಾರಿ ವಾಹನದಲ್ಲಿನ ಡಿಸೇಲ್ ನಿಜವಾಗಿಯೂ ಕಳ್ಳತನ ನಡೆದಿದ್ದರೆ ಆ ಬಗ್ಗೆ ಪೊಲೀಸ್ ದೂರು ದಾಖಲಿಸಿದವರಿಲ್ಲ.
ADVERTISEMENT
ಕಿಶನ್ ವಾರಿಕ್ ಅವರಿಗೆ ಓದು-ಬರಹ ಬರಲ್ಲ. ಹೀಗಾಗಿ ಅವರು ಡಿ ದರ್ಜೆಯ ಕೆಲಸಕ್ಕೆ ಮಾತ್ರ ಯೋಗ್ಯರಾಗಿದ್ದು, ವಾಹನ ಓಡಿಸುವ ಕೌಶಲ್ಯ ಹೊಂದಿದ್ದಾರೆ. ಆದರೆ, ಸರ್ಕಾರಿ ವಾಹನದ ಲಾಗ್ ಬುಕ್ ಬರೆಯುವುದು-ಮೀಟರ್ ಓದುವುದು ಅವರಿಗೆ ಅರಿವಿಲ್ಲ. ಹೀಗಿರುವಾಗ ಅವರ ಮೇಲೆ ಬಂದ 2 ಲಕ್ಷ ರೂ ಮೌಲ್ಯದ ಅಪವಾದವೇ ದೊಡ್ಡ ಹೊರೆಯಾಗಿದೆ. ಸಂಬಳ ಸಿಗದ ಕಾರಣ ದೀಪಾವಳಿ ಆಚರಣೆಯೂ ಕತ್ತಲೆಯಿಂದ ಕೂಡಿದೆ. ಈ ನಡುವೆ ಕಿಶನ್ ವರಕ್ ಅವರನ್ನು ಏಕಾಏಕಿ ಕೆಲಸದಿಂದಲೇ ತೆಗೆಯಲಾಗಿದೆ.
ಆತ್ಮಹತ್ಯೆಗೆ ನಿರ್ಧರಿಸಿದ್ದ ಕಿಶನ್ ವರಕ್ ಅವರು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರನ್ನು ಭೇಟಿ ಮಾಡಿದ್ದು, ಮಾಧವ ನಾಯಕ ಅವರು ಕಾರ್ಮಿಕ ನಿರೀಕ್ಷಕರಿಗೆ ಫೋನ್ ಮಾಡಿದ್ದಾರೆ. ಕಾರ್ಮಿಕ ನಿರೀಕ್ಷಕ ವೆಂಕಟೇಶ ಬಾಬು ಅವರು ಕಿಶನ್ ವರಕ್ ಅವರಿಗೆ ಸಮಾಧಾನ ಮಾಡಿ ಧೈರ್ಯ ಹೇಳಿದ್ದಾರೆ. ಹೀಗಾಗಿ ಕಿಶನ್ ವರಕ್ ಅವರು ಆತ್ಮಹತ್ಯೆ ನಿರ್ಧಾರದಿಂದ ಹಿಂದೆ ಸರಿದಿದ್ದು, ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ.